• search
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈತರ ಬೇಡಿಕೆಗೆ ತಲೆಬಾಗಿದ ಫಡ್ನವೀಸ್; 'ಕಿಸಾನ್ ಲಾಂಗ್ ಮಾರ್ಚ್' ಅಂತ್ಯ?

By Sachhidananda Acharya
|

ಮುಂಬೈ, ಮಾರ್ಚ್ 12: 'ಕಿಸಾನ್ ಲಾಂಗ್ ಮಾರ್ಚ್' ಹೆಸರಿನಲ್ಲಿ ಮಹಾರಾಷ್ಟ್ರದ ಶಕ್ತಿಸೌಧ ಮುಂಬೈಗೆ ತಮ್ಮ ಬೇಡಿಕೆಗಳನ್ನು ಹೊತ್ತು ತಂದಿದ್ದ 35,000 ಕ್ಕೂ ಅಧಿಕ ರೈತರ ಸಂಘಟನಾ ಶಕ್ತಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಲೆಬಾಗಿದ್ದಾರೆ. 170 ಕಿಲೋಮೀಟರ್ ದೂರದ ನಾಸಿಕ್ ನಿಂದ ನಡೆದು ಬಂದ ಅನ್ನದಾತರ ಹೆಚ್ಚಿನ ಬೇಡಿಕೆಗಳನ್ನು ಅವರು ಒಪ್ಪಿಕೊಂಡಿದ್ದಾರೆ.

ರೈತರ ಪ್ರತಿನಿಧಿಗಳ ಜತೆ ಇಂದು 'ವಿಧಾನ ಭವನ್'ನಲ್ಲಿ ನಡೆದ ಸಂಧಾನ ಕಾರ್ಯಕ್ರಮದ ನಂತರ ಪ್ರತಿಕ್ರಿಯೆ ನೀಡಿದ ದೇವೇಂದ್ರ ಫಡ್ನವೀಸ್, "ಅವರ (ರೈತರ) ಹೆಚ್ಚಿನ ಬೇಡಿಕೆಗಳಿಗೆ ನಾವು ಒಪ್ಪಿಕೊಂಡಿದ್ದೇವೆ ಮತ್ತು ಈ ಸಂಬಂಧ ಅವರಿಗೆ ಲಿಖಿತ ಪತ್ರ ನೀಡಿದ್ದೇವೆ," ಎಂದು ಹೇಳಿದರು.

ದೇಶಕ್ಕೆ ಬೇಕಿರುವುದು ಅಭಿವೃದ್ಧಿ, ಜಾತಿಸಂಘರ್ಷವಲ್ಲ: ಫಡ್ನವಿಸ್

ದೇವೇಂದ್ರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ಮುಖಂಡರು ಮತ್ತು ರೈತರ ಪ್ರತಿನಿಧಿಗಳ ಜತೆ ನಡೆದ ಸಭೆಯ ನಂತರ ಅವರು ಈ ಹೇಳಿಕೆ ನೀಡಿದರು.

Survey: Kisan Long March: We have accepted most of their demands, says Devendra Fadnavis

ಇನ್ನು ಪ್ರತಿಭಟನಾಕಾರರು ಜತೆ ನಿರಂತರ ಸಂಪರ್ಕದಲ್ಲಿದ್ದ ಮಹಾರಾಷ್ಟ್ರ ಸಚಿವ ಗಿರೀಸ್ ಮಹಾಜನ್ ಪ್ರತಿಕ್ರಿಯೆ ನೀಡಿ, "ನಾವು ರೈತರ ಜತೆ ಧನಾತ್ಮಕ ಸಭೆ ನಡೆಸಿದೆವು. ಇದರಲ್ಲಿ ಅವರ ಎಲ್ಲಾ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದೆವು. 12-13 ಬೇಡಿಕೆಗಳನ್ನು ಅವರು ಹೊತ್ತು ಬಂದಿದ್ದರು. ನಾವು ಕೆಲವನ್ನು ಒಪ್ಪಿಕೊಂಡಿದ್ದೇವೆ. ಅವರಿಗೆ ಈ ಸಂಬಂಧ ಲಿಖಿತ ಕರಡನ್ನು ನೀಡಲಿದ್ದೇವೆ. ಬಹುಶಃ ಅವರು ನಮ್ಮ ತೀರ್ಮಾನಗಳಿಂದ ಸಂತುಷ್ಟರಾಗಿದ್ದೇವೆ," ಎಂದು ಭಾವಿಸುತ್ತೇವೆ ಎಂದಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮುಖ್ಯಮಂತ್ರಿಗಳು ರೈತರ ಬೇಡಿಕೆಗೆ ಒಪ್ಪಿಕೊಂಡಿದ್ದಾರೆ. ಮುಖ್ಯ ಕಾರ್ಯದರ್ಶಿ ಬೇಡಿಕೆಗಳ ಅನುಷ್ಠಾನದ ಬಗ್ಗೆ ಗಮನ ಹರಿಸಲಿದ್ದಾರೆ. 6 ತಿಂಗಳೊಳಗೆ ಇದು ಆರಂಭವಾಗಲಿದೆ ಎಂದು ಇನ್ನೋರ್ವ ಸಚಿವ ವಿ ಸವ್ರಾ ಹೇಳಿದ್ದಾರೆ.

Survey: Kisan Long March: We have accepted most of their demands, says Devendra Fadnavis

ಆದರೆ ಕೇವಲ ಆಶ್ವಾಸನೆ ನೀಡಿದರೆ ಸಾಕಾಗುವುದಿಲ್ಲ. ಅವುಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ. "ಬೇಡಿಕೆಗಳನ್ನು ಇಡೇರಿಸುವ ಬಗ್ಗೆ ಕೇವಲ ಭರವಸೆ ನೀಡಿದರೆ ಸಾಕಾಗುವುದಿಲ್ಲ. ಇದೀಗ ಸರಕಾರ ತಾವು ಒಪ್ಪಿಕೊಂಡಿದ್ದ ಅಂಶಗಳನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಬೇಕಾಗಿದೆ. ರೈತರ ಕಾಳಜಿ ಬಗ್ಗೆ ಸರಕಾರ ಚಿಂತನೆ ಮಾಡಬೇಕಾಗಿದೆ. ಇದರಿಂದ ಮುಂದಿನ ಬಾರಿ ಅವರು ಬೀದಿಗೆ ಬರುವ ಪರಿಸ್ಥಿತಿ ಉದ್ಭವಿಸುವುದಿಲ್ಲ," ಎಂದಿದ್ದಾರೆ.

ಆದರೆ ಈ ಬಗ್ಗೆ ರೈತರ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಕಿಸಾನ್ ಲಾಂಗ್ ಮಾರ್ಚ್ ಅಂತ್ಯವಾಗಲಿದೆಯೇ ಇಲ್ಲವೇ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಮುಂಬೈ ಉತ್ತರ ಮಧ್ಯ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2014
ಪೂನಮ ಮಹಾಜನ ಅಲಿಯಾಸ ಪೂನಮ ವಾಜೆಂದ್ಲಾ ರಾವ ಬಿ ಜೆ ಪಿ ಗೆದ್ದವರು 4,78,535 57% 1,86,771
ದತ್ತ ಪ್ರಿಯಾ ಸುನೀಲ ಐ ಎನ್ ಸಿ ರನ್ನರ್ ಅಪ್ 2,91,764 35% 0
2009
ದತ್ತ ಪ್ರಿಯಾ ಸುನೀಲ ಐ ಎನ್ ಸಿ ಗೆದ್ದವರು 3,19,352 48% 1,74,555
Mahesh Ram Jethmalani ಬಿ ಜೆ ಪಿ ರನ್ನರ್ ಅಪ್ 1,44,797 22% 0
2004
ಏಕನಾಥ ಎಂ. ಗಾಯಕವಾಡ ಐ ಎನ್ ಸಿ ಗೆದ್ದವರು 2,56,282 50% 13,329
ಮನೋಹರ ಗಜಾನನ ಜೋಶಿ ಎಸ್ ಎಚ್ ಎಸ್ ರನ್ನರ್ ಅಪ್ 2,42,953 47% 0
1999
ಮನೋಹರ ಗಜಾನನ ಜೋಶಿ ಎಸ್ ಎಚ್ ಎಸ್ ಗೆದ್ದವರು 2,94,935 56% 1,68,995
ರಾಜಾ ಢಾಲೆ ಬಿ ಬಿ ಎಂ ರನ್ನರ್ ಅಪ್ 1,25,940 24% 0
1998
ರಾಮದಾಸ ಅಠವಲೆ ಆರ್ ಪಿ ಐ ಗೆದ್ದವರು 2,82,373 50% 25,232
ನಾರಾಯಣ ಅಠವಲೆ ಎಸ್ ಎಚ್ ಎಸ್ ರನ್ನರ್ ಅಪ್ 2,57,141 46% 0
1996
ನಾರಾಯಣ ಗಜಾನನ ಅಠವಲೆ ಎಸ್ ಎಚ್ ಎಸ್ ಗೆದ್ದವರು 2,42,536 48% 89,199
ಶರದ ಶಂಕರ ದಿಘೆ ಐ ಎನ್ ಸಿ ರನ್ನರ್ ಅಪ್ 1,53,337 30% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kisan Long March: Maharashtra CM Devendra Fadnavis said that, ‘they have accepted most of the demands of farmers and have given them a written letter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more