ನೀತಿ ಸಂಹಿತೆ ಹಿನ್ನೆಲೆ; ಶಾಸಕ ಸಾ.ರಾ. ಮಹೇಶ್ ಪತ್ರಿಕಾಗೋಷ್ಠಿಗೆ ಬ್ರೇಕ್

ಮೈಸೂರು, ಡಿಸೆಂಬರ್ 4: ಚುನಾವಣಾ ನೀತಿ ಸಂಹಿತೆ ಅಡ್ಡಿ ಹಿನ್ನೆಲೆ ಮಾಜಿ ಸಚಿವ ಸಾ.ರಾ.ಮಹೇಶ್ ಸುದ್ದಿಗೋಷ್ಠಿಯನ್ನು ಮೊಟಕುಗೊಳಿಸಲಾಯಿತು.

ರಮಾ ವಿಲಾಸ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ಕರೆಯಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ನಾಯಕರು ಸುದ್ದಿಗೋಷ್ಠಿ ಹಾಗೂ ಬಹಿರಂಗ ಹೇಳಿಕೆಯನ್ನು ನೀಡದಂತೆ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಸಂದೇಶ ರವಾನಿಸಿದರು.

ಮಾತ್ರವಲ್ಲದೆ, ನಿನ್ನೆ ಸಂಜೆ ‌(ಡಿ.3) 6 ಗಂಟೆಯಿಂದ ಮತದಾನ ಮುಕ್ತಾಯವಾಗುವವರೆಗೂ ರಾಜಕೀಯ ಮುಖಂಡರು ಪತ್ರಿಕಾಗೋಷ್ಠಿ ನಡೆಸುವುದಾಗಲಿ, ಮಾಧ್ಯಮಗಳಿಗೆ ಸಂದರ್ಶನ ನೀಡುವುದಾಗಲಿ ಮಾಡುವುದು ಪ್ರಜಾಪ್ರಾತಿನಿದ್ಯ ಕಾಯ್ದೆ 1951ರ ಸೆಕ್ಷನ್ 126ರ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Sa Ra Mahesh Cancelled Press Conference On Behalf Of Election Code Of Conduct

ಮಾಧ್ಯಮಗಳು ಸಹ‌ ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಈ ಕಾಯ್ದೆ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಶಾಸಕ ಸಾ.ರಾ.ಮಹೇಶ್ ಯಾವುದೇ ಪ್ರತಿಕ್ರಿಯೆ ನೀಡದೇ ಸುದ್ದಿಗೋಷ್ಠಿ ರದ್ದುಗೊಳಿಸಿದರು. ಅಲ್ಲದೆ ಚುನಾವಣೆ ಬಳಿಕ ಮಾತನಾಡುವುದಾಗಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+