Get Updates
Get notified of breaking news, exclusive insights, and must-see stories!

ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಒಳ್ಳೆ ಹುಡುಗ ಪ್ರಥಮ್

Recommended Video

      ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಒಳ್ಳೆ ಹುಡುಗ ಪ್ರಥಮ್ | Oneindia Kannada

      ಮೈಸೂರು, ನವೆಂಬರ್ 29 : ನಿಮ್ಮ ಸೈದ್ಧಾಂತಿಕ ನಿಲುವು ನನಗೆ ಇಷ್ಟವಾಗಲ್ಲ ಕಣ್ರೀ... ನಾನು ಇದನ್ನು ಖಂಡಿಸ್ತೀನಿ, ಪ್ರತಿಭಟಿಸುತ್ತೀನಿ ಎನ್ನುವ ಮಾತು ಕೇಳಿದಾಗಲೆಲ್ಲ ನಮಗೆ ಥಟ್ಟೆಂದು ನೆನಪಾಗೋದು 'ಒಳ್ಳೆ ಹುಡುಗ' ಪ್ರಥಮ್.

      ಅಪ್ಪ -ಅಮ್ಮ ಇಟ್ಟಿರುವ ಹೆಸರಿನೊಂದಿಗೆ 'ಒಳ್ಳೆ ಹುಡುಗ' ಎನ್ನುವ ಅನುವಾಚಕಪದವನ್ನು ಸೇರಿಸಿಕೊಂಡಿರುವ ಕನ್ನಡಪರ ಹೋರಾಟಗಾರ 'ಬಿಗ್ ಬಾಸ್' ಪ್ರಥಮ್ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ.

      ಯಾವ ಪಕ್ಷದಿಂದ ಪ್ರಥಮ್ ಸ್ಪರ್ಧಿಸಲಿದ್ದಾರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್! ಆದರೆ, ಅವರು ವಿಧಾನಸಭೆ ಚುನಾವಣೆಗೆ ಧುಮುಕುತ್ತಿರುವುದಂತೂ ಸತ್ಯ.

      ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗುವ ಮುನ್ನ ಪ್ರಥಮ್ ಅವರು ಎಲ್ಲ ರಾಜಕೀಯ ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಬಿಗ್ ಬಾಸ್ ಗೆದ್ದ ನಂತರವೂ ಹಲವಾರು ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ, ಯಾರೊಂದಿಗೂ ಗುರುತಿಸಿಕೊಂಡಿಲ್ಲ ಎನ್ನುವುದು ಅವರ ನುಡಿ.

      ಈ ಕುರಿತಾಗಿ ಖುದ್ದು ಪ್ರಥಮ್ ರವರೇ 'ಒನ್ಇಂಡಿಯಾ ಕನ್ನಡ'ಕ್ಕೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ರಾಜಕೀಯ ಸೇರುವ ಆಶಯ, ಮುಂದಿನ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ.

      ಪ್ರಥಮ್ ನಿಮಗೆ ರಾಜಕೀಯ ಪ್ರವೇಶಿಸಲು ಆಸಕ್ತಿ ಇದೆಯೇ ?

      ಪ್ರಥಮ್ ನಿಮಗೆ ರಾಜಕೀಯ ಪ್ರವೇಶಿಸಲು ಆಸಕ್ತಿ ಇದೆಯೇ ?

      ಖಂಡಿತಾ ಇದೆ. ನಾನು ಎಲ್ಲರಂತೆ ಸಾಮಾನ್ಯ ಪ್ರಜೆ. ಆದರೆ ಅಸಮಾನ್ಯನಾಗಿ ಕೆಲಸ ಮಾಡಬೇಕೆಂಬುದು ನನ್ನ ಹಂಬಲ. ಅದಕ್ಕಾಗಿ ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಿಜ.

      ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದೀರಾ ಪ್ರಥಮ್?

      ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದೀರಾ ಪ್ರಥಮ್?

      ನಾನು ದೇವೇಗೌಡರ ಜೊತೆ, ಕುಮಾರಣ್ಣನ ಜೊತೆ ಕೆಲಸ ಮಾಡುತ್ತಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ನಾನು ಎಲ್ಲಿಯೂ ಕೂಡ ಇದೇ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆಂದು ಹೇಳಲಾರೆ. ಆದರೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದು ಮಾತ್ರ ನಿಜ. ಅದಕ್ಕಾಗಿ ಸಜ್ಜಾಗುತ್ತಿದ್ದೇನೆ. ತಯಾರಿ ಕೂಡ ನಡೆಸುತ್ತಿದ್ದೇನೆ.

