ದೆಹಲಿ: ಶೇ.29ರಷ್ಟು ಮಂದಿಯಲ್ಲಿ ಕೊವಿಡ್ 19 ವಿರುದ್ಧದ ಪ್ರತಿಕಾಯ ವೃದ್ಧಿ

ನವದೆಹಲಿ, ಆಗಸ್ಟ್ 20: ದೆಹಲಿಯಲ್ಲಿ ಶೇ.29ರಷ್ಟು ಮಂದಿ ಕೊರೊನಾ ಸೋಂಕಿಗೆ ಪ್ರತಿಕಾಯವನ್ನು ಹೊಂದಿದ್ದಾರೆ ಎಂಬುದು ಸೆರೋಲಾಜಿಕಲ್ ಸಮೀಕ್ಷೆಯಲ್ಲ ಬಹಿರಂಗಗೊಂಡಿದೆ.

Recommended Video

      ಮತ್ತೊಂದು ಹೀನ ಘಟನೆಗೆ ಸಾಕ್ಷಿಯಾದ ಅಕ್ಷರಸ್ಥರ ನಾನು ಕೇರಳ | Oneindia Kannada

      ಇದು ಎರಡನೇ ಸಮೀಕ್ಷೆಯಾಗಿದೆ. ದೆಹಲಿಯಲ್ಲಿ 29.1 ರಷ್ಟು ಅಂದರೆ 58 ಲಕ್ಷ ಮಂದಿ ಆಂಟಿಬಾಡಿಗಳನ್ನು ಹೊಂದಿದ್ದಾರೆ ಎಂದು ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.

      ಶೇ.40ರಷ್ಟು ಮಂದಿಯಲ್ಲಿ ಪ್ರತಿಕಾಯಗಳು ವೃದ್ಧಿಯಾದಾಗ ಹರ್ಡ್ ಇಮ್ಯುನಿಟಿ ವೃದ್ಧಿಯಾಗಲು ಆರಂಭಿಸುತ್ತದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರ ದೇಹದಲ್ಲಿ ಈ ಪ್ರತಿಕಾಯಗಳು 7-8 ತಿಂಗಳುಗಳ ಕಾಲ ಇರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

      29 Percent Of Delhi Has Antibodies For Coronavirus

      ಕಳೆದ ತಿಂಗಳು ಸೆರೋಲಾಜಿಕಲ್ ಸಂಸ್ಥೆಯು ಸಮೀಕ್ಷೆಯನ್ನು ಕೈಗೊಂಡಿತ್ತು. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಮತ್ತೆರಡು ಸಮೀಕ್ಷೆ ನಡೆಯಲಿದೆ.

      ರಕ್ತದ ಮಾದರಿಯನ್ನು ತೆಗೆದುಕೊಂಡು ಹೋಗಿ, ಪ್ರತಿಕಾಯಗಳ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣವಿಲ್ಲದೆ, ರೋಗ ಬಂದು ಹಾಗೆಯೇ ಗುಣಮುಖರಾಗಿರುವ ಕುರಿತು ಕೂಡ ಮಾಹಿತಿ ಲಭ್ಯವಾಗುತ್ತದೆ. ಈ ಬಾರಿ 11 ಜಿಲ್ಲೆಗಳಿಂದ 15000 ಮಾದರಿಯನ್ನು ಪಡೆದುಕೊಳ್ಳಲಾಗಿತ್ತು. ಪ್ರತಿ ತಿಂಗಳ ಮೊದಲ ವಾರದಲ್ಲಿ ಈ ಸಮೀಕ್ಷೆ ನಡೆಸುವುದಾಗಿ ಸರ್ಕಾರ ತಿಳಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+