ಶಿವಸೇನಾ ಮುಖವಾಣಿ ಸಾಮ್ನಾಗೆ ಹೊಸ ಸಂಪಾದಕರ ನೇಮಕ

ಮುಂಬೈ, ಮಾರ್ಚ್ 1: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಿವಸೇನಾ ಮುಖವಾಣಿ ಸಾಮ್ನಾ ಸಂಪಾದಕ ಸ್ಥಾನದಿಂದ ಕೆಳಗಿಳಿಸಿದ್ದಾರೆ.ಸಾಮ್ನಾಗೆ ಹೊಸ ಸಂಪಾದಕರ ನೇಮಕ ಮಾಡಿ ಭಾನುವಾರದಂದು ಆದೇಶ ಹೊರಡಿಸಲಾಗಿದೆ. ಉದ್ಧವ್ ಅವರ ಪತ್ನಿ ರಶ್ಮಿ ಠಾಕ್ರೆ ಅವರನ್ನು ಸಂಪಾದಕಿಯಾಗಿ ನೇಮಿಸಲಾಗಿದೆ.

ಪ್ರಬೋಧನ್ ಪ್ರಕಾಶನದಿಂದ ಹೊರ ಬರುವ ಸಾಮ್ನಾ ಸಂಸ್ಥೆಯ ದಿನಪತ್ರಿಕೆ ಸಾಮ್ನಾ, ದೋಪಹರ್ ಕಾ ಸಾಮ್ನಾ ಎರಡರ ಜವಾಬ್ದಾರಿಯನ್ನು ರಶ್ಮಿ ನೋಡಿಕೊಳ್ಳಲಿದ್ದಾರೆ. ಬಾಳಾ ಠಾಕ್ರೆ ಅವರ ಆಶಯದಂತೆ ಪತ್ರಿಕೆ ಮುನ್ನಡೆಸಲಿದ್ದಾರೆ ಎಂದು ಉದ್ಧವ್ ಹೇಳಿದ್ದಾರೆ.

ಸಂಸ್ಥೆಯ ಪ್ರಕಾಶಕರಾದ ರಾಜೇಂದ್ರ ಎಂ ಭಾಗ್ವತ್ ಅವರು ಈ ಘೋಷಣೆಯನ್ನು ಭಾನುವಾರದ ಆವೃತ್ತಿಯಲ್ಲಿ ಪ್ರಕಟಿಸಿದ್ದಾರೆ. ಟ್ರಸ್ಟಿಗಳಾಗಿ ಸುಭಾಷ್ ದೇಸಾಯಿ ಹಾಗೂ ಲೀಲಾಧರ್ ಬಿ ಡಾಕೆ ಅವರನ್ನು ಹೆಸರಿಸಲಾಗಿದೆ.

Uddhav Thackerays Wife Named Editor Of Sena Mouthpiece Saamana

ರಾಜ್ಯಸಭಾ ಸದಸ್ಯ, ಹಿರಿಯ ಮುಖಂಡ ಸಂಜಯ್ ರಾವತ್ ಅವರು ಕಾರ್ಯಕಾರಿ ಸಂಪಾದಕರಾಗಿ ಮುಂದುವರೆಯುವ ಸಾಧ್ಯತೆಯಿದೆ. 1983ರ ಜನವರಿ 23ರಂದು ಮರಾಠಿ ಪತ್ರಿಕೆ ಸಾಮ್ನಾ ಹಾಗೂ 1993ರ ಫೆಬ್ರವರಿ 23ರಂದು ದೋಪಹರ್ ಕಾ ಸಾಮ್ನಾ ಹಿಂದಿ ಪತ್ರಿಕೆಯನ್ನು ಬಾಳಾಠಾಕ್ರೆ ಮೊದಲಿಗೆ ಹೊರತಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಬಾಳಾ ಠಾಕ್ರೆ ನಿಧನ ನಂತರ ಸಂಪಾದಕರಾಗಿ ನಿಯುಕ್ತಿಗೊಂಡ ಉದ್ಧವ್ ಅವರು 2019ರ ನವೆಂಬರ್ 28ರಂದೇ ರಾಜೀನಾಮೆ ಸಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+