      ನೀವೊಬ್ಬ ಸೆಲಿಬ್ರಿಟಿ ಆಗಿದ್ದೀರಾ ಅಂತ ಸ್ಫರ್ಧಿಸುತ್ತೀದ್ದೀರಾ ?

      ನೀವೊಬ್ಬ ಸೆಲಿಬ್ರಿಟಿ ಆಗಿದ್ದೀರಾ ಅಂತ ಸ್ಫರ್ಧಿಸುತ್ತೀದ್ದೀರಾ ?

      ಇಲ್ಲ. ನಾನು ಎಂದಿಗೂ ಆ ಭಾವನೆ ಹೊಂದಿದವನಲ್ಲ. ನಾನು ಸಾಮಾನ್ಯರೊಂದಿಗೆ ಸಾಮಾನ್ಯವಾಗಿಯೇ ಇದ್ದೇನೆ. ನಾನು ಈಗಲೂ ಕನ್ನಡಪರ ಕೆಲಸಗಳನ್ನು ಮಾಡುತ್ತಿದ್ದೇನೆ. ನಾನು ಜೀವನದ ಕೊನೆ ಉಸಿರಿನವರೆಗೂ ಅದನ್ನು ಮಾಡುತ್ತಿರುತ್ತೇನೆ. ಕಾವೇರಿ ಹೋರಾಟದ ವಿಚಾರವಾಗಿಯೂ ನನ್ನ ಕೈಲಾದ ಸೇವೆ ಮಾಡಿದ್ದೇನೆ. ನಾನು ರಿಯಾಲಿಟಿ ಶೋನಲ್ಲಿ ಗೆದ್ದ ಹಣವನ್ನು ನನಗಾಗಿ ನಾನು ವಿನಿಯೋಗಿಸಿಲ್ಲ. ನನ್ನ ಬಳಿ 5 ಸಿನಿಮಾಗಳು ರಿಲೀಸ್ ಗೆ ಸಜ್ಜಾಗಿದೆ. ಇನ್ನು 6 ಸಿನಿಮಾಗಳಿಗೆ ಸಹಿ ಹಾಕಿದ್ದೇನೆ. ಹಾಗಿದ್ದರೂ ಸಾಮಾನ್ಯನಂತೆಯೇ ಜನರೊಡನೆ ಬೆರೆಯುತ್ತೇನೆ ಕೂಡ. ನನಗೆ ಅವಕಾಶ ಮಾಡಿಕೊಟ್ಟವರೇ ನಮ್ಮ ಕನ್ನಡಿಗರು. ಅವರ ಸೇವೆಗೆ ನನ್ನ ರಾಜಕೀಯ ಪ್ರವೇಶ ಅಷ್ಟೇ.

      ಎಲ್ಲಿಂದ ಸ್ಪರ್ಧಿಸಲಿದ್ದಾರೆ ಲಾರ್ಡ್ ಪ್ರಥಮ್?

      ಎಲ್ಲಿಂದ ಸ್ಪರ್ಧಿಸಲಿದ್ದಾರೆ ಲಾರ್ಡ್ ಪ್ರಥಮ್?

      ಚುನಾವಣೆಗೆ ಸ್ಪರ್ಧಿಸಲು 3 ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಒಂದು ನನ್ನ ಸ್ವಕ್ಷೇತ್ರ ಚಾಮರಾಜನಗರ. ಮತ್ತೊಂದು ಚಾಮರಾಜಪೇಟೆ. ಇನ್ನೊಂದು ಕ್ಷೇತ್ರ ಹುಡುಕಾಟ ನಡೆಸುತ್ತಿದ್ದೇನೆ. ಎದುರಾಳಿಯ ಎದುರಿಗೆ ನಿಂತರೂ ಗೆಲುವು ನನ್ನದಾಗಬೇಕು ಅಂತಹ ಸ್ಟ್ರಾಂಗ್ ಕ್ಯಾಂಡಿಡೇಟ್ ನಾನಾಗಬೇಕು. ಅಂತಹ ಕ್ಷೇತ್ರದ ಆಯ್ಕೆಗಾಗಿ ಹುಡುಕಾಟ ನಡೆಸಿದ್ದೇನೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+