ಅನ್‌ಲಾಕ್ ಬೆನ್ನಲ್ಲೇ ಮೈಮರೆತ ಮೈಸೂರಿಗರು: ನಿಯಮ ಪಾಲಿಸದ ಜನರಿಂದ ದಂಡ ಸಂಗ್ರಹ

ಮೈಸೂರು, ಜೂನ್ 29: ಸಾಂಸ್ಕೃತಿಕ‌ ನಗರಿ ಮೈಸೂರಿನಲ್ಲಿ ಕೊರೊನಾ 2ನೇ ಅಲೆಯ ಆರ್ಭಟ ಜೋರಾಗಿದೆ. ಆದರೆ ಮಹಾಮಾರಿ ಹೊಡೆತಕ್ಕೆ ಜೀವನ ಬುಡಮೇಲಾಗಿದ್ದರೂ, ಮೈಸೂರಿಗರು ಮಾತ್ರ ಇಂದಿಗೂ ಕೊರೊನಾ ಸೋಂಕಿನಿಂದ ಪಾಠ ಕಲಿತಿಲ್ಲ.

ರಾಜ್ಯದ ಇತರೆ ಜಿಲ್ಲೆಗಳಿಗಿಂತ ಮೈಸೂರಿನಲ್ಲಿ ಕೊರೊನಾ 2ನೇ ಅಲೆಯ ಆತಂಕ ಹತೋಟಿಗೆ ಬಾರದ ಕಾರಣ, ಜುಲೈ 5ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿತ್ತಾದ್ದರೂ, ನಂತರ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿಯಮದಲ್ಲಿ ಕೊಂಚ‌ ಸಡಿಲಿಕೆ ನೀಡಲಾಗಿದೆ. ಆದರೆ ಅನ್‌ಲಾಕ್ ಆಗುತ್ತಿದ್ದಂತೆ ಮೈಸೂರಿಗರು ಕೊರೊನಾದ ಭಯವಿಲ್ಲದೆ ಮೈ ಮರೆತಿದ್ದಾರೆ.

ಜನದಟ್ಟಣೆಯ ಪ್ರದೇಶಗಳಲ್ಲಿ ದೈಹಿಕ ಅಂತರ ನಿರ್ವಹಣೆ ಹಾಗೂ ಮಾಸ್ಕ್ ಧರಿಸುವುದಕ್ಕೂ ಉಡಾಫೆ ಮಾಡುವ ಮೂಲಕ ನಿರ್ಲಕ್ಷ್ಯ ತೋರಿದ್ದಾರೆ. ಜನರ ಬೇಜವಾಬ್ದಾರಿತನ ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಬಯಲಾಗಿದ್ದು, ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಂದ ನಿನ್ನೆ (ಜೂ.28ರಂದು) ಒಂದೇ ದಿನ 1.33 ಲಕ್ಷಕ್ಕೂ ಅಧಿಕ ಮೊತ್ತದ ದಂಡ ಸಂಗ್ರಹಿಸಿದ್ದಾರೆ.

Mysuru Cops Collect Rs 1.33 Crore In Fine For Violation Of Covid-19 Lockdown Rules

ಸೋಮವಾರದಿಂದ ಮೈಸೂರು ನಗರದಲ್ಲಿ ಲಾಕ್‌ಡೌನ್ ನಿಯಮಗಳಲ್ಲಿ ಕೊಂಚ ಸಡಿಲಿಕೆ ನೀಡಿದ್ದರ ಪರಿಣಾಮ, ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಜನರ‌ ಓಡಾಟ ಹೆಚ್ಚಾಗಿತ್ತು. ಈ ವೇಳೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊರೊನಾ ನಿಯಮ ಉಲ್ಲಂಘನೆ ಸಂಬಂಧ 709 ಪ್ರಕರಣಗಳನ್ನು ದಾಖಲಿಸಿದ್ದು, ಬರೋಬ್ಬರಿ 1 ಲಕ್ಷದ 33 ಸಾವಿರದ 150 ರೂ. ದಂಡ ಸಂಗ್ರಹಿಸಿದ್ದಾರೆ.

Mysuru Cops Collect Rs 1.33 Crore In Fine For Violation Of Covid-19 Lockdown Rules

ಇಂದು ಮುಂದುವರಿಯಲಿದೆ
"ಕೊರೊನಾ ನಿಯಮಗಳ ಪಾಲನೆ ಸಂಬಂಧ ಪೊಲೀಸರು ಮಂಗಳವಾರ ಸಹ ಕಾರ್ಯಾಚರಣೆ ನಡೆಸಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಸೇರಿದಂತೆ ಕೋವಿಡ್- 19 ನಿಯಮಗಳನ್ನು ತಪ್ಪದೇ ಪಾಲಿಸುವಂತೆ,'' ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+