ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯಿತರು ಎಡಬಿಡಂಗಿಗಳು: ಚಂದ್ರಶೇಖರ ಪಾಟೀಲ್

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

ಲಿಂಗಾಯಿತರು ಎಡಬಿಡಂಗಿಗಳು ಚಂದ್ರಶೇಖರ್ ಪಾಟೀಲ್ | Oneindia Kannada

ಮೈಸೂರು, ಅಕ್ಟೋಬರ್ 24: ಲಿಂಗಾಯತ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರೂ ಆದ ಕವಿ, ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅಭಿಪ್ರಾಯಪಟ್ಟರು.

ಕನ್ನಡದ ಅಳಿವು -ಉಳಿವಿನ ಬಗ್ಗೆ ಅರಿಯಲು ಸಾಹಿತ್ಯ ಸಮ್ಮೇಳನ ಬೇಕು: ಚಂಪಾಕನ್ನಡದ ಅಳಿವು -ಉಳಿವಿನ ಬಗ್ಗೆ ಅರಿಯಲು ಸಾಹಿತ್ಯ ಸಮ್ಮೇಳನ ಬೇಕು: ಚಂಪಾ

ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯ ಸಭಾಂಗಣದಲ್ಲಿ ಅ.21ರಂದು ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಲಿಂಗಾಯತ ಸಮುದಾಯದ ಪರವಾಗಿದ್ದೇನೆ. ರಂಭಾಪುರಿ ಮಠದ ಸ್ವಾಮೀಜಿ, ಕೆಲ ವಿರಕ್ತ ಮಠಗಳವರು ಇದನ್ನು ವಿರೋಧಿಸುತ್ತಿದ್ದಾರೆ. ಬೌದ್ಧ, ಜೈನ, ಸಿಖ್ ಧರ್ಮಗಳಿಗೆ ನೀಡಿರುವಂತೆ ಲಿಂಗಾಯತ ಸಮುದಾಯಕ್ಕೂ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ ನೀಡಲಿ ಎಂದು ಆಗ್ರಹಿಸಿದರು.

Lingayat religion should get separate constitutional recognition: Chandrashekhar Patil


ಹಿಂದುತ್ವ ಬಲಪಂಥ, ವೀರಶೈವ ಎಡ ಪಂಥ ಆದರೆ ಲಿಂಗಾಯಿತರದು ಎಡಬಿಡಂಗಿ ವಾದ ಎಂದು ನುಡಿದ ಅವರು, ಇವುಗಳ ನಡುವೆ ಇಡೀ ಸಮಸ್ಯೆ ಗೊಂದಲಮಯವಾಗುವಂತೆ ಕೆಲ ವಿರಕ್ತ ಮಠಗಳು ಕಾರಣವಾಗಿವೆ. ಬಲ ಎನಿಸಿಕೊಂಡವರಿಗೆ ಆ ಕಡೆ ಹೋಗಬೇಕೋ, ಈ ಕಡೆ ಹೋಗಬೇಕೋ ಎಂಬ ಗೊಂದಲವಿದೆ. ಆದ್ದರಿಂದಲೇ ಇವರನ್ನು ಎಡಬಿಡಂಗಿಗಳು ಎಂದು ಸಮರ್ಥಿಸಿಕೊಂಡರು. ಯಾವುದೇ ವೇದ, ಪುರಾಣಗಳಲ್ಲಿ ಹಿಂದೂ ಧರ್ಮದ ಪ್ರಸ್ತಾಪವೇ ಇಲ್ಲ. ಅದು ವೈದಿಕರ ಹುನ್ನಾರದಿಂದ ಸೇರ್ಪಡೆಯಾಗಿದೆ. ರಸಋಷಿ ಕವಿ ಕುವೆಂಪು ಅವರು ಕೂಡ ಇಂತಹ ವೈದಿಕ ಶಾಹಿ ವಿರುದ್ಧ ಹೋರಾಟಕ್ಕೆ ಚಾಲನೆ ನೀಡಿದ್ದರು ಎಂದು ಸ್ಮರಿಸಿದರು.

ಕನ್ನಡ ಸಾಹಿತ್ಯ ದುರ್ಬಲ ಆಗಿಲ್ಲ:
ಡಿಜಿಟಲ್ ಸಾಹಿತ್ಯದಿಂದ ಸಾಂಪ್ರದಾಯಿಕ ಸಾಹಿತ್ಯ ದುರ್ಬಲವಾಗಿದೆಯೇ ಎಂಬ ಪ್ರಶ್ನೆಗೆ ಅವರು, ಆ ಭಾವನೆ ಸರಿಯಲ್ಲ. ದೃಷ್ಟಿಕೋನ ಬದಲಾಗಬೇಕಷ್ಟೇ. ಯಾವುದೇ ಸಾಹಿತ್ಯವಾದರೂ ಅದರಲ್ಲಿ ವೈಚಾರಿಕತೆ ಮುಖ್ಯ. ಸಾಹಿತ್ಯ ಅದರದ್ದೇ ಆದ ನೆಲೆಯಲ್ಲಿ ಸುಭದವಾಗಿರುತ್ತದೆ ಎಂದು ಚಂಪಾ ಉತ್ತರಿಸಿದರು.

