ಇಂಟರ್ನೆಟ್ ಲೋಕದಲ್ಲಿ ಮೈಸೂರು ಸಂಸದ ವಿಶ್ವನಾಥ್
ಮೈಸೂರು, ನ 25: ಪ್ರೀತಿಯ ಓದುಗರೇ, ನನ್ನ ನೆಚ್ಚಿನ ಜನರೇ, ನಿಮಗೆಲ್ಲರಿಗೂ ನನ್ನ ಶುಭಕಾಮನೆಗಳು. ವೆಬ್ ಸೈಟ್ ಮತ್ತು ಇಂಟರ್ನೆಟ್ ಮೂಲಕ ನಿಮ್ಮನ್ನು ಸಂಪರ್ಕಿಸಲು ಹರ್ಷವಾಗುತ್ತಿದೆ. ಇದು ಮೈಸೂರು ಸಂಸದ ಎಚ್ ವಿಶ್ವನಾಥ್ ಅವರು ಆರಂಭಿಸಿರುವ 'ನಿಮ್ಮ ವಿಶ್ವನಾಥ್.ಕಾಮ್' ' ವೆಬ್ ಸೈಟಿನ ಮೊದಲ ಸಾಲಿನ ಒಕ್ಕಣೆ.
ಈ ಮೂಲಕ ಇಂಟರ್ನೆಟ್ ಮತ್ತು ವೆಬ್ ಸೈಟ್ ಹೆಚ್ಚಾಗಿ ಒಡನಾಟ ಹೊಂದಿರುವ ಮತದಾರರನ್ನು ಆಕರ್ಷಿಸಿ, ವಿಶ್ವನಾಥ್ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಳ್ಳಲಾರಂಭಿಸಿದ್ದಾರೆ.
ಪ್ರತೀದಿನ ಸಂಜೆ ನಾಲ್ಕರಿಂದ ಐದು ಗಂಟೆಯ ಅವಧಿಯಲ್ಲಿ ವಿಡಿಯೋ ಕಾಲ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುತ್ತೇನೆ. ನನ್ನ ಕ್ಷೇತ್ರದ ಮತದಾರರು ತಮ್ಮ ಯಾವುದೇ ಕುಂದು ಕೊರತೆಗಳನ್ನು ನನ್ನ ಜೊತೆ ಹಂಚಿ ಕೊಳ್ಳಬಹುದು ಎಂದು ವಿಶ್ವನಾಥ್ ಹೇಳಿದ್ದಾರೆ.

ಮೈಸೂರು ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಮಾಹಿತಿಯನ್ನು ನನ್ನ ವೆಬ್ ಸೈಟಿನಲ್ಲಿ ನೀಡಲಾಗಿದೆ. ಇದಲ್ಲದೇ, ಮೈಸೂರು ಲೋಕಸಭಾ ಕ್ಷೇತ್ರದ ಬಗ್ಗೆ ಕೂಡಾ ಮಾಹಿತಿ ನೀಡಲಾಗಿದೆ. ಮತದಾರರು ಈ ವೆಬ್ ಸೈಟ್ ಮೂಲಕ ನೀಡುವ ಸಲಹೆಗಳಿಗೆ ಸ್ವಾಗತ ಎಂದು ವಿಶ್ವನಾಥ್ ಹೇಳಿದ್ದಾರೆ.
ನಾಲ್ಕುವರೆ ವರ್ಷಗಳಿಂದ ನನ್ನ ಸಾಧನೆ ಏನು ಎಂದು ನನಗೆ ನಾನೇ ಪ್ರಶ್ನೆ ಹಾಕಿಕೊಂಡರೆ ಸಮಾಧಾನವಾಗುತ್ತದೆ. ನನ್ನ ಕ್ಷೇತ್ರದ ಮತದಾರರ ಕಂಬನಿಗಳಿಗೆ, ನೋವಿಗೆ ಕ್ಷೇತ್ರದ ಸಂಸದನಾಗಿ ಪ್ರಾಮಾಣಿಕವಾಗಿ ಮಿಡಿದಿದ್ದೇನೆ ಎಂದು ವಿಶ್ವನಾಥ್ ವೆಬ್ ಸೈಟಿನಲ್ಲಿ ಹೇಳಿಕೊಂಡಿದ್ದಾರೆ. ಈ ವೆಬ್ ಸೈಟ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದೆ.
ವೆಬ್ ಸೈಟಿನಲ್ಲಿ ವಿಶ್ವನಾಥ್ ತನ್ನ MP Lad Fund ಮೂಲಕ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಕಾಮಗಾರಿಗಳ ವಿವರಗಳನ್ನು ಮತ್ತು ಕೇಂದ್ರ ಸರಕಾರದಿಂದ ಬಿಡುಗಡೆಯಾದ ಅನುದಾನದ ವಿವರವನ್ನೂ ತಿಳಿಸಿದ್ದಾರೆ. ವಿಶ್ವನಾಥ್ ತಮ್ಮ ವೆಬ್ ಸೈಟಿನಲ್ಲಿ ತನ್ನ ಫೇಸ್ ಬುಕ್, ಟ್ವಿಟರ್ ಮತ್ತು ಸ್ಕೈಪ್ ಅಕೌಂಟ್ ಬಗ್ಗೆ ಕೂಡಾ ಬರೆದಿದ್ದಾರೆ.
ವಿಶ್ವನಾಥ್ ಅವರ ವೆಬ್ ಸೈಟ್ ವಿಳಾಸ : http://www.nimmavishwanath.com
ವಿಶ್ವನಾಥ್ ಫೇಸ್ ಬುಕ್ ಪುಟದ ಮಾಹಿತಿ : https://www.facebook.com/nimma.vishwanath
ಟ್ವಿಟರ್ ಹ್ಯಾಂಡಲ್: @nimmavishwanath












Click it and Unblock the Notifications