ಸಂತ್ರಸ್ತರಿಗೆ ಸಿಎಫ್ ಟಿಆರ್ ಐನಿಂದ ಆಹಾರ ಪೊಟ್ಟಣಗಳ ರವಾನೆ
ಮೈಸೂರು, ಆಗಸ್ಟ್ 10 : ಬೆಳಗಾವಿ ಹಾಗೂ ಹಾಸನ ಭಾಗದ ನೆರೆ ಸಂತ್ರಸ್ತರಿಗೆ ಆಹಾರ ಪೂರೈಸುವಂತೆ ಆ ಭಾಗದ ಜಿಲ್ಲಾಧಿಕಾರಿಗಳಿಂದ ಸಿಎಫ್ ಟಿಆರ್ ಐಗೆ ಮನವಿ ಬಂದ ಹಿನ್ನೆಲೆಯಲ್ಲಿ ಇಂದು-ನಾಳೆಯೊಳಗಾಗಿ ಆಹಾರ ಪೂರೈಕೆ ಮಾಡಲು ಚಿಂತನೆ ನಡೆಸಲಾಗಿದೆ.
ಒಡಿಶಾ ಫೋನಿ ಸಂತ್ರಸ್ತರಿಗೆ ಸಿಎಫ್‌ಟಿಆರ್‌ಐನಿಂದ ಆಹಾರ
ಈ ಕುರಿತು ಮಾತನಾಡಿದ ಸಿಎಫ್ ಟಿಆರ್ ಐ ಸಾರ್ವಜನಿಕ ಸಂಪರ್ಕಾಧಿಕಾರಿ ಶರ್ಮಾ, "ಹಾಸನದಿಂದ 2 ಸಾವಿರ ಜನರಿಗೆ ಆಹಾರ ಪೂರೈಕೆಗೆ ಬೇಡಿಕೆ ಬಂದಿದೆ. ಅಲ್ಲದೇ ಬೆಳಗಾವಿಗೆ ನಮ್ಮಿಂದ ಸಾಧ್ಯವಾಗುವಷ್ಟು ಆಹಾರ ಪೂರೈಸುವಂತೆ ಕೇಳಿದ್ದಾರೆ. ನಮ್ಮಲ್ಲಿ ಪೂರೈಸಲು ವಿಳಂಬವಾಗುವ ಹಿನ್ನೆಲೆಯಲ್ಲಿ ನಮ್ಮ ಅಧೀನದಲ್ಲಿ ತಯಾರಿಸಲ್ಪಡುವ ಆಹಾರವನ್ನು ನಾವೇ ಪಡೆದು ಪ್ಯಾಕ್ ಮಾಡಿ ಕಳುಹಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಎಷ್ಟು ಪ್ರಮಾಣದ ಆಹಾರ ಕಳಿಸಲಾಗುವುದು ಎಂಬ ಮಾಹಿತಿ ಇಂದು ಸಂಜೆಯೊಳಗೆ ಸಿಗಲಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications