ಮೈಸೂರಿನಲ್ಲಿ ಮತ್ತೊಂದು ಐಟಿ ರೈಡ್
ಮೈಸೂರು, ಆಗಸ್ಟ್ 3: ಮೈಸೂರಿನಲ್ಲಿ ಡಿ ಕೆ ಶಿವಕುಮಾರ್ ಅವರ ಮಾವ ತಿಮ್ಮಯ್ಯ ಅವರ ಮನೆ ಮೇಲೆ ಐಟಿ ದಾಳಿ ನಡೆದು, ಇನ್ನೂ ಪರಿಶೀಲನೆ ನಡೆಯುತ್ತಿರುವ ವೇಳೆಯಲ್ಲೇ ತಿಮ್ಮಯ್ಯ ಅವರ ಮಗ ಸತ್ಯನಾರಾಯಣ್ ಸ್ನೇಹಿತ ಎಡ್ವಿನ್ ಮನೆ ಮೇಲೆ ಸಹ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಜರ್ ಬಾದ್ ಪೊಲೀಸರ ಸಹಕಾರದೊಂದಿಗೆ ಐಟಿ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ್ದಾರೆ.
ನಗರದ ಇಟ್ಟಿಗೆಗೂಡಿನಲ್ಲಿರುವ ಎಡ್ವಿನ್ ಮನೆಗೆ ಮತ್ತೊಬ್ಬ ಐಟಿ ಮುಖ್ಯ ಅಧಿಕಾರಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಸದ್ಯ ಪೊಲೀಸರ ವಶದಲ್ಲಿ ಎಡ್ವಿನ್ ಇದ್ದು ತನಿಖೆ ಕೂಡ ಚುರುಕುಗೊಂಡಿದೆ













Click it and Unblock the Notifications