ದೆಹಲಿ: ಒಂದೇ ಕುಟುಂಬದ ನಾಲ್ವರು ಮಹಿಳೆಯರು ಅನುಮಾನಾಸ್ಪದ ಸಾವು
ನವದೆಹಲಿ, ಅಕ್ಟೋಬರ್ 07 : ದೆಹಲಿಯಲ್ಲಿ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿದಂತೆ ಸೆಕ್ಯೂರಿಟಿ ಗಾರ್ಡ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
#Visuals Delhi: 5 people, including 4 women, found dead in Shahdara's Mansarovar Park. Police at the spot. pic.twitter.com/T269mafB4Z
— ANI (@ANI) October 7, 2017
ಮೃತಪಟ್ಟವರನ್ನು ಉರ್ಮಿಳಾ (65), ಸಂಗೀತ ಗುಪ್ತಾ (43), ನಪುರ್ ಜಿಂದಾಲ್ (35), ಅಂಜಲಿ ಜಿಂದಲ್ (33) ಮತ್ತು ಭದ್ರತಾ ಸಿಬ್ಬಂದಿ ರಾಕೇಶ್ (50) ಎಂದು ಗುರುತಿಸಲಾಗಿದೆ. ಪೂರ್ವ ದೆಹಲಿಯ ಮಾನಸ ಸರೋವರ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಆಸ್ತಿಗಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications