ಪುತ್ರನ ಚಿಂತೆ; ಶಾರೂಖ್‌ಗೆ ಧೈರ್ಯ ತುಂಬಿದ ಪುಟ್ಟ ಫ್ಯಾನ್ಸ್!
ಮುಂಬೈ ಅಕ್ಟೋಬರ್ 18: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜೈಲಿನಲ್ಲಿದ್ದಾನೆ. ಐಷಾರಾಮಿ ಜೀವನ ನಡೆಸಿದ ಪುತ್ರ ಜೈಲಿನಲ್ಲಿರುವುದು ಶಾರೂಖ್‌ಗೆ ಚಿಂತೆ ಮಾಡುವಂತೆ ಮಾಡಿದೆ. ಬುಧವಾರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಅಕ್ಟೋಬರ್ 3ರಂದು ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ ಮಾಡಿದ ಎನ್‌ಸಿಬಿ ಅಧಿಕಾರಿಗಳು ಬಾಲಿವುಡ್ ನಟ ಶಾರೂಖ್ ಖಾನ್ ಮತ್ತು ಗೌರಿ ಖಾನ್ ಪುತ್ರ ಆರ್ಯನ್ ಖಾನ್ ಬಂಧಿಸಿತ್ತು. ಸದ್ಯ ಆರ್ಯನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ.
ಶಾರೂಖ್ ಕುಟುಂಬದ ಕಷ್ಟದ ಸಮಯಗಳನ್ನು ಎದುರಿಸುತ್ತಿದೆ. ಹೀಗಾಗಿ ಸ್ಟಾರ್ ನಟನ ಅಭಿಮಾನಿಗಳು ಸೂಪರ್ ಸ್ಟಾರ್ ಮತ್ತು ಅವರ ಕುಟುಂಬಕ್ಕೆ ತಮ್ಮ ಬೆಂಬಲವನ್ನು ತೋರಿಸಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಶಾರೂಖ್ ಬೆಂಬಲಕ್ಕೆ ಚಿಕ್ಕ ಮಕ್ಕಳು ಕೂಡ ಮುಂದೆ ಬಂದಿದ್ದಾರೆ.

ಆರ್ಯನ್ ಖಾನ್ ಬಂಧನವಾದ ಬಳಿಕ ಶಾರೂಖ್ ಖಾನ್ ಅಭಿಮಾನಿಗಳು ಅವರಿಗೆ ತಮ್ಮ ಬೆಂಬಲವನ್ನು ನೀಡುವ ಮೂಲಕ ಧೈರ್ಯ ತುಂಬುತ್ತಿದ್ದಾರೆ. 23 ವರ್ಷದ ಆರ್ಯನ್ ಬಂಧನದ ನಂತರ ಸ್ಟಾರ್ ಅಭಿಮಾನಿಗಳು #WeStandWithSRK ಎಂಬ ಹ್ಯಾಷ್ ಟ್ಯಾಗ್‌ಅನ್ನು ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಿದ್ದರು. ಈಗ ಚಿಕ್ಕ ಮಕ್ಕಳು ತಮ್ಮದೇ ಆದ ರೀತಿಯಲ್ಲಿ ನಟ ಮತ್ತು ಅವರ ಕುಟುಂಬವನ್ನು ಬೆಂಬಲಿಸುತ್ತಿದ್ದಾರೆ.
Love you @iamsrk
— Sandip Srkian Banerjee/PATHAAN UNIVERSE 🚩 (@SandipB28369874) October 17, 2021
A Little girl support with King pic.twitter.com/kisDuK15xO
ಒಬ್ಬ ಪುಟ್ಟ ಬಾಲಕಿ "ನಾವು ನಿಮ್ಮೊಂದಿಗೆ ರಾಜ" ಎಂದು ಬರೆದಿರುವ ಪೋಸ್ಟರ್ ಹಿಡಿದು ನಾವು ನಿಮ್ಮೊಂದಿಗೆ ಇದ್ದೇವೆ ಎನ್ನುವ ಸಂದೇಶ ನೀಡಿದ್ದಾಳೆ. ಜೊತೆಗೆ "ಸ್ಟೇ ಸ್ಟ್ರಾಂಗ್ ಕಿಂಗ್" ಎಂದು ