Bengaluru-Mysuru Expressway: ಏಪ್ರಿಲ್‌ 1ರಿಂದಲೇ ಟೋಲ್‌ ಶುಲ್ಕ ಹೆಚ್ಚಳ: ಈ ಬಗ್ಗೆ ಪ್ರತಾಪ್‌ ಸಿಂಹ ಹೇಳಿದ್ದೇನು?, ಮಾಹಿತಿ

ಮೈಸೂರು, ಮಾರ್ಚ್‌, 31: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಆರಂಭವಾದ 17 ದಿನದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶೇಕಡಾ 22ರಷ್ಟು ಟೋಲ್​ ದರವನ್ನು ಹೆಚ್ಚಿಸಿದ್ದು, ಈ ಹೊಸ ದರ ಶನಿವಾರ (ಏಪ್ರಿಲ್​ 1)ದಿಂದಲೇ ಜಾರಿಯಾಗಲಿದೆ. ಇದಕ್ಕೆ ವಾಹನ ಸವಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಹೆದ್ದಾರಿ ಪ್ರಾಧಿಕಾರ ಪ್ರತೀ ವರ್ಷವೂ ಟೋಲ್ ದರವನ್ನು ಹೆಚ್ಚಿಸುವುದು ಸಾಮಾನ್ಯವಾಗಿರುತ್ತದೆ. ಆದ್ದರಿಂದ ದೇಶದ ಎಲ್ಲ ಟೋಲ್ ದರಗಳಲ್ಲೂ ಹೆಚ್ಚಳವಾಗಿದೆ ಎಂದರು.

ಮಾರ್ಚ್‌ 14 ರಂದು ಆರಂಭ

ಇನ್ನು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಮಾ. 14 ರಂದು ಪ್ರಾರಂಭವಾಗಿದೆ. ನಾನು ಈಗಾಗಲೇ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ಮಾತಾನಾಡಿದ್ದು, ಟೋಲ್ ದರ ಹೆಚ್ಚಳ ನಿರ್ಧಾರವನ್ನು ಪರಾಮರ್ಶೆ ಮಾಡಬೇಕು ಎಂದು ಮನವಿ ಮಾಡಿದ್ದೇನೆ. ಅಲ್ಲದೇ ಟೋಲ್ ದರವನ್ನು ಯಥಾಸ್ಥಿತಿ ಮುಂದುವರೆಸುವಂತೆ ಮನವಿ ಮಾಡಿದ್ದೇನೆ ಎಂದರು.

Bengaluru-Mysuru Expressway: Pratap Simha reaction about Toll fee increase

ಮಾ. 14 ರಿಂದ ಟೋಲ್ ಸಂಗ್ರಹ ಆರಂಭ ಆಗಿತ್ತು. ಇದೀಗ 17 ದಿನದಲ್ಲೇ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ಶೇಕಡಾ 22ರಷ್ಟು ದರವನ್ನು ಹೆಚ್ಚಳ ಮಾಡಲಾಗಿದೆ. ಇದರ ವಿರುದ್ಧ ವಾಹನ ಸವಾರರು ಕೆಂಡಕಾರುತ್ತಿದ್ದಾರೆ. ಇದೀಗ ಸಂಸದ ಪ್ರತಾಪ್ ಸಿಂಹ ಅವರು ಹೇಳಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಏನು ಹೇಳುತ್ತಾರೆಯೋ ಎಂದು ಕಾದುನೋಡಬೇಕಿದೆ.

ವಾಹನ ಸವಾರರ ಆಕ್ರೋಶ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಆರಂಭ ಆದಾಗಿನಿಂದ ಟೋಲ್‌ ವಿಚಾರವಾಗಿ ವಾಹನ ಸವಾರರು ಹಾಗೂ ಟೋಲ್‌ ಸಿಬ್ಬಂದಿ ನಡುವೆ ವಾರ್‌ಗಳು ಆಗುತ್ತಲೇ ಇವೆ. ಹಾಗಾದರೆ ಹೆಚ್ಚಳ ಮಾಡಿರುವ ಟೋಲ್‌ ಶುಲ್ಕದ ವಿವರವನ್ನು ಇಲ್ಲಿ ತಿಳಿಯಿರಿ. ಟೋಲ್‌ ದರದಲ್ಲಿ ಶೇ.22ರಷ್ಟು ಹೆಚ್ಚಳ ಮಾಡುತ್ತಿದ್ದು, ಇದು ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹೊಸ ದರಗಳ ವಿವರ

1. ಕಾರು, ವ್ಯಾನ್‌, ಜೀಪ್‌: 165 ರೂಪಾಯಿ, ದ್ವಿಮುಖ ಸಂಚಾರ 250 ರೂಪಾಯಿ ಮತ್ತು ಒಂದು ಬಾರಿ 30 ರೂಪಾಯಿ, ಮತ್ತೊಂದು ಬಾರಿ 45 ರೂಪಾಯಿ ಹೆಚ್ಚಳ ಮಾಡಲಾಗಿದೆ.

2. ಟ್ರಕ್‌, ಬಸ್‌, ಟ್ಯಾಕ್ಸಿ: 565 ರೂಪಾಯಿ, ದ್ವಿಮುಖ ಸಂಚಾರಕ್ಕೆ 850 ರೂಪಾಯಿ. ಹಾಗೆಯೇ ಒಂದು ಬಾರಿ 165 ರೂಪಾಯಿ, ಮತ್ತೊಂದು ಬಾರಿ 160 ರೂಪಾಯಿ ಹೆಚ್ಚಳ ಮಾಡಲಾಗಿದೆ.

3. ಲಘು ವಾಹನಗಳು, ಮಿನಿ ಬಸ್‌: 270 ರೂಪಾಯಿ, ದ್ವಿಮುಖ ಸಂಚಾರಕ್ಕೆ 405 ರೂಪಾಯಿ ಆಗಿದೆ. ಅಲ್ಲದೇ ಒಂದು ಬಾರಿ 50 ರೂಪಾಯಿ ಎರಡನೇ ಬಾರಿ 75 ರೂಪಾಯಿ ಹೆಚ್ಚಳ ಮಾಡಲಾಗಿದೆ.

Bengaluru-Mysuru Expressway: Pratap Simha reaction about Toll fee increase

4. ತ್ರಿ ಆಕ್ಸೆಲ್‌ ವಾಣಿಜ್ಯ ವಾಹನಗಳು: 615 ರೂಪಾಯಿ, ದ್ವಿಮುಖ ಸಂಚಾರಕ್ಕೆ 925 ರೂಪಾಯಿ ಆಗಿದೆ. ಮೊದಲ ಬಾರಿ 115 ರೂಪಾಯಿ ಹೆಚ್ಚಳ ಮಾಡಿದ್ದು, ಎರಡನೇ ಬಾರಿ 225 ರೂಪಾಯಿ ಹೆಚ್ಚಳ ಮಾಡಲಾಗಿದೆ.

5. ಭಾರಿ ವಾಹನಗಳು: 885 ರೂಪಾಯಿ, ದ್ವಿಮುಖ ಸಂಚಾರಕ್ಕೆ 1,330 ರೂಪಾಯಿ ಆಗಿದೆ. ಹಾಗೆಯೇ ಮೊದಲ ಬಾರಿ 165 ರೂಪಾಯಿ ಎರಡನೇ ಬಾರಿ 250 ರೂಪಾಯಿ ಹೆಚ್ಚಳ ಮಾಡಲಾಗಿದೆ.

6. ಇನ್ನು 7 ಅಥವಾ ಎಕ್ಸೆಲ್‌ ವಾಹನಗಳಿಗೆ 1,080 ರೂಪಾಯಿ, ದ್ವಿಮುಖ ಸಂಚಾರಕ್ಕೆ 1,620 ರೂಪಾಯಿ ಆಗಿದೆ. ಮೊದಲ ಬಾರಿ 200 ರೂಪಾಯಿ ಎರಡನೇ ಬಾರಿ 305 ರೂಪಾಯಿ ಹೆಚ್ಚಳ ಮಾಡಲಾಗಿದೆ. ಮೊದಲೇ ಟೋಲ್‌ ಆರಂಭವಾದಾಗಿನಿಂದ ವಾಹನ ಸವಾರರು ಟೋಲ್‌ ಸಿಬ್ಬಂದಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಇದೀಗ ಮತ್ತೆ ಟೋಲ್‌ ಶುಲ್ಕವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರು ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆಯೋ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+