ಅಪ್ಪನ ಜೊತೆ ಚಿಂತಾಕ್ರಾಂತರಾಗಿ ಕುಳಿತಿದ್ದ ಸಿದ್ಧಾರ್ಥ್; ವೈರಲ್ ಆಗಿದೆ ಈ ಚಿತ್ರ
ಮೈಸೂರು, ಆಗಸ್ಟ್ 1: ಉದ್ಯಮಿ ಹಾಗೂ ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ಅಂತ್ಯಕ್ರಿಯೆ ಬಳಿಕ ಅವರ ತಂದೆ ಜೊತೆ ಅವರಿದ್ದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆಯೇ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಸಿದ್ಧಾರ್ಥ್ ತಂದೆ ಗಂಗಯ್ಯ ಹೆಗ್ಡೆ ಅವರನ್ನು ದಾಖಲಿಸಲಾಗಿತ್ತು. ಸಿದ್ಧಾರ್ಥ್ ಆಗಾಗ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸುತ್ತಿದ್ದರು. ಆ ಸಂದರ್ಭದಲ್ಲಿ ತೆಗೆದಿದ್ದು ಎನ್ನಲಾದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
ಫೋಟೋದಲ್ಲಿ ಅವರ ತಂದೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು, ಪಕ್ಕದಲ್ಲಿ ಸಿದ್ಧಾರ್ಥ್ ಕುಳಿತು ಚಿಂತಿಸುತ್ತಿರುವಂತೆ ಕಾಣುತ್ತಿದೆ. ಈ ಫೋಟೋ ಎಲ್ಲರ ಮನಕಲಕುತ್ತಿದೆ.

ಗಂಗಯ್ಯ ಹೆಗ್ಡೆ ಅವರು ಕಳೆದ ಕೆಲವು ದಿನಗಳಿಂದ ಕೋಮಾದಲ್ಲಿದ್ದಾರೆ. ಗಂಗಯ್ಯ ಹೆಗ್ಡೆ ದಾಖಲಾತಿಯನ್ನು ಮೈಸೂರಿನ ಗೋಪಾಲಗೌಡ ಆಸ್ಪತ್ರೆ ಸಿಬ್ಬಂದಿ ಗೌಪ್ಯವಾಗಿಟ್ಟಿದ್ದು, ಮಾಧ್ಯಮಗಳಿಗೆ ತಿಳಿಸಿಲ್ಲ. ಗೋಪಾಲಗೌಡ ಆಸ್ಪತ್ರೆ ಮಾಲೀಕರು ಎಸ್.ಎಂ.ಕೃಷ್ಣ ಅವರ ಸಂಬಂಧಿಕರಾಗಿದ್ದು ಇದೇ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿದೆ.
ತಂದೆಯ ಆರೋಗ್ಯ ವಿಚಾರಿಸಲು ಸಿದ್ಧಾರ್ಥ್ ಮೈಸೂರಿಗೆ ಆಗಾಗ ಬರುತ್ತಿದ್ದರು. ಕಳೆದ ಭಾನುವಾರ, ಅಂದರೆ ಜುಲೈ 28ರಂದೂ ಇಲ್ಲಿಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.












Click it and Unblock the Notifications