ಮೈಸೂರು ಸೇಂಟ್ ಫಿಲೋಮಿನಾ ಚರ್ಚ್ಗೆ ಹೊಸ ಲುಕ್‌: ನೂತನ ಪ್ರವೇಶ ದ್ವಾರಕ್ಕೆ ಅಡಿಪಾಯ

ಮೈಸೂರು, ಅಕ್ಟೋಬರ್‌ 23: ಸೇಂಟ್ ಜೋಸೆಫ್ ಕ್ಯಾಥೆಡ್ರಲ್ (ಸೇಂಟ್ ಫಿಲೋಮಿನಾ ಚರ್ಚ್) ನಲ್ಲಿ ನೂತನ ಪ್ರವೇಶ ದ್ವಾರಕ್ಕೆ ಮೈಸೂರು ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಎಮಿರಿಟಸ್ ಹಾಗೂ ಅಪೋಸ್ಟೋಲಿಕ್ ಆಡಳಿತಾಧಿಕಾರಿ ಡಾ.ಬರ್ನಾಡ್ ಮೊರಾಸ್ ಶಂಕುಸ್ಥಾಪನೆ ನೆರವೇರಿಸಿದರು. ಭಾರತದ ಅತ್ಯಂತ ಎತ್ತರದ ಚರ್ಚ್ ಮತ್ತು ಏಷ್ಯಾದಲ್ಲಿ ಎರಡನೇ ಅತೀ ಎತ್ತರದ ಚರ್ಚ್ ಎಂದು ಹೆಸರುವಾಸಿಯಾಗಿದೆ.

ಸೇಂಟ್ ಜೋಸೆಫ್ ಕ್ಯಾಥೆಡ್ರಲ್ ಗಮನಾರ್ಹ ಹೆಗ್ಗುರುತಾಗಿದೆ. ಜೊತೆಗೆ ಮೈಸೂರಿನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದರೂ, ಈ ಚರ್ಚ್‌ ಸರಿಯಾದ ಮತ್ತು ಕಲಾತ್ಮಕವಾಗಿ ಆಹ್ಲಾದಕರವಾದ ಪ್ರವೇಶದ್ವಾರವನ್ನು ಹೊಂದಿಲ್ಲ. ಚರ್ಚ್‌ಗೆ ನೇರವಾಗಿ ಎದುರಾಗಿರುವ ಸಣ್ಣ ಗೇಟ್‌ನಲ್ಲಿಯೇ ಪ್ರವಾಸಿಗರು ಮತ್ತು ಯಾತ್ರಿಕರು ಸಂಚರಿಸುತ್ತಾರೆ. ಹೀಗಾಗಿ ಈ ಚರ್ಚ್‌ಗೆ ನೂತನ ಪ್ರವೇಶ ದ್ವಾರದ ಅವಶ್ಯತೆ ಹೆಚ್ಚಾಗಿತ್ತು.

Foundation Stone Has Been Laid For The New Entrance Of St Philomena s Church

ಈ ಹಿನ್ನೆಲೆಯಲ್ಲಿ ಇಂದು (ಅಕ್ಟೋಬರ್‌ 23) ಬುಧವಾರ ಸೇಂಟ್ ಫಿಲೋಮಿನಾ ಚರ್ಚ್‌ನ ಪ್ರವೇಶ ದ್ವಾರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಹೊಸ ರಚನೆಯು ಸೇಂಟ್ ಜೋಸೆಫ್ ಕ್ಯಾಥೆಡ್ರಲ್‌ನ ಸೌಂದರ್ಯದ ಆಕರ್ಷಣೆ ಮತ್ತು ಸುರಕ್ಷತೆ ಎರಡನ್ನೂ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದರಿಂದ ಈ ಐತಿಹಾಸಿಕ ತಾಣಕ್ಕೆ ಭೇಟಿ ನೀಡುವ ಎಲ್ಲರಿಗೂ ಇನ್ನಷ್ಟು ವಿಶಿಷ್ಠ ಅನುಭವ ಸಿಗಲಿದೆ. ಪ್ರವೇಶ ದ್ವಾರದ ನಿರ್ಮಾಣವು ಡಿಸೆಂಬರ್ 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಚರ್ಚ್‌ ಆಡಳಿತ ವ್ಯವಸ್ಥೆ ತಿಳಿಸಿದೆ.

ಇಂದಿನ ಕಾರ್ಯಕ್ರಮಲ್ಲಿ ಆಲ್ಫ್ರೆಡ್ ಜಾನ್ ಮೆಂಡೋನ್ಕಾ, ಮೈಸೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಡಾ. ರೆ.ಫಾ. ಸೆಬಾಸ್ಟಿಯನ್ ಅಲೆಕ್ಸಾಂಡರ್, ಹಣಕಾಸು ನಿರ್ವಾಹಕರು, ರೆ.ಫಾ. ಜೋಸೆಫ್ ಪ್ಯಾಕಿಯರಾಜ್, ಕುಲಪತಿ, ರೆ.ಫಾ. ಸ್ಟೇನಿ ಡಿ'ಅಲ್ಮೆಡಾ, ಪ್ಯಾರಿಷ್ ಪ್ರೀಸ್ಟ್, ಮತ್ತು ಲೈಟ್ ಹೌಸ್ ಪೋಲ್ಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ನೆಪೋಲಿಯನ್, ಎಂ.ಎ. ಲಿಮಿಟೆಡ್, ಗೇಟ್ ತಯಾರಿಕೆ ಕಂಪನಿ ಸಿಬ್ಬಂದಿ ಸಹ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+