ರೆಬೆಲ್ ಸ್ಟಾರ್ ಅಂಬರೀಶ್ ಸಹೋದರ ಆನಂದ್ ನಿಧನ

ಮೈಸೂರು, ಸೆಪ್ಟೆಂಬರ್ 21: ನಟ ಅಂಬರೀಶ್ ಅವರ ಸಹೋದರ ಆನಂದ್ ಕುಮಾರ್(76) ನಿಧನರಾಗಿದ್ದಾರೆ.

ಅನಾರೋಗ್ಯದ ಕಾರಣ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೈಸೂರಿನಲ್ಲಿ ಎಂಎಚ್​ ಆನಂದ್ ಕುಮಾರ್​ ಅವರು ವಾಸವಾಗಿದ್ದರು ಎನ್ನಲಾಗಿದೆ. ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಓರ್ವ ಪುತ್ರ ಅಮೆರಿಕದಲ್ಲಿ ಇರುವ ಕಾರಣ ಅಂತ್ಯಕ್ರಿಯೆಯು ಸೋಮವಾರ ಮೈಸೂರಿನಲ್ಲಿ ಜರುಗಲಿದೆ.

Ambareesh Brother Passes Away Due To Heart Attack

ಮೂವರು ಸಹೋದರರು ವರ್ಷಕೊಬ್ಬರಂತೆ ಸಾವನ್ನಪ್ಪಿದ್ದಂತಾಗಿದೆ. ಅಂಬರೀಶ್ ಅವರ ಅಣ್ಣ ಡಾ. ಹರೀಶ್ (69) 2017 ನವೆಂಬರ್ 24ರಂದು ಮೃತಪಟ್ಟಿದ್ದರು.

ಸಹೋದರನನ್ನು ಕಳೆದುಕೊಂಡ ಸರಿಯಾಗಿ ಒಂದು ವರ್ಷದ ಬಳಿಕ ಅದೇ ದಿನಾಂಕದಂದು ಅಂಬರೀಶ್ ಕೂಡ ಕೊನೆಯುಸಿರೆಳೆದಿದ್ದರು. ಇದೀಗ ಅಂಬರೀಶ್ ಮೃತಪಟ್ಟು ಒಂದು ವರ್ಷಕ್ಕೆ ಅವರ ಅಣ್ಣ ಆನಂದ್ ಕುಮಾರ್ ನಿಧನರಾಗಿದ್ದಾರೆ.

ಅಂಬರೀಶ್ ಅವರ ನಿಧನದ ಬಳಿಕ ಮಂಡ್ಯದ ಜನತೆಯ ಒತ್ತಾಯದ ಮೇರೆಗೆ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ನಿಖಿಲ್ ಕುಮಾರಸ್ವಾಮಿ ಎದುರು ಜಯಗಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+