ನಟ ಅಮಿತಾಬ್ ಸಮೀಪದಲ್ಲೇ ಶೂಟೌಟ್
ಮುಂಬೈ, ಮೇ.22: ಇಲ್ಲಿನ ಫಿಲಂ ಸಿಟಿಯಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಸಮೀಪದಲ್ಲೇ ಶೂಟೌಟ್ ನಡೆದಿದೆ. ರಾಜು ಶಿಂಧೆ ಎಂಬ ಸೆಕ್ಯುರಿಟಿ ಏಜೆನ್ಸಿ ಮುಖ್ಯಸ್ಥನನ್ನು ಗುರಿಯಾಗಿಸಿಕೊಂಡು ಆಗುಂತಕರು ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಅಮಿತಾಬ್ ಅವರು ನಾನು ಚಿತ್ರೀಕರಣದಲ್ಲಿ ನಿರತನಾಗಿದ್ದೆ. ನಾನಿದ್ದ ಸ್ಥಳದಿಂದ ಕೇವಲ 20 ಅಡಿ ಅಂತರದಲ್ಲೇ ಗುಂಡಿನ ದಾಳಿ ನಡೆದಿದೆ. ಮೋಟರ್ ಸೈಕಲ್ ಹತ್ತಿ ಬಂದಿದ್ದ ಇಬ್ಬರು ಆಗುಂತಕರು ಗುಂಡಿನ ಸುರಿಮಳೆಗೈದರು.

ಸೆಕ್ಯುರಿಟಿ ಏಜೆನ್ಸಿ ಮುಖ್ಯಸ್ಥ ರಾಜು ಶಿಂಧೆ ಅವರಿಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಆತಂಕದ ವಾತಾವರಣ ಮುಂದುವರೆದಿದೆ ಎಂದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
The 1873 - Okay !! Shooting at Film City .. and a gang war shootout 20 feet from where we are ... !!1 dead .. cops all over ..
— Amitabh Bachchan (@SrBachchan) May 22, 2015 ಮೊದಲ ಟ್ವೀಟ್ ತಪ್ಪು ಎಂದು ಮರು ಟ್ವೀಟ್ ಮಾಡಿದ ಬಿಗ್ ಬಿ
T 1873 - Correction : in gang shoot out where I was shooting in Film City person shot at is NOT dead . He has been taken to hospital ..
— Amitabh Bachchan (@SrBachchan) May 22, 2015 (ಒನ್ ಇಂಡಿಯಾ ಸುದ್ದಿ)












Click it and Unblock the Notifications