ಹಿಂದಿ ಚಿತ್ರರಂಗದ ಹಿರಿಯ ನಟ ಶಶಿಕಪೂರ್ ನಿಧನ

Posted By:
Subscribe to Oneindia Kannada

ಮುಂಬೈ, ಡಿಸೆಂಬರ್ 04:ಹಿಂದಿ ಚಿತ್ರರಂಗದ ಹಿರಿಯನಟ ಶಶಿಕಪೂರ್ ಅವರು ಸೋಮವಾರದಂದು ಮುಂಬೈನ ಕೊಕಿಲಾಬೇನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದ ದೀರ್ಘಕಾಲ ಬಳಲುತ್ತಿದ್ದರು. ಭಾನುವಾರ ಸಂಜೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಮಂಗಳವಾರ ಬೆಳಗ್ಗೆ ನೆರವೇರಿಸಲಾಗುತ್ತದೆ. 2014ರಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದ ಶಶಿ ಕಪೂರ್ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

Veteran Actor Shashi Kapoor Passes Away

1940ರಲ್ಲಿ ಚಿತ್ರರಂಗ ಪ್ರವೇಶಿಸಿದ ಪೃಥ್ವಿರಾಜ್ ಕಪೂರ್ ಅವರ ಪುತ್ರ ಶಶಿ ಅವರು 61ಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ದೀವಾರ್, ಸಿಲ್ ಸಿಲಾ ಮುಂತಾದ ಚಿತ್ರಗಳು ಬಹು ಜನಪ್ರಿಯವಾಗಿವೆ.2011ರಲ್ಲಿ ಪದ್ಮ ಭೂಷಣ ಪ್ರಶಸ್ತಿ, 2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗಳಿಸಿದ್ದರು. ಕಪೂರ್ ಕುಟುಂಬದಿಂದ ಇವರ ಅಪ್ಪ ಪೃಥ್ವಿರಾಜ್ ಕಪೂರ್, ಅಣ್ಣ ರಾಜ್ ಕಪೂರ್ ಕೂಡಾ ದಾದಾಸಾಹೇಬ್ ಪ್ರಶಸ್ತಿ ಪುರಸ್ಕೃತರು.

ಮೃತರು ಮಕ್ಕಳಾದ ಕುನಾಲ್ ಕಪೂರ್, ಕರಣ್ ಕಪೂರ್ ಹಾಗೂ ಸಂಜನಾ ಕಪೂರ್ ಅಲ್ಲದೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veteran actor Shashi Kapoor passed away on Monday(December 04) in Mumbai at the age of 79. The actor was suffering from old age related illness. According to reports, funeral will be done tomorrow morning.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