ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಶ್ವಾನ ಪ್ರದರ್ಶನ: ಗಮನ ಸೆಳೆದ ಸ್ವದೇಶಿ ವಿದೇಶಿ ಶ್ವಾನಗಳು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 23: ಶ್ವಾನಗಳೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಶ್ವಾನ ಪ್ರಿಯರಿಗೆಂದೇ ಭಾನುವಾರ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ 'ಡಾಗ್ ಶೋ' ಎಲ್ಲರ ಮೆಚ್ಚುಗೆ ಗಳಿಸಿದೆ. ನೂರಾರು ಮಂದಿ ಈ ಶ್ವಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದು, ವಿವಿಧ ತಳಿಯ ಶ್ವಾನಗಳ ಬಗ್ಗೆ ಮಾಹತಿ ಪಡೆದಿದ್ದಾರೆ.

ಮೈಸೂರು ನಗರದ ಸ್ಕೌಟ್ಸ್ ಮತ್ತು ಗೈಡ್ ಮೈದಾನದಲ್ಲಿ ಕೆನೈನ್ ಕ್ಲಬ್ ಆಫ್‌ ಮೈಸೂರು ವತಿಯಿಂದ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನದಲ್ಲಿ ಮೈಸೂರು, ಮಂಡ್ಯ, ಬೆಂಗಳೂರು, ವಿಜಯಪುರ, ಬೆಳಗಾವಿ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಹಾಗೂ ಕೇರಳ, ಊಟಿ, ತಮಿಳುನಾಡುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ವಾನಗಳು ಪಾಲ್ಗೊಂಡಿವೆ.

ಬೆಲ್ಜಿಯಂ ಶೆರ್ಡ್, ಜರ್ಮನ್ ಶೆರ್ಡ್, ಡಾಬರ್‌ಮನ್, ಗ್ರೇಟ್ ಡೇನ್, ಮಿನಿಯೇಚರ್, ರಾಟ್ ವಿಲ್ಲರ್, ಯಾರ್ಕ್ ಶೈರ್, ಪೊಮೊಮಿರಿಯನ್, ಸೈಬರಿಯನ್ ಹಸ್ಕಿಘಿ, ಜಾಕ್ ರಸ್ಸೆಲ್ ಟೆರಿರಿರ್, ಾಕ್ಸ್ ಟೆರಿರಿರ್, ಬುಲ್ ಟೆರಿರಿರ್, ಚೌಚೌ, ಊರೋಡಿಯಸಿನ್ ಸೇರಿದಂತೆ 33 ತಳಿಗಳ , 416 ನಾಯಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

All Breeds Dog Show In Mysuru

ಚಿನ್ನಾಟ, ಬೆಡಗು ಬಿನ್ನಾಣದಲ್ಲಿ ಹೆಜ್ಜೆ ಹಾಕಿದ ಶ್ವಾನಗಳ ಬುದ್ಧಿವಂತಿಕೆ ಹಾಗೂ ಪ್ರೀತಿಯನ್ನು ನೋಡಿದ ಜನರು, ಶ್ವಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ವಿಭಾಗಗಳಿಂದ ಭಾಗವಹಿಸುವ ಒಟ್ಟು ಶ್ವಾನಗಳ ಪೈಕಿ ಬೆಸ್ಟ್ ಇನ್ ಶೋಗೆ 9 ಶ್ವಾನಗಳು ಆಯ್ಕೆಯಾದವು.

ಕೆನೈನ್ ಕ್ಲಬ್ ಆಫ್‌ ಇಂಡಿಯಾದ ಮೈಕ್ರೋ ಚಿಪ್ ಹಾಗೂ ಮೂರು ತಲೆಮಾರಿನ ವಂಶಾವಳಿ ದಾಖಲೆ ಹೊಂದಿರುವ ಶ್ವಾನಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಇತ್ತು. 4ರಿಂದ 6 ತಿಂಗಳ ವಿಭಾಗ, 6ರಿಂದ 12 ತಿಂಗಳು, 12ರಿಂದ 18 ತಿಂಗಳು, 18ರಿಂದ 36 ತಿಂಗಳು ಮತ್ತು 36 ತಿಂಗಳ ಮೇಲ್ಪಟ್ಟ ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಎಲ್ಲ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ, ಬೆಸ್ಟ್ ಆ್ ಬ್ರೀಡ್, ಬೆಸ್ಟ್ ಇನ್ ಶೋ ಪ್ರಶಸ್ತಿ ನೀಡಲಾಯಿತು.

All Breeds Dog Show In Mysuru

ಮೈಸೂರಿನಲ್ಲಿ ನಡೆದ ಈ ಶ್ವಾನ ಪ್ರದರ್ಶನದಲ್ಲಿ ಮೈಲಾಕ್ ಅಧ್ಯಕ್ಷ ರಘು ಕೌಟಿಲ್ಯ, ಉಪಮೇಯರ್ ಡಾ.ಜಿ.ರೂಪ, ಮಾಜಿ ಶಾಸಕ ವಾಸು, ವಕೀಲ ಹರೀಶ್ ಹೆಗಡೆ, ಕೆನೈನ್ ಕ್ಲಬ್ ಆ್ ಮೈಸೂರು ಅಧ್ಯಕ್ಷ ಬಿ.ಪಿ.ಮಂಜುನಾಥ್, ಕ್ಲಬ್‌ನ ಕಾರ್ಯದರ್ಶಿ ಡಾ.ಸಂಜೀವ್ ಮೂರ್ತಿ, ಡಾ.ಜಯರಾಮಯ್ಯ ಮತ್ತಿತರರು ಹಾಜರಿದ್ದರು.

33 ತಳಿಗಳ ಸುಮಾರು 416 ನಾಯಿಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದು, ಮೈಸೂರಿನ ಶ್ವಾನ ಪ್ರಿಯರು ಕುಟುಂಬ ಸಮೇತರಾಗಿ ಆಗಮಿಸಿದ್ದು, ಮಕ್ಕಳು ವಿವಿಧ ಬಗೆಯ ಶ್ವಾನಗಳನ್ನು ಮುದ್ದಾಡಿದ್ದಾರೆ.

English summary
33 breeds 416 dogs are participate in the show organised by Canine Club of Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X