ದೆಹಲಿಯ ಗುಲಾಬಿ ಮಾರ್ಗದ ಐದು ಮೆಟ್ರೋ ನಿಲ್ದಾಣಗಳು ಬಂದ್
ನವದೆಹಲಿ, ಫೆಬ್ರವರಿ 25: ದೆಹಲಿಯಲ್ಲಿ ನಡೆಯುತ್ತಿರುವ ಪೌರತ್ವ ನಿಷೇಧ ಕಾಯ್ದೆ ವಿರೋಧಿ ಹಿಂಸಾಚಾರದ ಪರಿಣಾಮ ಗುಲಾಬಿ ಮಾರ್ಗದ ಐದು ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.
ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಜಫ್ರಾಬಾದ್, ಮೌಜ್‌ಪುರ್-ಬಾಬರ್‌ಪುರ್, ಗೋಕುಲ್‌ಪುರಿ, ಜೋಹ್ರಿ ಎನ್‌ಕ್ಲೇವ್ ಹಾಗೂ ಶಿವ ವಿಹಾರ ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ.
ಹೆಡ್ ಕಾನ್‌ಸ್ಟೆಬಲ್ ಸೇರಿದಂತೆ ಏಳು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಇನ್ನಷ್ಟು ದುರ್ಘಟನೆಗೆ ಅವಕಾಶ ನೀಡಬಾರದು ಎನ್ನುವ ಕಾರಣಕ್ಕೆ ಡಿಎಂಆರ್‌ಸಿ ಈ ನಿರ್ಧಾರ ತೆಗೆದುಕೊಂಡಿದೆ.

ಈಶಾನ್ಯ ದೆಹಲಿಯಲ್ಲಿ ಸಿಆರ್‌ಪಿಸಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮೌಜ್‌ಪುರ್ , ಬ್ರಹ್ಮಪುರಿಯಲ್ಲಿ ಕಲ್ಲು ತೂರಾಟ ನಡೆದಿದೆ. ಶಾಸಕರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತುರ್ತು ಸಭೆಯನ್ನು ಕರೆದಿದ್ದರು. ಅಗತ್ಯಬಿದ್ದರೆ ಸೇನೆಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications