ಮುಂಬೈ ತುಂಬ ನಿಗೂಢ ದುರ್ವಾಸನೆ: ಅನಿಲ ಸೋರಿಕೆ ವದಂತಿ ನಿಜಾನಾ?
ಮುಂಬೈ, ಸೆಪ್ಟೆಂಬರ್ 20: ವಾಣಿಜ್ಯನಗರ ಮುಂಬೈಯಲ್ಲಿ ಇದ್ದಕ್ಕಿದ್ದಂತೆ ಆರಂಭವಾದ ಅಸಹನೀಯ ಎನ್ನಿಸುವಂಥ ದುರ್ವಾಸನೆ ನಾಗರಿಕರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.
ಚೆಂಬುರ್ ನಲ್ಲಿರುವ ರಾಷ್ಟ್ರೀಯ ಕೆಮಿಕಲ್ ಫರ್ಟಿಲೈಸರ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗುತ್ತಿರಬಹುದು ಎಂಬ ವದಂತಿ ಹಬ್ಬಿತ್ತು. ಆದರೆ ಬೃಹನ್ಮುಂಬೈ ಮಹಾನಗರ ಪಾಲಿಕೆ ಈ ವದಂತಿಯನ್ನು ತಳ್ಳಿಹಾಕಿದ್ದು, ಅನಿಲ ಸೋರಿಕೆ ವದಂತಿ ಸುಳ್ಳು ಎಂದಿದೆ.

ಗುರುವಾರ ರಾತ್ರಿ ಸುಮಾರು 10 ಗಂಟೆಯ ಹೊತ್ತಿಗೆ ಚೆಂಬೂರ್, ಮಂಖುರ್ಡ್, ಗೋವಂಡಿ, ಚಂಡಿವಾಲಿ, ಪೊವೈ, ಘಾಟ್ಕೊಪರ್ ಮತ್ತು ಅಂಧೇರಿಗಳಲ್ಲಿ ವಿಚಿತ್ರ ದುರ್ವಾಸನೆಯ ಅನುಭವವಾಗಿತ್ತು.
ರಾಷ್ಟ್ರೀಯ ರಸಗೊಬ್ಬರ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿದೆ ಎಂಬ ವದಂತಿ ಹಬ್ಬುತ್ತಿದ್ದಂತೆಯೇ ಮತ್ತಷ್ಟು ಆತಂಕ ಸೃಷ್ಟಿಯಾಗಿತ್ತು. ಆದರೆ ಮುಂಬೈ ಮಹಾನರ ಪಾಲಿಕೆ ಅದನ್ನು ತಳ್ಳಿಹಾಕಿತ್ತು. ಜೊತೆಗೆ ಮಹಾನಗರ ಗ್ಯಾಸ್ ಲಿಮಿಟಿಟೆಡ್ ಸಹ ತನ್ನ ಪೈಪ್ ಲೈನ್ ನಲ್ಲಿ ಎಲ್ಲಿಯೂ ಅನಿಲ ಸೋರಿಕೆಯಾಗಿಲ್ಲ ಎಂದು ಖಚಿತ ಪಡಿಸಿದೆ.
ಊ ವಾಸನೆಯ ಮೂಲವನ್ನು ಪತ್ತೆಹಚ್ಚಲು ಬೃಹನ್ಮುಂಬೈ ಮಹಾನಗರ ಪಾಲಿಕೆ ನಗರದ ಉದ್ದಕ್ಕೂ 9 ಫೈರ್ ಎಂಜಿನ್ ಗಳ್ನು ನಿಯುಕ್ತಿಗೊಳಿಸಿದೆ.












Click it and Unblock the Notifications