Breaking: ಬಾಲಿವುಡ್ ಹಿರಿಯ ನಟ ಮಿಥಿಲೇಶ್ ಚತುರ್ವೇದಿ ನಿಧನ

ಮುಂಬೈ, ಆ.04: ಕೋಯಿ ಮಿಲ್ ಗಯಾ, ಅಶೋಕ, ಗದರ್ ಏಕ್ ಪ್ರೇಮ್ ಕಥಾ, ರೆಡಿ ಚಿತ್ರಗಳು ಸೇರಿದಂತೆ ಕಿರುತೆರೆಯಲ್ಲಿಯೂ ತಮ್ಮದೇ ಸ್ಥಾನ ಗಿಟ್ಟಿಸಿಕೊಂಡಿದ್ದ ರಂಗಭೂಮಿ ಮತ್ತು ಹಿಂದಿ ಸಿನಿರಂಗದ ಹಿರಿಯ ನಟ ಮಿಥಿಲೇಶ್ ಚತುರ್ವೇದಿ ನಿಧನರಾಗಿದ್ದಾರೆ.

ಗುರುವಾರ ಬೆಳಗ್ಗೆ ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಈ ದುಖಃದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಿಥಿಲೇಶ್ ಚತುರ್ವೇದಿ ಅವರ ಚಿತ್ರವನ್ನು ಹಂಚಿಕೊಂಡು "RIP Mithileshji" ಎಂದು ಸಂತಾಪ ಸೂಚಿಸಿದ್ದಾರೆ.

ವರದಿಗಳ ಪ್ರಕಾರ, ಹಿರಿಯ ನಟ ಮಿಥಿಲೇಶ್ ಚತುರ್ವೇದಿ ತಮ್ಮ ತವರು ಲಕ್ನೋದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಆಗಸ್ಟ್ 3 ರಂದು ನಿಧನರಾಗಿದ್ದಾರೆ. ಅವರ ಅಳಿಯ ಆಶಿಶ್ ಕೂಡ ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಾವಿಗೆ ಸಂತಾಪ ಸೂಚಿಸಿದ್ದಾರೆ.

 Veteran actor Mithilesh Chaturvedi Dies Due To Heart Attack

"ನೀವು ವಿಶ್ವದ ಅತ್ಯುತ್ತಮ ತಂದೆ, ನಿಮ್ಮ ಸ್ವಂತ ಮಗನಂತೆ ನನಗೆ ಪ್ರೀತಿಯನ್ನು ನೀಡಿದ್ದೀರಿ" ಎಂದು ನಟ ಮಿಥಿಲೇಶ್ ಚತುರ್ವೇದಿ ಅವರ ಅಳಿಯ ಆಶಿಶ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ನಟನ ಸಾವಿನ ಸುದ್ದಿ ತಿಳಿದ ನಂತರ ನಟರು, ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ.

ಪ್ರಸಿದ್ಧ ರಂಗಭೂಮಿ ಮತ್ತು ಚಲನಚಿತ್ರ ನಟ ಮಿಥಿಲೇಶ್ ಚತುರ್ವೇದಿ ಹೃದಯಾಘಾತದಿಂದ ನಿಧನರಾದರು. ಅವರ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

Recommended Video

      ಧೋನಿ ಐಡಿಯಾದಿಂದ‌ ಚಿನ್ನದ‌ ಪದಕ:ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಭಾರತದ ಲಾನ್ ಬೌಲ್ಸ್ ಟೀಂ | OneIndia Kannada

      ಬಾಲಿವುಡ್‌ನಲ್ಲಿ ತುಂಬಾ ಸಕ್ರಿಯವಾಗಿದ್ದ ಮಿಥಿಲೇಶ್ ಚತುರ್ವೇದಿ ಕಿರುತೆರೆ ಧಾರವಾಹಿ ಪಟಿಯಾಲಾ ಬೇಬ್ಸ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದರು. ಜೊತೆಗೆ ನೀಲಿ ಚತ್ರಿ ವಾಲೆ, ಕಯಾಮತ್ ಮುಂತಾದ ಕಿರುತೆರೆ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದರು. ವರದಿಗಳ ಪ್ರಕಾರ, ತಳ್ಳಿ ಜೋಡ್ ಎಂಬ ವೆಬ್ ಸೀರಿಸ್‌ನಲ್ಲಿಯೂ ನಟಿಸಬೇಕಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+