24 ಗಂಟೆಯಲ್ಲಿ 3604 ಕೇಸ್ ಪತ್ತೆ, ಟಾಪ್ ಐದು ರಾಜ್ಯಗಳ ವಿವರ

ದೆಹಲಿ, ಮೇ 12: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70 ಸಾವಿರ ಗಡಿದಾಟಿದೆ. ಕಳೆದ 24 ಗಂಟೆಯಲ್ಲಿ 3604 ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ. 87 ಸಾವು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 70756ಕ್ಕೆ ಏರಿಕೆಯಾಗಿದೆ. ಈವರೆಗೂ 2293 ಜನರು ಸೋಂಕಿನಿಂದ ಹೊರಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ.

ಕೇಂದ್ರದ ಅಂಕಿ ಅಂಶದ ಪ್ರಕಾರ ಇನ್ನು 46008 ಪ್ರಕರಣಗಳು ಸಕ್ರಿಯವಾಗಿದೆ. 22454 ಜನರು ಕೊವಿಡ್ ಮಹಾಮಾರಿಯಿಂದ ಚೇತರಿಕೆ ಕಂಡಿದ್ದಾರೆ. ಇನ್ನು ಕಳೆದ 24 ಗಂಟೆಯಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಕೇಸ್ ವರದಿಯಾಗಿದೆ? ಮುಂದೆ ಓದಿ....

ಮಹಾರಾಷ್ಟ್ರದಲ್ಲಿ ಗರಿಷ್ಠ

ಮಹಾರಾಷ್ಟ್ರದಲ್ಲಿ ಗರಿಷ್ಠ

ದೇಶದ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯ ಮಹಾರಾಷ್ಟ್ರದಲ್ಲಿ ನಿನ್ನೆ 1230 ಕೇಸ್ ದಾಖಲಾಗಿದೆ. 36 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23,401ಕ್ಕೆ ಏರಿಕೆಯಾಗಿದೆ. 4,789 ಜನರು ಚೇತರಿಕೆ ಕಂಡಿದ್ದಾರೆ. 868 ಜನರು ಈವರೆಗೂ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಗುಜರಾತ್‌ನಲ್ಲಿ ಕೊರೊನಾ ರಣಕೇಕೆ

ಗುಜರಾತ್‌ನಲ್ಲಿ ಕೊರೊನಾ ರಣಕೇಕೆ

ಗುಜರಾತ್‌ನಲ್ಲಿ ನಿನ್ನೆ 347 ಹೊಸ ಪ್ರಕರಣಗಳು ದಾಖಲಾಗಿದೆ. 20 ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಒಟ್ಟು ರಾಜ್ಯದ ಅಂಕಿ ಅಂಶ ನೋಡುವುದಾದರೇ, 8541 ಕೇಸ್ ಕಾಣಿಸಿಕೊಂಡಿದೆ. 2780 ಜನರು ಚೇತರಿಕೆ ಕಂಡಿದ್ದಾರೆ. 5013 ಜನರು ಸಾವನ್ನಪ್ಪಿದ್ದಾರೆ.

ತಮಿಳುನಾಡಿನಲ್ಲಿ ಅಲ್ಲೊಲ ಕಲ್ಲೋಲ

ತಮಿಳುನಾಡಿನಲ್ಲಿ ಅಲ್ಲೊಲ ಕಲ್ಲೋಲ

ತಮಿಳುನಾಡಿನಲ್ಲಿ ನಿನ್ನೆ ಒಂದೇ ದಿನ 798 ಕೇಸ್ ಪತ್ತೆಯಾಗಿದೆ. 6 ಜನ ಮಾತ್ರ ಸಾವನ್ನಪ್ಪಿದ್ದಾರೆ. ಚೆನ್ನೈನಲ್ಲಿ ಅತಿ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8002ಕ್ಕೆ ಏರಿಕೆಯಾಗಿದೆ. 2051 ಜನರು ಚೇತರಿಕೆ ಕಂಡಿದ್ದು, 53 ಜನರು ಮೃತಪಟ್ಟಿದ್ದಾರೆ.

ರಾಷ್ಟ್ರ ರಾಜಧಾನಿ

ರಾಷ್ಟ್ರ ರಾಜಧಾನಿ

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಅಟ್ಟಹಾಸ ಕಡಿಮೆಯಾಗಿಲ್ಲ. ನಿನ್ನೆ ಒಂದೇ ದಿನ 310 ಹೊಸ ಕೇಸ್ ದಾಖಲಾಗಿದೆ. ಯಾವುದೇ ಸಾವು ಸಂಭವಿಸಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ದೆಹಲಿಯಲ್ಲು ಒಟ್ಟು 7233 ಕೇಸ್ ದಾಖಲಾಗಿದೆ. 2129 ಜನರು ಚೇತರಿಕೆ ಕಂಡಿದ್ದಾರೆ.

ಐದನೇ ರಾಜ್ಯ ರಾಜಸ್ಥಾನ

ಐದನೇ ರಾಜ್ಯ ರಾಜಸ್ಥಾನ

ರಾಜಸ್ಥಾನದಲ್ಲಿ ನಿನ್ನೆ 174 ಜನರಿಗೆ ಸೋಂಕು ಪತ್ತೆಯಾಗಿದೆ. ಐದು ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4035ಕ್ಕೆ ಏರಿಕೆಯಾಗಿದ್ದು, ಈವರೆಗೂ 115 ಜನರು ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+