ಎಬಿಸಿಡಿ 2 ಚಿತ್ರದ ಡ್ಯಾನ್ಸರ್ ರೇಪ್ ಕೇಸಲ್ಲಿ ಅಂದರ್

ಮುಂಬೈ, ಜು.1: ಎಬಿಸಿಡಿ 2 ಹಿಂದಿ ಚಿತ್ರದಲ್ಲಿ ನಟಿಸಿರುವ ಸಹ ನೃತ್ಯಪಟು ಈಗ ಅತ್ಯಾಚಾರ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದಾನೆ. ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪವನ್ನು ನಿಲೇಶ್ ನಿರ್ಭಾವನೆ ಮೇಲೆ ಹೊರೆಸಲಾಗಿದೆ.

20 ವರ್ಷ ವಯಸ್ಸಿನ ನೀಲೇಶ್ ಹಾಗೂ ಆತನ ಇಬ್ಬರು ಗೆಳೆಯರು ಮಾನಸಿಕ ಅಸ್ವಸ್ಥೆಯಾಗಿರುವ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಕೃತ್ಯ ಎಸಗಿರುವುದನ್ನು ನೀಲೇಶ್ ಕೂಡಾ ಮಾಧ್ಯಮಗಳ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಎಲ್ಲಾ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 376 ಡಿ, 377 ಹಾಗೂ 34 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಿಯಂತ್ರಣ ಕಾಯ್ದೆ 2012 ಅನ್ವಯ ಕೂಡಾ ಕೇಸು ಬುಕ್ ಆಗಿದೆ.

ABCD2 dancer arrested

ಸಂತಸ್ತ ಬಾಲಕಿಯ ವಯಸ್ಸು 14 ವರ್ಷ ಎಂದು ತಿಳಿದು ಬಂದಿದೆ. ನೀಲೇಶ್ ಹಾಗೂ ಆತನ ಗೆಳೆಯರು ಆಕೆಯನ್ನು ಸಾರ್ವಜನಿಕ ಶೌಚಾಲಯ ಹಾಗೂ ನಿರ್ಜನ ಪಾರ್ಕ್ ಗೆ ಕರೆದೊಯ್ದು ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಈ ಕೃತ್ಯ ನಡೆದಿದೆ.

ಬಾಲಕಿಯ ಚಲನವಲನದಲ್ಲಿ ಬದಲಾವಣೆ ಕಂಡ ಆಕೆ ಓದುತ್ತಿರುವ ಶಾಲೆಯ ಶಿಕ್ಷಕಿಯೊಬ್ಬರು ಈ ವಿಷಯವನ್ನು ಬಾಲಕಿಯ ಪೋಷಕರಿಗೆ ತಿಳಿಸಿದ್ದಾರೆ. ನಂತರ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ನೀಲೇಶ್ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಜುಲೈ 4 ರ ತನಕ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಜಾರಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+