ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ:ಮತದಾನಕ್ಕೆ ಸಕಲ ಸಿದ್ಧತೆ
ಮೈಸೂರು, ಏಪ್ರಿಲ್ 15:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಮೈಸೂರು ಜಿಲ್ಲಾಡಳಿತ ಸಜ್ಜಾಗಿದ್ದು, ಸೋಮವಾರ ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಚುನಾವಣೆ ಸಂಬಂಧ ಸಂಪೂರ್ಣ ಮಾಹಿತಿ ನೀಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಏ.18 ರಂದು ಲೋಕಸಭಾ ಚುನಾವಣೆ ನಡೆಯಲಿದೆ. ಮೈಸೂರು ವಿಧಾನಸಭಾ ಕ್ಷೇತ್ರದಲ್ಲಿ 2187 ಮತಗಟ್ಟೆಗಳಲ್ಲಿ ಪುರುಷ ಮತದಾರರು 9,44,819, ಮಹಿಳಾ ಮತದಾರರು 9, 50,087, ಇತರೆ 150 ಸೇರಿದಂತೆ ಒಟ್ಟಾರೆ 18,95,056 ಮತದಾರರಿದ್ದಾರೆ. ಇದುವರೆಗೂ ಮತಗಟ್ಟೆಗಳಿಗೆ 2,406 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 2,406 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 4,812 ಮತದಾನಾಧಿಕಾರಿಗಳ ನೇಮಕಗೊಂಡಿದ್ದಾರೆ.
ಪ್ರತಿ ಮತಗಟ್ಟೆಗೆ 1 ಅಧ್ಯಕ್ಷಾಧಿಕಾರಿ, 1 ಸಹಾಯಕ ಅಧ್ಯಕ್ಷಾಧಿಕಾರಿ, ಇಬ್ಬರು ಮತದಾನಾಧಿಕಾರಿಗಳ ನೇಮಕ ಮಾಡಲಾಗಿದೆ. ಮಸ್ಟರಿಂಗ್ ಡಿಮಸ್ಟರಿಂಗ್ ಕೇಂದ್ರಗಳ ಸ್ಥಾಪನೆ ಹಾಗೂ ವಿಶೇಷ ಮತಗಟ್ಟೆಗಳನ್ನು ಸಹ ಸ್ಥಾಪನೆ ಮಾಡಲಾಗಿದೆ.
ಮೈಸೂರು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 2 ರಂತೆ 12 ಸಖಿ ಮತಗಟ್ಟೆಗಳನ್ನು ಸಹ ಆರಂಭಿಸಲಾಗುವುದು. ಮಡಿಕೇರಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ರಂತೆ 10 ಸಖಿ ಮತಗಟ್ಟೆಗಳನ್ನು ಆರಂಭಿಸಲಾಗುವುದು.
ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಒಟ್ಟು 22 ಸಖಿ ಮತಗಟ್ಟೆ, 11 ಬುಡಕಟ್ಟು ಮತಗಟ್ಟೆ, 7 ದಿವ್ಯಾಂಗ ಮತಗಟ್ಟೆ ಸ್ಥಾಪನೆ ಮಾಡಲಾಗುವುದು ಎಲ್ಲಾ ಮತಗಟ್ಟೆಗಳಿಗೆ ವಿಲ್ ಚೇರ್ ಹಾಗೂ ಬೂತಗನ್ನಡಿ, ಹಿರಿಯ ನಾಗರೀಕರಿಗೆ ವಾಹನದ ವ್ಯವಸ್ಥೆ, ದೃಷ್ಟಿ ದೋಷವುಳ್ಳವರಿಗೆ ಬ್ರೈಲ್ ಬ್ಯಾಲೆಟ್ ಪೇಪರ್ ಸರಬರಾಜು ಮಾಡಲಾಗುವುದು.

ಏ.16ರಂದು ಸಂಜೆ 6 ಗಂಟೆಗೆ ಅಂತ್ಯ
ಮತದಾನ ನಡೆಯುವ 48 ಗಂಟೆ ಯಾವುದೇ ಬಹಿರಂಗ ಪ್ರಚಾರ ಮಾಡುವಂತಿಲ್ಲ.ಬಹಿರಂಗ ಪ್ರಚಾರ ಏ.16 ಸಂಜೆ 6 ಗಂಟೆಗೆ ಅಂತ್ಯಗೊಳ್ಳಲಿದೆ. ಸಿ ಆರ್ ಪಿಸಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಎರಡು ದಿನ ಪಾನ ನಿರೋಧ ಒಣ ದಿನಗಳೆಂದು ಘೋಷಣೆ ಸಹ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

24 ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲು
ಮಾದರಿ ನೀತಿ ಸಂಹಿತೆ ಜಾರಿಯಾದಗಿನಿಂದ ಏಪ್ರಿಲ್ 13ರವರೆಗೆ ಜಿಲ್ಲೆಯಲ್ಲಿ 24 ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಅಂದಾಜು 1,41,11,837 ಗಳ ರೂ.ಬೆಲೆಯ ಒಟ್ಟು 43,97,120 ನಗದು, 33,180,435 ಲೀ.ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಈ ವೇಳೆ 6, 86,300 ರೂ ಅಂದಾಜು ಬೆಲೆಯ ಚುನಾವಣಾ ಪ್ರಚಾರ ಸಾಮಗ್ರಿಗಳ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಪ್ರಚಾರ ಸಾಮಗ್ರಿ ವಶಕ್ಕೆ
ಇನ್ನು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 12 ಪ್ರಕರಣಗಳಿಗೆ ಎಫ್ ಐಆರ್ ದಾಖಲಾಗಿದ್ದು, ಒಟ್ಟು 9.59,810 ನಗದು, ಅಂದಾಜು 83.35.631ರೂ ಬೆಲೆಯ 14438.47ಲೀ ಅಕ್ರಮ ಮದ್ಯ ವಶ ಪಡೆದುಕೊಳ್ಳಲಾಗಿದೆ. 26,15,000 ಅಂದಾಜು ರೂ.ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ ಎಂದರು.

ಸಿಸಿ ಕ್ಯಾಮೆರಾ ಅಳವಡಿಕೆ
ಚುನಾವಣಾ ಭದ್ರತಾ ವ್ಯವಸ್ಥೆ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಮತದಾನ ದಿನ 20 ಇನ್ಸ್ ಪೆಕ್ಟರ್, 59 ಸೆಕ್ಟರ್ ಮೊಬೈಲ್, 6 ಎಸಿಪಿ, 4 ಕೆ.ಎಸ್ ಆರ್, ಪಿ,ಅಶ್ವದಳ, ಸಿ ಆರ್ ಪಿಎಫ್ , ಸಿಎಆರ್ 20 ತುಕಡಿ ಪೋಲಿಸ್ ಸಿಬ್ಬಂದಿ, ಹೋಮ್ ಗಾರ್ಡ್ಸ್ ನೇಮಕ ಮಾಡಲಾಗಿದೆ. ಒಟ್ಟು ನಗರ ಗ್ರಾಮಾಂತರ ಸೇರಿ 4,562 ಪೋಲಿಸ್ ಸಿಬ್ಬಂದಿ ಹಾಗೂ ಹೋಂ ಗಾರ್ಡ್ ನೀಯೋಜನೆ. ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸ್ ವರ್, ವೆಬ್ ಕಾಸ್ಟಿಂಗ್ ವ್ಯವಸ್ಥೆ ಹಾಗೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ ಎಂದರು.












Click it and Unblock the Notifications