ಪತಿಯಿಂದ ನನ್ನ ರಕ್ಷಿಸಿ: ವಿಡಿಯೋದಲ್ಲಿ ಮುಂಬೈ ಮಹಿಳೆಯ ಆರ್ತನಾದ
ಮುಂಬೈ, ಫೆಬ್ರವರಿ 05: "ಈ ಪತಿಯಿಂದ ಹೇಗಾದರೂ ಮಾಡಿ ನನ್ನನ್ನು ರಕ್ಷಿಸಿ" ಎಂದು ಮಹಿಳೆಯೊಬ್ಬರು ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಪತಿಯಿಂದ ನಿರಂತರ ಕಿರುಕುಳ ಅನುಭವಿಸುತ್ತಿರುವ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗದಿದ್ದಾಗ ಬೇರೆ ದಾರಿ ಕಾಣದೆ ಸೆಲ್ಫಿ ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹರಿಬಿಟ್ಟಿದ್ದಾರೆ.
ಮುಂಬೈಯ ಖಾರ್ ಪ್ರದೇಶದಲ್ಲಿ ಅಪಾರ್ಟ್ಮೆಂಟೊಂದರಲ್ಲಿ ವಾಸಿಸುತ್ತಿರುವ ಈ ಮಹಿಳೆಯ ಪತಿ ಇದೇ ಅಪಾರ್ಟ್ಮೆಂಟಿನ ಬೇರೆ ಮಹಡಿಯಲ್ಲಿ ವಾಸವಿದ್ದಾರೆ. ಅವರಿಗೆ ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧವಿದೆ ಮತ್ತು ಅವರು ನಿರಂತರವಾಗಿ ಜೂಜಾಡುತ್ತಾರೆ ಎಂಬುದು ತಿಳಿದುಂದಿದೆ.
Cry of a women goes unheard with #KharPoliceStation. @MumbaiPolice @CPMumbaiPolice. Please do the needful immediately before something untoward happens. #BetibachaoBetiPadao. pic.twitter.com/9DK5Bn1nJz
— Ashoke Pandit (@ashokepandit) February 4, 2018
"ದಯವಿಟ್ಟು ನನಗೆ ಸಹಾಯ ಮಾಡಿ. ಏಕೆಂದರೆ ಈ ಮನುಷ್ಯ ನನಗೆ ಮಾನಸಿಕ ಕಿರುಕು ನೀಡುತ್ತಿದ್ದಾನೆ. ಒಂದು ದಿನ ನನ್ನನ್ನು ಸಾಯಿಸಿಯೇ ಬಿಡುತ್ತಾನೆ. ನನಗೆ ನ್ಯಾಯ ಸಿಕ್ಕಿಲ್ಲವೆಂದರೆ ನಾನು ಇದೇ ಖಾರ್ ನ ಬೀದಿಯಲ್ಲಿ ನನ್ನ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತೇನೆ. ನನಗೆ ನ್ಯಾಯಕೊಡಿ..." ಎಂದು ಟ್ವಿಟ್ಟರ್ ವಿಡಿಯೋದಲ್ಲಿ ಈಕೆ ಅಂಗಲಾಚಿದ್ದಾರೆ.
ದಂಪತಿಗೆ ಮೂವರು ಮಕ್ಕಳಿಂದ ಇಬ್ಬರು ಗಂಡು ಮಕ್ಕಳು ಪತಿ ಜೊತೆಗಿದ್ದು, ಓರ್ವ ಮಗಳು ಪತ್ನಿಯೊಂದಿಗಿದ್ದಾಳೆ.
ಟ್ವಿಟ್ಟರ್ ವಿಡಿಯೋ ನೋಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.












Click it and Unblock the Notifications