ಶಿವಮೊಗ್ಗದಲ್ಲಿ ಯಡಿಯೂರಪ್ಪರದ್ದೇ ಹವಾ, ಗೆಲ್ಲೋದು ರಾಘಣ್ಣನೇ: ಬಿವೈವಿ

Recommended Video

      Lok Sabha Elections 2019 : ಶಿವಮೊಗ್ಗ ರಾಜಕಾರಣದ ಗುಟ್ಟು ಬಿಚ್ಚಿಟ್ಟ ವಿಜಯೇಂದ್ರ | Oneindia Kannada

      ಮೈಸೂರು, ಏಪ್ರಿಲ್ 5:ನನ್ನ ನಾಯಕತ್ವದ ಪರೀಕ್ಷೆ ಮಾಡಿಕೊಳ್ಳುವಷ್ಟು ನಾನು ದೊಡ್ಡವನಲ್ಲ. ರಾಜ್ಯದಲ್ಲಿ ಯಡಿಯೂರಪ್ಪ, ಶ್ರೀನಿವಾಸ್ ಪ್ರಸಾದ್ ಅವರಂತಹ ದೊಡ್ಡ ನಾಯಕರು ಅಖಾಡದಲ್ಲಿ ಇದ್ದಾರೆ. ಅವರ ಪರವಾಗಿ ಪ್ರಚಾರಕ್ಕಾಗಿ ನಾನು ಬಂದಿದ್ದೇನೆ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದು ಬಿಜೆಪಿ ಯುಚ ಮೋರ್ಚಾ ಕಾರ್ಯದರ್ಶಿ ವಿಜಯೇಂದ್ರ ತಿಳಿಸಿದರು.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಸಲು ಮೈತ್ರಿ ನಾಯಕರು ಹಲವು ಅಸ್ತ್ರಗಳನ್ನ ಬಿಟ್ಟಿದ್ದಾರೆ.ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅವರ ಎಲ್ಲಾ ಅಸ್ತ್ರಗಳೂ ಮೂಲೆ ಸೇರಿವೆ. ಮುಂದಿನ ಚುನಾವಣೆಯಲ್ಲಿ ಗೆಲ್ಲೋದು ರಾಘಣ್ಣ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಶಿವಮೊಗ್ಗದಲ್ಲಿ ಏನಿದ್ದರೂ ಯಡಿಯೂರಪ್ಪ ಅವರದ್ದೇ ಅಬ್ಬರ. ಅಲ್ಲಿಗೆ ಯಾರೇ ಬಂದರೂ ಯಡಿಯೂರಪ್ಪ ಅವರದ್ದೇ ಹವಾ. ಕಳೆದ ಬೈ ಎಲೆಕ್ಷನ್ ನಲ್ಲಿ ಗೆದ್ದಿದ್ದು ಬಿಜೆಪಿನೇ. ಆದರೆ ಗೆಲುವಿನ ಅಂತರ ಕಡಿಮೆ ಆಗಿತ್ತು ಅಷ್ಟೇ. ಈಗಾಗಲೇ ರಾಘಣ್ಣನ ಮೇಲೆ ಜನರಿಗೆ ವಿಶ್ವಾಸ ಇದೆ ಎಂದು ತಿಳಿಸಿದರು.

      BJP victory days has been started: BY Vijayendra

      ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಭಾಗದಲ್ಲಿ ನಾನು ಅಭ್ಯರ್ಥಿಯಾಗಬೇಕು ಎಂದು ಕೆಲಸ ಮಾಡಿದ್ದೆ. ಆಗ ಸಹಜವಾಗಿಯೇ ಪಕ್ಷದ ಮುಖಂಡರಲ್ಲಿ ನೋವು ಉಂಟಾಗಿತ್ತು. ಪ್ರೀತಿ ಕಡಿಮೆಯಾಗಿಲ್ಲ, ಬದಲಿಗೆ ಹೆಚ್ಚಾಗಿದೆ. ಈಗಲೂ ಅಷ್ಟೇ ಪ್ರೀತಿ ವಿಶ್ವಾಸದಿಂದ ನನಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದು ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದರು.

      ಶ್ರೀನಿವಾಸ ಪ್ರಸಾದ್ ಸರಳ ಸಜ್ಜನ ವ್ಯಕ್ತಿ. ಅವರು ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ‌. ಒಬ್ಬ ದಲಿತ ಮುಖಂಡರಾಗಿ, ಹಿರಿಯ ರಾಜಕಾರಣಿಯಾಗಿ ಎಲ್ಲಾ ಜಾತಿ ಸಮುದಾಯವನ್ನು ಸಮಾನವಾಗಿ ಕಂಡು ಜನರಿಗೆ ಹತ್ತಿರವಾಗಿದ್ದಾರೆ ಎಂದ ವಿಜಯೇಂದ್ರ, ಪ್ರತಾಪ್ ಸಿಂಹ ಅವರು ಜನಸ್ನೇಹಿ. ಅವರ ಕಾಯಕ ನೋಡಿ ಜನ ಮತ ನೀಡುತ್ತಾರೆ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+