ಅತ್ಯಾಚಾರ ಆರೋಪಿ ಶಿವಸೇನಾ ಮುಖಂಡ ಬಂಧನ

ಥಾಣೆ (ಮಹಾರಾಷ್ಟ್ರ), ಸೆ. 6: ತನ್ನ ಶಾಲೆಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಶಿವಸೇನಾ ಮುಖಂಡನೊಬ್ಬನನ್ನು ಕಶ್ಮೀರಾ ಟೌನ್ ಶಿಪ್ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಥಾಣೆಯ ಕಶ್ಮೀರಾ ಟೌನ್ ಶಿಪ್ ನಿವಾಸಿ ವಾಸುದೇವ್ ನಂಬಿಯಾರ್ (61) ಬಂಧಿತ ಆರೋಪಿ. ಥಾಣೆ ಜಿಲ್ಲೆಯ ಶಿವಸೇನಾ ಸಂಘಟನೆಯ ಉಪಾಧ್ಯಕ್ಷನಾಗಿರುವ ವಾಸುದೇವ್ ನಂಬಿಯಾರ್ ಕಶ್ಮೀರಾ ಟೌನ್ ಶಿಪ್ ನಲ್ಲಿ ಶಾಲೆ ಹಾಗೂ ದೇವಸ್ಥಾನ ಹೊಂದಿದ್ದಾನೆ.

Shiv Sena leader held for rape after minor girl delivers baby

ತನ್ನ ಶಾಲೆಗೆ ಓದಲು ಬರುತ್ತಿದ್ದ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ದೇವಸ್ಥಾನಕ್ಕೆ ಕರೆದೊಯ್ಯುವ ನೆಪದಲ್ಲಿ ಮೀರಾ ಎಂಬ ಹಳ್ಳಿಯಲ್ಲಿ ಕಳೆದ ಫೆಬ್ರವರಿಯಿಂದ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ . ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾನೆ ಎಂದು ಕಶ್ಮೀರಾ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅನಿಲ್ ಕದಂ ತಿಳಿಸಿದ್ದಾರೆ.

ನಂತರ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಗರ್ಭಿಣಿಯಾಗಿದ್ದು, ಇತ್ತೀಚೆಗೆ ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆಯಾಗದ ಮಗುವೊಂದಕ್ಕೆ ಜನ್ಮ ನೀಡಿದ್ದು, ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಪೋಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಆರೋಪಿ ವಾಸುದೇವ್ ನಂಬಿಯಾರ್ ನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ವಾಸುದೇವ್ ನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+