ಮಹಿಳೆಯ ಆ ಒಂದು ಎಚ್ಚರಿಕೆ ಆಕಾಶದಿಂದ ವಿಮಾನವನ್ನೇ ಕೆಳಗಿಳಿಸಿತು
ಮುಂಬೈ, ಡಿಸೆಂಬರ್ 15: ಮುಂಬೈನಿಂದ ಇಂಡಿಗೋ ವಿಮಾನ ಲಕ್ನೋಗೆ ಹಾರಾಟ ಆರಂಭಿಸಿತ್ತು. ಹಾರಾಟ ಆರಂಭಗೊಂಡು ಕೆಲವೇ ನಿಮಿಷದಲ್ಲಿ ಮಹಿಳೆಯೊಬ್ಬಳು ಮುಂಬೈ ವಿಮಾನ ನಿಲ್ದಾಣದ ಕೌಂಟರ್ ಬಳಿ ಬಂದು ಈ ವಿಮಾನದಲ್ಲಿ ಬಾಂಬ್ ಇದೆ ಕೂಡಲೇ ತುರ್ತು ಲ್ಯಾಂಡಿಂಗ್ ಮಾಡಿಸಿ ಎಂದು ಹೇಳಿದ್ದಕ್ಕೆ ಇಂಡಿಗೋ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು.
ಮಹಿಳೆ ಕೇವಲ ಎಚ್ಚರಿಕೆ ನೀಡಿದ್ದಷ್ಟೇ ಅಲ್ಲದೆ ಕೆಲವು ಫೋಟೊಗಳನ್ನು ತೋರಿಸಿ ಇವರಿಂದ ದೇಶಕ್ಕೆ ತೊಂದರೆ ಇದೆ ಎಂದು ಹೇಳಿದ್ದಾಳೆ. ವಿಮಾನವು ಬೆಳಗ್ಗೆ 6.5 ಹಾರಾಟ ಆರಂಭಿಸಿತ್ತು.ಎಷ್ಟು ಮಂದಿ ಪ್ರಯಾಣಿಕರಿದ್ದರು ಎನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ. ದೆಹಲಿಗೆ ತೆರಳುತ್ತಿದ್ದ ಮಹಿಳೆಯೊಬ್ಬಳು ಇಂಡಿಗೋ ಚೆಕ್‌ಇನ್ ಕೌಂಟರ್ ಟಿ 1 ಬಳಿ ಬಂದು ಇಂಡಿಗೋ ವಿಮಾನ 6 ಇ 3612 ವಿಮಾನದಲ್ಲಿ ಬಾಂಬ್ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಳಿಕ ಸಿಐಎಸ್‌ಎಫ್ ಪೊಲೀಸರು ಆಕೆಯನ್ನು ಹೆಚ್ಚಿನ ತನಿಖೆಗಾಗಿ ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಸಿಐಎಸ್‌ಎಫ್ ಕಮಾಂಡರ್ ಮಾಹಿತಿ ನೀಡಿದ್ದು ಅದು ಹುಸಿ ಬಾಂಬ್ ಕರೆ ಅಲ್ಲ ಅದು ಸತ್ಯವೆಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications