ಮೈಸೂರು ಯುವ ದಸರಾಕ್ಕೆ ಎ.ಆರ್.ರೆಹಮಾನ್, ಇಳಯರಾಜರ ಮೆರಗು: ಕಾರ್ಯಕ್ರಮಗಳ ವಿವರ ಇಲ್ಲಿದೆ

ಮೈಸೂರು, ಸೆಪ್ಟೆಂಬರ್‌ 26: ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಹಾಗೂ ಕೇಂದ್ರ ಬಿಂದುವಾಗಿರುವ ಯುವ ದಸರಾಕ್ಕೆ ಈ ಬಾರಿ ಹೆಚ್ಚು ಆಕರ್ಷಣೀಯವಾಗಿರಲಿದೆ. ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್, ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸೇರಿದಂತೆ ಹಲವು ಸುಪ್ರಸಿದ್ಧ ಗಾಯಕರು ಮೆರಗು ತರಲಿದ್ದಾರೆ.

ದಸರಾ ಮಹೋತ್ಸವ 2024ರ ಯುವ ದಸರಾ ಕಾರ್ಯಕ್ರಮ ಅಕ್ಟೋಬರ್‌ 6ರಿಂದ 10ರವರೆಗೆ ನಡೆಯಲಿದ್ದು, ಐದು ದಿನಗಳ ವರ್ಣರಂಜಿತ ಕಾರ್ಯಕ್ರಮಕ್ಕೆ ಈಗಾಗಲೇ ಅದ್ದೂರಿ ಸಿದ್ಧತೆಗಳು ನಡೆಯುತ್ತಿವೆ. ಆದರೆ, ಈ ಬಾರಿ ಯುವ ದಸರಾ ನಡೆಯುವ ಸ್ಥಳದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಪರಿಣಾಮ ಸಹಜವಾಗಿಯೇ ಈ ಕುತೂಹಲ ಹೆಚ್ಚುವಂತೆ ಮಾಡಿದೆ.

Mysuru Dasara 2024 Musical legends AR Rahman And Ilayaraja Are The Guest In Yuva Dasara

ಇವೆಲ್ಲದರ ನಡುವೆಯೂ ಯುವ ದಸರಾ ಕಾರ್ಯಕ್ರಮಕ್ಕಾಗಿ ಎಲ್ಲ ಸಿದ್ಧತೆಗಳು ನಡೆಯುತ್ತಿದ್ದು, ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಜನರು ಯುವ ದಸರಾ ವೀಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿಯ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್‌ 6ರಂದು ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಲಿದ್ದಾರೆ.

ದಸರಾ ಅಂಗವಾಗಿ ನಡೆಯುವ ಹತ್ತಾರು ಕಾರ್ಯಕ್ರಮಗಳಲ್ಲಿ ಯುವ ದಸರಾ ಹೆಚ್ಚು ಜನಾಕರ್ಷಣೀಯ ಕಾರ್ಯಕ್ರಮವಾಗಿದ್ದು, ವಿಶೇಷವಾಗಿ ಯುವ ಜನರು ಅತ್ಯುತ್ಸಾಹದಿಂದ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಈ ಬಾರಿಯ ಯುವ ದಸರಾ ಕಾರ್ಯಕ್ರಮಕ್ಕೆ ಭಾರತೀಯ ಸಂಗೀತ ಲೋಕದ ದಿಗ್ಗಜರಾದ ಎ.ಆರ್.ರಹಮಾನ್ ಹಾಗೂ ಇಳಯರಾಜ ಅವರ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದೆ. ಅ.6ರಿಂದ ನಡೆಯುವ ಯುವ ದಸರೆಯ ಮೊದಲ ದಿನದಂದು ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರ ತಂಡದಿಂದ ಬಾಲಿವುಡ್ ನೈಟ್ಸ್ ಕಾರ್ಯಕ್ರಮ ನಡೆಯಲಿದೆ.

Mysuru Dasara 2024 Musical legends AR Rahman And Ilayaraja Are The Guest In Yuva Dasara

ಐನಾಕ್ಸ್ ಡಿಆರ್‌ಸಿಯಲ್ಲಿ ಚಲನಚಿತ್ರ ಪ್ರದರ್ಶನ

ಅಕ್ಟೋಬರ್‌ 7ರಂದು ಖ್ಯಾತ ಸಂಗೀತ ಸಂಯೋಜಕ ರವಿ ಬಸ್ರೂರು ತಂಡದಿಂದ ರಸಸಂಜೆ ಹಾಗೂ ಸ್ಯಾಂಡಲ್‌ವುಡ್ ನೈಟ್ಸ್ ಕಾರ್ಯಕ್ರಮ ನಡೆಯಲಿದೆ. 8ನೇ ತಾರೀಕಿನಂದು ಖ್ಯಾತ ರಾಪರ್ ಬಾದ್ ಷಾ ಹಾಗೂ ತಂಡದವರು ಸಂಗೀತ ರಸಸಂಜೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. 9ರಂದು ಮ್ಯೂಜಿಕ್ ಮಾಂತ್ರಿಕ ಎ.ಆರ್. ರಹಮಾನ್ ಹಾಗೂ ತಂಡದಿಂದ ಸಂಗೀತ ರಸ ಸಂಜೆ ಹಾಗೂ ಅ.10ರ ಗುರುವಾರ ಹಿರಿಯ ಸಂಗೀತ ನಿರ್ದೇಶಕ ಇಳಯ ರಾಜ ಅವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ಇದೆಲ್ಲದರ ನಡುವೆ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಅಕ್ಟೋಬರ್‌ 4 ರಿಂದ 10ರವರೆಗೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಹಾಗೂ ಡಿಆರ್‌ಸಿ ಪರದೆಗಳಲ್ಲಿ ಚಲನಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಈ ಸಂಬಂಧ ಸೆ, 26 ರಂದು ಬೆಳಗ್ಗೆ 10.30 ರಿಂದ ಸಂಜೆ 4.30 ರವರೆಗೆ ನಗರದ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಸಿನಿಮಾ ಪ್ರಿಯರಿಗೆ ಚಲನ ಚಿತ್ರೋತ್ಸವ ಪ್ರದರ್ಶನದ ಪಾಸ್ ವಿತರಣೆ ಮಾಡಲಾಗುತ್ತದೆ.

ಚಲನಚಿತ್ರೋತ್ಸವ ಪಾಸ್ ದರ ಸಾಮಾನ್ಯರಿಗೆ 500 ರೂ.ಗಳಾಗಿದ್ದರೆ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ 300 ರೂ.ಗಳಾಗಿರುತ್ತವೆ. ಈ ಪಾಸ್ ಏಳು ದಿನಗಳವರೆಗೂ ಚಾಲ್ತಿಯಲ್ಲಿರುತ್ತದೆ. ಪಾಸ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಪ್ರತಿ ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಶ್ರೇಯಸ್, ಮೊ.ಸಂ: 7822543852ನ್ನು ಸಂಪರ್ಕಿಸಬಹುದು ಎಂದು ಚಲನಚಿತ್ರೋತ್ಸವ ಉಪಸಮಿತಿಯ ಕಾರ್ಯದರ್ಶಿ ಹರೀಶ್.ಟಿ.ಕೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+