ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಸ್ಪರ ಕಾಲೆಳೆದುಕೊಂಡ ಪ್ರತಾಪ್ ಸಿಂಹ- ಸಚಿವ ವೆಂಕಟರಮಣಪ್ಪ

|
Google Oneindia Kannada News

ಮೈಸೂರು, ನವೆಂಬರ್ 28 : ಬರೀ ಭಾಷಣಕಾರರಾದರೇ ಸಾಲದು. ಮಾತಿಗಿಂತ ಕೃತಿ ಲೇಸು ಎಂಬುದನ್ನು ಅರಿತು ಕೆಲಸ ಮಾಡಬೇಕು ಎಂದು ವೇದಿಕೆಯಲ್ಲೇ ರಾಜ್ಯ ಕಾರ್ಮಿಕ ಸಚಿವ ವೆಂಕಟರಮಣಪ್ಪಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನಲ್ಲಿ ನೂತನ ಇಎಸ್ ಐ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದ ವೇಳೆ ವೇದಿಕೆಯಲ್ಲೇ ನೇರವಾಗಿ ತಮ್ಮ ಕಾಲೆಳೆದ ಸಚಿವ ವೆಂಕಟರಮಣ್ಣಪ್ಪಗೆ ಸಂಸದ ಪ್ರತಾಪ್ ಸಿಂಹ ತಮ್ಮದೇ ದಾಟಿಯಲ್ಲಿ ತಿರುಗೇಟು ನೀಡಿದರು.

ಮೈಸೂರಿನಲ್ಲಿ ನ.28ರಂದು ಅತ್ಯಾಧುನಿಕ ಇಎಸ್ಐ ಆಸ್ಪತ್ರೆ ಲೋಕಾರ್ಪಣೆಮೈಸೂರಿನಲ್ಲಿ ನ.28ರಂದು ಅತ್ಯಾಧುನಿಕ ಇಎಸ್ಐ ಆಸ್ಪತ್ರೆ ಲೋಕಾರ್ಪಣೆ

ಕಾರ್ಯಕ್ರಮದಲ್ಲಿ ನಡೆದಿದ್ದೇನು ?

ಆಸ್ಪತ್ರೆ ಉದ್ಘಾಟನೆಯಾದ ಬಳಿಕ ಮೊದಲು ಮಾತನಾಡಿದ ಸಂಸದ ಪ್ರತಾಪ್ ಸಿಂಹ , 2012ರಲ್ಲಿ ಸಂಸದನಾದಾಗ ಈ ಆಸ್ಪತ್ರೆಗೆ ಹಣ ಬಿಡುಗಡೆಗೊಂಡಿದ್ದರೂ ಸರಿಯಾಗಿ ಕೆಲಸ ಮಾಡದೆ ನಿಂತಿತ್ತು. ಹೀಗಾಗಿ ಮತ್ತೆ 9 ಕೋಟಿ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಿದೆ. ನೂತನ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ರಾಜ್ಯದ ಸಚಿವರು ಗಮನಹರಿಸಿಬೇಕು.

Pratap Simha-Venkataramanappa blamed each other

ಜೊತೆಗೆ ಮೈಸೂರಿನ ಇಎಸ್ ಐ ಆಸ್ಪತ್ರೆ ಕೇಂದ್ರ ಸರ್ಕಾರದ ಸುಪರ್ದಿಗೆ ವಹಿಸಿಕೊಟ್ಟರೆ ಉತ್ತಮ ರೀತಿಯಲ್ಲಿ ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.

ಇದಾದ ನಂತರ ಕಾರ್ಮಿಕ ಸಚಿವ ವೆಂಕಟರಮಣಪ್ಪ ಭಾಷಣ ಆರಂಭಿಸಿ,ಕಾರ್ಮಿಕ ಇಲಾಖೆಯಲ್ಲಿ ನಾವು ಸಾಕಷ್ಟು ಬದಲಾವಣೆ ತಂದಿದ್ದೇವೆ. ಈ ನಡುವೆ ಬಹಳಷ್ಟು ವೈದ್ಯರ ಕೊರತೆ ಇದ್ದು, ನರ್ಸ್ ಗಳು ಫಾರ್ಮಾಸಿಸ್ಟ್ ಗಳ ಕೊರತೆಯನ್ನ ನೀಗಿಸುವಂತೆ ಕೆಪಿಎಸ್ ಸಿಗೆ ತಿಳಿಸಿದ್ದೇವೆ ಎಂದರು.

ಶಬರಿಮಲೆ ಅಯ್ಯಪ್ಪ ನೈತಿಕ ಬ್ರಹ್ಮಚಾರಿ, ಹೀಗಾಗಿ ಮಹಿಳೆಯರಿಗೆ ಪ್ರವೇಶವಿಲ್ಲ:ಪ್ರತಾಪ್ ಸಿಂಹಶಬರಿಮಲೆ ಅಯ್ಯಪ್ಪ ನೈತಿಕ ಬ್ರಹ್ಮಚಾರಿ, ಹೀಗಾಗಿ ಮಹಿಳೆಯರಿಗೆ ಪ್ರವೇಶವಿಲ್ಲ:ಪ್ರತಾಪ್ ಸಿಂಹ

ಇದೇ ವೇಳೆ ಪ್ರತಾಪ್ ಸಿಂಹ ಕುರಿತು ನೇರವಾಗಿ ಮಾತನಾಡಿದ ವೆಂಕಟರಮಣಪ್ಪ, ಪ್ರತಾಪ್ ಸಿಂಹ ಕೇವಲ ಮಾತನಾಡಬಾರದು. ಹೇಳಿದ ಮಾತು ಕಾರ್ಯಗತವಾಗಬೇಕು. ಕೇವಲ ಭಾಷಣಕಾರರಾಗಬಾರದು ಎಂದು ವೇದಿಕೆಯಲ್ಲೇ ಚಾಟಿ ಬೀಸಿದರು.

Pratap Simha-Venkataramanappa blamed each other

ವೆಂಕಟರಮಣಪ್ಪ ಭಾಷಣ ಮಗಿದ ಬಳಿಕ ಹೇಳಿಕೆಗೆ ಗರಂ ಆದ ಸಂಸದ ಪ್ರತಾಪ್ ಸಿಂಹ ಮತ್ತೆ ಮೈಕ್ ಮುಂದೆ ನಿಂತು ವೇದಿಕೆಯಲ್ಲೇ ಸಚಿವರನ್ನ ತರಾಟೆ ತೆಗೆದುಕೊಂಡರು. ನಾನು ಹೇಳಿದಂತೆ ಮಾಡಿದ್ದೇನೆ. ಮೈಸೂರಲ್ಲಿ ಬಂಗಲೆ ಕಟ್ಟಲು ಅಥವಾ ಕೊಡಗಿನಲ್ಲಿ ಎಸ್ಟೇಟ್ ಖರೀದಿಸಲು ಬಂದಿಲ್ಲ ಎಂದ ಖಾರವಾಗಿ ನುಡಿದರು.

ಮೈಸೂರಿನಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ತೆರೆಯುವುದಾಗಿ ಹೇಳಿದ್ದೆ. ಬ್ರಾಂಡ್ ನ್ಯೂ ಎರ್ ಪೋರ್ಟ್ ನಿರ್ಮಾಣಕ್ಕೆ 700 ಕೋಟಿ ಬಿಡುಗಡೆ ಮಾಡಿಸಿದ್ದೇನೆ. ಮೈಸೂರು - ಮಡಿಕೇರಿ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆಗೊಳಿಸಲಾಗಿದೆ. ಹೀಗಾಗಿ ಮೊದಲು ರಾಜ್ಯ ಸರ್ಕಾರ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಲಿ ಎಂದು ಸಚಿವ ವೆಂಕಟರಮಣಪ್ಪಗೆ ತಿರುಗೇಟು ನೀಡಿದರು.

ಪ್ರತಾಪ್ ಸಿಂಹ ವಿರುದ್ಧವೇ ತಿರುಗಿ ಬಿದ್ದ ಬಿಜೆಪಿ ಒಕ್ಕಲಿಗ ಮುಖಂಡರು?ಪ್ರತಾಪ್ ಸಿಂಹ ವಿರುದ್ಧವೇ ತಿರುಗಿ ಬಿದ್ದ ಬಿಜೆಪಿ ಒಕ್ಕಲಿಗ ಮುಖಂಡರು?

ಈ ವೇಳೆ ಸಂಸದರಾದ ಧೃವನಾರಾಯಣ್, ಶಾಸಕ ತನ್ವೀರ್ ಸೇಠ್, ಬಿಜೆಪಿ ಶಾಸಕ ಎಲ್ ನಾಗೇಂದ್ರ, ಅಶ್ವಿನ್ ಕುಮಾರ್ , ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಹಿಮಾ ಸುಲ್ತಾನ್ ಭಾಗಿಯಾಗಿದ್ದರು.

English summary
MP Pratap Simha-Minister Venkataramanappa blamed each other during the inaugural ceremony of the new ESI Hospital in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X