ಮಾಜಿ ಸಚಿವ ರಾಮದಾಸ್ ಆಸ್ತಿ ಲಕ್ಷ ರು ಕೂಡಾ ದಾಟಿಲ್ಲ!
ಮೈಸೂರು, ಏಪ್ರಿಲ್ 24: ಮೈಸೂರಿನ ಕೃಷ್ಣರಾಜ(ಕೆ.ಆರ್.ಕ್ಷೇತ್ರ) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ಎಸ್. ಎ ರಾಮದಾಸ್ ಬಳಿ ಸ್ವಂತ ಕಾರಿಲ್ಲ, ಆಸ್ತಿ ಕೂಡಾ ಒಂದು ಲಕ್ಷ ರು ದಾಟುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ.
ಇದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ವಿ ಮಲ್ಲೇಶ್ ಹಾಗೂ ರಾಮದಾಸ್ ಅವರ ಆಸ್ತಿ ಅಂಕಿ ಅಂಶ ಬಹುತೇಕ ಹೋಲಿಕೆ ಇರುವುದು ಅಚ್ಚರಿ ಮೂಡಿಸಬಹುದು.

ಎಸ್.ಎ.ರಾಮದಾಸ್ ಅವರ ಚರಾಸ್ತಿ, ಸ್ಥಿರಾಸ್ತಿ ಎಲ್ಲವನ್ನು ಸೇರಿದರೆ, ಒಟ್ಟಿ 39.69.351ರೂ ಲೆಕ್ಕ ಸಿಗುತ್ತದೆ. ಇದಲ್ಲದೆ, 200 ಗ್ರಾಂ ಚಿನ್ನ, 4 ಕೆ.ಜಿ.ಬೆಳ್ಳಿ, ಯಾವುದೇ ಸಾಲದ ಹೊರೆ ಹೊತ್ತಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications