ವೈರಲ್ ವಿಡಿಯೋ ; ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ಕೊಟ್ಟಿದ್ದು ಹೀಗೆ
ಮುಂಬೈ, ಮಾರ್ಚ್ 04 : ಮಹಾರಾಷ್ಟ್ರದಲ್ಲಿ 10ನೇ ತರಗತಿ ಪರೀಕ್ಷೆಗಳು ಮಂಗಳವಾರದಿಂದ ಆರಂಭವಾಗಿವೆ. ಮೊದಲ ದಿನವೇ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ಕೊಡಲು ಗೋಡೆ ಏರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Recommended Video
ಮಹಾಗಾಂವ್‌ನಲ್ಲಿರುವ ಜಿಲ್ಲಾ ಪರಿಷದ್ ಶಾಲೆಯಲ್ಲಿ ವಿದ್ಯಾರ್ಥಿಗಳು ಮಂಗಳವಾರ ಪರೀಕ್ಷೆ ಬರೆಯುತ್ತಿದ್ದರು. ಆಗ ಕಾಪಿ ಚೀಟಿ ಕೊಡಲು ಶಾಲೆಯ ಹೊರಭಾಗದಲ್ಲಿ ಜನರು ಕಾದು ನಿಂತಿದ್ದರು. ಶಾಲೆಯ ಕಾಪೌಂಡ್ ಹತ್ತಿ ಚೀಟಿ ಎಸೆಯುತ್ತಿದ್ದಾರೆ.
ಕಾಪೌಂಡ್ ಹತ್ತಿ ಒಳಗೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ನೀಡಲಾಗುತ್ತಿದೆ. ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ವಿಡಿಯೋ ಈಗ ವೈರಲ್ ಆಗಿದೆ. ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಏನು ಮಾಡುತ್ತಿದ್ದರು? ಎಂಬ ಪ್ರಶ್ನೆ ಎದ್ದಿದೆ.

ಮಾರ್ಚ್ 3ರಿಂದ 23ರ ತನಕ ಮಹಾರಾಷ್ಟ್ರದಲ್ಲಿ 10ನೇ ತರಗತಿ ಪರೀಕ್ಷೆಗಳು ನಡೆಯುತ್ತದೆ. ಒಟ್ಟು 1,765,000 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಮಂಗಳವಾರ ಪರೀಕ್ಷೆಗಳು ಆರಂಭವಾಗಿದ್ದು, ಮೊದಲ ದಿನವೇ ಕಾಪಿ ಹೊಡೆಯಲು ಅವಕಾಶ ನೀಡಲಾಗಿದೆ.
ಮಾರ್ಚ್ 3ರ ಮಂಗಳವಾರ ಮರಾಠಿ, ಹಿಂದಿ, ಉರ್ದು, ಗುಜರಾತಿ, ಕನ್ನಡ, ತೆಲಗು, ತಮಿಳು, ಬೆಂಗಾಲಿ, ಪಂಜಾಬಿ ಸೇರಿದಂತೆ ವಿವಿಧ ಭಾಷೆಯ ಪರೀಕ್ಷೆಗಳು ಇದ್ದವು.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ
#WATCH Maharashtra: People seen climbing the boundary walls and providing chits to students, writing their class X Matriculation examination at Zila Parishad School, Mahagaon in Yavatmal district. (03.03.2020) pic.twitter.com/IqwC4tdhLQ
— ANI (@ANI) March 3, 2020












Click it and Unblock the Notifications