ಕಾಂಗ್ರೆಸ್ 'ಎಕ್ಸಿಟ್' ಪೋಲ್ಸ್ ಬಗ್ಗೆ ಡಿಕೆಶಿ ಏನನ್ತಾರೆ?

ಮೈಸೂರು, ಮೇ 13: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಿವಿಧ ಮಾಧ್ಯಮ ಸಂಸ್ಥೆಗಳು ಚುನಾವಣಾ ಫಲಿತಾಂಶಗಳ ಬಗ್ಗೆ ನಾನಾ ಸಮೀಕ್ಷೆಗಳನ್ನು ಹೊರಹಾಕಿದ್ದು, ಕಾಂಗ್ರೆಸ್ ಪಕ್ಷವು 'ಎಕ್ಸಿಟ್' ಆಗುವುದು ಖಚಿತ ಎಂದು ಅಬ್ಬರಿಸುತ್ತಿವೆ. ಇದನ್ನು ಕೇಳಿ ಕಾಂಗ್ರೆಸ್ಸಿನವರು ಸಹಜವಾಗಿಯೇ ಮುನಿಸಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡಲು ಯಾರೂ ಸಿದ್ಧರಿಲ್ಲ. ಎಲ್ಲಾ ಮೌನಕ್ಕೆ ಶರಣಾಗುತ್ತಿದ್ದಾರೆ.

ಈ ಮಧ್ಯೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 'ಈ 'ಎಕ್ಸಿಟ್ ಪೋಲ್ಸ್'ನಲ್ಲಿ ತಮಗೆ ವಿಶ್ವಾಸವಿಲ್ಲ ಎಂದಿದ್ದಾರೆ. ಆದರೂ ತಮ್ಮ ದುಪರ್ದಿಯಲ್ಲಿರುವ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ 20 ಕ್ಕೂ ಹೆಚ್ಚು ಸ್ಥಾನ ಪ್ರಾಪ್ತಿಯಾಗಲಿದೆ ಎಂದು ತುಂಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ಸಿಗೆ 16 ಸ್ಥಾನಗಳು: ಡಿಕೆ ಶಿವಕುಮಾರ್

exit-polls-2014-karnataka-congress-will-get-16-seats-dk-shivakumar

ಗಮನಾರ್ಹವೆಂದರೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಈ ಹಿಂದೆ ಟಿವಿ ಚಾಲೆನ್ ಒಂದರಲ್ಲಿ ಇಂತಹುದೇ ಚುನಾವಣಾ ಸಮೀಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಸಮೀಕ್ಷೆಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅವುಗಳಲ್ಲಿ ತಮಗೆ ಸುತರಾಂ ನಂಬಿಕೆಯಿಲ್ಲ ಎಂದು ಅಂದು ಘರ್ಜಿಸಿದ್ದರು. ಇಂದು ಸಹ ತಾಜಾ ಸಮೀಕ್ಷೆಗಳ ಬಗ್ಗೆ ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ ಡಿಕೆ ಶಿ ಅದೇ ಪ್ರತಿಕ್ರಿಯೆ ನೀಡಿದ್ದಾರೆ.

ಕೇವಲ ಕೆಲವೇ ಸ್ಥಳಗಳನ್ನು ಕೇಂದ್ರೀಕರಿಸಿ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸುವುದರಿಂದ ಇದನ್ನು ನಂಬಲು ಸಾಧ್ಯವಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ತಿಳಿಸಿದರು. ಇಂದು ಬೆಳಗ್ಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಮೀಕ್ಷಾ ವರದಿಗಳು ಏನೇ ಬರಲಿ ಇದೇ 16 ರಂದು ಎಲ್ಲಾ ಗೊತ್ತಾಗಲಿದೆ. ಈಗ ಸಂಸ್ಥೆಗಳು ಮಾಡಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್ಸಿಗೆ ಅತಿ ಕಡಿಮೆ ಸ್ಥಾನಗಳು ಬರಲಿವೆ ಎಂದು ಹೇಳಿವೆ. ಆದರೆ, ನಾವು ನಡೆಸಿದ ಸಮೀಕ್ಷೆ ಪ್ರಕಾರ ನಮ್ಮ ಪಕ್ಷಕ್ಕೆ 16 ಅಥವಾ 17 ಸ್ಥಾನಗಳು ಲಭಿಸಲಿವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+