Breaking: ಥಾಣೆಯಲ್ಲಿ ವಸತಿ ಕಟ್ಟಡ ಕುಸಿದು ಐವರ ದುರ್ಮರಣ
ಥಾಣೆ, ಮೇ 28: ಮಹಾರಾಷ್ಟ್ರದಲ್ಲಿ ಮತ್ತೊಂದು ಕಟ್ಟಡ ದುರಂತ ಸಂಭವಿಸಿದೆ. ಥಾಣೆ ಮಹಾನಗರ ಪಾಲಿಕೆ ವ್ಯಾಪ್ತಿಯ ಉಲ್ಲಾಸ್ ನಗರ ಎಂಬಲ್ಲಿ ವಸತಿ ಕಟ್ಟಡದ ಮೇಲ್ಪಾವಣಿ ಕುಸಿದು ಐವರು ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ಘಟನೆ ಶುಕ್ರವಾರ ರಾತ್ರಿ ವರದಿಯಾಗಿದೆ.
ಉಲ್ಲಾಸ್ ನಗರದ ವಸತಿ ಕಟ್ಟಡದಲ್ಲಿ ವಾಸವಿದ್ದ ಜನರಲ್ಲಿ ಐವರು ಮೃತಪಟ್ಟಿದ್ದು, ಇನ್ನೂ ಮೂವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕಟ್ಟಡ ಕುಸಿತ ಸಂಭವಿಸಿದ ಘಟನಾ ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಹಾಗೂ ರಕ್ಷಣಾ ಪಡೆಗಳು ದೌಡಾಯಿಸಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಕಳೆದ ವರ್ಷ ಸಪ್ಟೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರದ ಭಿವಾಂಡಿಯಲ್ಲಿ ಭಾರಿ ಕಟ್ಟಡ ದುರಂಭ ಸಂಭವಿಸಿತ್ತು. 36 ವರ್ಷಗಳ ಹಳೆಯ ಕಟ್ಟಡ ಕುಸಿತದಲ್ಲಿ 44 ಮಂದಿ ಪ್ರಾಣ ಬಿಟ್ಟಿದ್ದು, ಮೂರು ಅಂತಸ್ತಿನ ಕಟ್ಟಡದಲ್ಲಿ ಒಟ್ಟು 48 ಫ್ಲಾಟ್ ಗಳಿದ್ದವು ಎಂದು ತಿಳಿದು ಬಂದಿತ್ತು.

ಸಪ್ಟೆಂಬರ್.21ರ ಸೋಮವಾರ ಬೆಳಗಿನ ಜಾವ 3.45 ಗಂಟೆಗೆ 48 ಫ್ಲಾಟ್ ಗಳನ್ನು ಹೊಂದಿರುವ 3 ಅಂತಸ್ತಿನ ಕಟ್ಟಡವು ಕುಸಿತು ಬಿದ್ದಿತ್ತು. ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಇಳಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ಹೊರ ತೆಗೆದು ಆಸ್ಪತ್ರೆಗಳಿಗೆ ರವಾನಿಸಲಾಗಿತ್ತು.












Click it and Unblock the Notifications