ರಾಜಕಾರಣದಲ್ಲಿ ಎಡ-ಬಲ ಸಹಜ:
ಜಗತ್ತಿನ ರಾಜಕಾರಣವೇ ಎಡಪಂಥೀಯ ಮತ್ತು ಬಲಪಂಥೀಯ ಧೋರಣೆಗಳನ್ನು ಒಳಗೊಂಡಿದೆ. ಆದರೆ, ಬಲ ಎಂಬುದು ಪಗತಿಶೀಲಕ್ಕೆ ವಿರುದ್ಧವಾಗಿದೆ. ಜನತೆ ಯಾವುದಾದರೊಂದನ್ನು ಆಯ್ಕೆ ಮಾಡಿಕೊಂಡರೆ ಮಾತ್ರವೇ ಮುಂದಿನ ದಿಕ್ಕು ಸ್ಪಷ್ಟವಾಗುವುದು. ನಾನು ಸಮಾಜವಾದಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಮಾನವೀಯ ಮೌಲ್ಯಕ್ಕೆ ವಿರುದ್ಧವಾದ ಪ್ರತಿಯೊಂದನ್ನೂ ಖಂಡಿಸಬೇಕು ಎಂದರು.

ಯಾವುದೇ ಸರ್ಕಾರದ ಆಡಳಿತದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ, ನೈತಿಕ ಬೆಂಬಲಕ್ಕೆ ಕೊರತೆಯಾಗಿಲ್ಲ. ಆದರೆ, ಪ್ರಭುತ್ವಕ್ಕೆ ರಾಜಕೀಯ ಸಿದ್ಧಾಂತ ಅಂಟಿರುವು ದರಿಂದ ಸಮ್ಮೇಳನಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನುಡಿದರು.

ಈಗಿನ ರಾಷ್ಟ್ರೀಯ ಪಕ್ಷಗಳು ಧರ್ಮದ ಹೊರತಾಗಿ ಆಡಳಿತ ನಡೆಸುವುದು ಕಷ್ಟ. ಹಾಗಾಗಿ ನಾವು ನೆಲ ಮೂಲದ ರಾಜಕೀಯ ಪಕ್ಷಗಳನ್ನು ಬೆಂಬಲಿಸುವುದು ಸೂಕ್ತ. ಅವು ಧರ್ಮ ನಿರಪೇಕ್ಷವಾಗಿರುತ್ತವೆ. ಹಾಗಾಗಿಯೇ ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಚಿಸಿದ್ದ ಕೆಜೆಪಿಯ ಕಾರ್ಯಕಾರಿಣಿ ಸದಸ್ಯನಾಗಿದ್ದೆ. ಆದರೆ, ಅವರು ಒಂದು ರೀತಿಯಲ್ಲಿ ಜನತೆಗೆ ದ್ರೋಹ ಬಗೆದರು. ನಂತರ ಅವರು ಮಾತೃಪಕ್ಷಕ್ಕೆ ಹಿಂತಿರುಗಿದರು. ನಾನು ನನ್ನ ಕ್ಷೇತ್ರಕ್ಕೆ ವಾಪಸ್ ಆದೆ ಎಂದು ಚಂಪಾ ಪ್ರತಿಪಾದಿಸಿದರು.

ಗೌರಿ ಹತ್ಯೆ: ಈಗಲೇ ಯಾವುದೇ ನಿರ್ಧಾರ ಸರಿಯಲ್ಲ:
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಸಂಬಂಧ ಇಂತಹವರೇ ಮಾಡಿದ್ದಾರೆ ಎಂಬುದು ಕೇವಲ ಊಹೆ. ಬಲ ಪಂಥೀಯರೋ, ಎಡ ಪಂಥೀಯರೋ, ಭಯೋತ್ಪಾದಕರೋ ಎಂಬುದನ್ನು ಎಸ್‍ಐಟಿ ತನಿಖೆಯಿಂದ ನಿರ್ಧಾರವಾಗಬೇಕು ಎಂದರು. ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ ನಡೆಸಲಿರುವ ಈ ಸಮ್ಮೇಳನಕ್ಕೆ ಅಡ್ಡಿಯೇನಿಲ್ಲ. ಅದರಿಂದ ಸರ್ಕಾರದ ಹಣವೇನೂ ವ್ಯರ್ಥವಾಗುವುದಿಲ್ಲ. ಅಪಸ್ವರ, ಉಪಸ್ವರ ಮಾಮೂಲು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಸಂದೇಶ ನೀಡುವುದರಲ್ಲಿ ನನಗೆ ನಂಬಿಕೆ ಇಲ್ಲ. ಅವರವರ ಅರಿವಿಗೆ ತಕ್ಕಂತೆ ವೈಚಾರಿಕತೆ, ಮಾನವೀಯ ನೆಲೆಗಟ್ಟನ್ನು ರೂಪಿಸಿಕೊಳ್ಳಬಹುದು. ಇದೇ ನವೆಂಬರ್ 24, 25, 26 ರಂದು ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರೂ ಸಹಕಾರ ನೀಡಬೇಕು. 'ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ' ಎಂಬುದು ನನ್ನ ಆಶಯ ಎಂದರು.

English summary
Lingayat religion should get separate constitutional recognition, president of 83rd Kannada Sahitya Sammelana which will be taking place on 24th to 26th November in Mysuru, Chandrashekhar Patil told to media in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X