ವಿಡಿಯೋ:ಚಲಿಸುತ್ತಿರುವ ರೈಲಿಂದ ಬಿದ್ದರೂ ಪವಾಡಸದೃಶವಾಗಿ ಪಾರಾದ ಯುವತಿ
Recommended Video

ಮುಂಬೈ, ಅಕ್ಟೋಬರ್ 04: ಮುಂಬೈಯ ರೈಲೊಂದರಲ್ಲಿ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಅಕಸ್ಮಾತ್ತಾಗಿ ಹಳಿಗಳ ಮೇಲೆ ಬಿದ್ದರೂ ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ.
ಸಹ ಪ್ರಯಾಣಿಕರ ಸಮಯಪ್ರಜ್ಞೆಯಿಂದಾಗಿ ಯುವತಿ ಬದುಕುಳಿದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಿಲ್ಲಿ ವೈರಲ್ ಆಗಿದೆ.

ರೈಲಿನಲ್ಲಿ ಬಾಗಿಲ ಬಳಿ ನಿಲ್ಲುವುದು ಅಪಾಯವೆಂಮದು ಗೊತ್ತಿದ್ದರೂ ಕೆಲವರು ಅಲ್ಲಿಯೇ ನಿಲ್ಲುವ ಅಭ್ಯಾಸವನ್ನು ಬಿಟ್ಟಿಲ್ಲ. ಅಂತೆಯೇ ಥಾಣೆ ಜಿಲ್ಲೆಯ 17 ವರ್ಷದ ಯುವತಿಯೊಬ್ಬರು ಬಾಗಿಲ ಬಳಿ ನಿಂತಿದ್ದರು. ಈ ಸಂದರ್ಭದಲ್ಲಿ ಆಕೆ ಜೋರಾಗಿ ಚಲಿಸುತ್ತಿದ್ದ ಅದೇ ರೈಲಿನಿಂದ ಬಿದ್ದಿದ್ದಾರೆ. ಆದರೆ ತಕ್ಷಣವೇ ಆಕೆಯೊಂದಿಗಿದ್ದ ಸಹ ಪ್ರಯಾಣಿಕರು ಆಕೆಯ ಟಿ ಶರ್ಟ್ ಹಿಡಿದು, ಆಕೆಯನ್ನು ಮೇಲಕ್ಕೆತ್ತಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
To all the people traveling by Mumbai local trains, be careful while you stand on the footpath. pic.twitter.com/qkDthV1CEJ
— Ninja with 4 As (@SecretNinjaaaa) October 3, 2018
ರೈಲು ಖಾಲಿಯಿದ್ದರೂ ಯುವತಿ ಬೇಕೆಂದೇ ಬಾಗಿಲ ಬಳಿ ನಿಂತಿದ್ದರು ಎಂದು ಸಹಪ್ರಯಾಣಿಕರು ಆರೋಪಿಸಿದ್ದಾರೆ. ಈ ಕುರಿತು ರೈಲ್ವೇ ಪೊಲೀಸರು ವಿಚಾರಣೆ ನಡೆಸಿದ್ದು, 'ತಾನು ಫೋನಿನಲ್ಲಿ ಮಾತನಾಡುತ್ತಿದ್ದಾಗ ಆಯತಪ್ಪಿ ಬಿದ್ದೆ' ಎಂದು ಯುವತಿ ಹೇಳಿಕೆ ನೀಡಿದ್ದಾರೆ.












Click it and Unblock the Notifications