ನವದೆಹಲಿಯಲ್ಲಿ ಬಿಜೆಪಿ ಸೇರಿದ ಗೋವಾದ 10 ಕಾಂಗ್ರೆಸ್ ಶಾಸಕರು
ನವದೆಹಲಿ, ಜುಲೈ 11: ನಿರೀಕ್ಷೆಯಂತೆಯೇ ಗೋವಾದ 10 ಕಾಂಗ್ರೆಸ್ ಶಾಸಕರು ಗುರುವಾರ ದೆಹಲಿಯಲ್ಲಿ ಬಿಜೆಪಿ ಸೇರಿದರು.
ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಸಮ್ಮುಖದಲ್ಲಿ ಶಾಸಕರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.
ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಅಪಾಯ ಎದುರಾಗಿರುವ ಹೊತ್ತಲ್ಲೇ ಗೋವಾದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುವಥ ಪರಿಸ್ಥಿತಿ ಎದ್ದಿದ್ದು, ಬುಧವಾರ ರಾತ್ರಿ ಕಾಂಗ್ರೆಸ್ ನ ಹತ್ತು ಶಾಸಕರು ಇದ್ದಕ್ಕಿದ್ದಂತೆಯೇ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಒಟ್ಟು ಶಾಸಕರ ಸಂಖ್ಯೆಯ ಮೂರನೇ ಎರಡರಷ್ಟು ಭಾಗದಷ್ಟು ಶಾಸಕರು ಅಂದ್ರೆ 15 ರಲ್ಲಿ10 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿರುವುದರಿಂದ ರಾಜೀನಾಮೆ ನೀಡುವ ಅತಗತ್ಯವೂ ಇಲ್ಲ, ಪಕ್ಷಾಂತರ ನಿಷೇಧ ಕಾಯ್ದೆಯೂ ಅವರಿಗೆ ಅನ್ವಯವಾಗುವುದಿಲ್ಲ!

ಗೋವಾ ವಿಧಾನಸಭೆ ಶಾಸಕರ ಬಲಾಬಲ ಒಟ್ಟು 40 ಇದೀಗ ಕಾಂಗ್ರೆಸ್ ನ ಹತ್ತು ಶಾಸಕರು ಸೇರಿದ್ದರಿಂದ ಬಿಜೆಪಿ ಒಟ್ಟು 29 ಸ್ಥಾನಗಳನ್ನು ಪಡೆದು ಸರ್ಕಾರವನ್ನು ಸುಭದ್ರವಾಗಿಸಿಕೊಂಡಿದೆ.












Click it and Unblock the Notifications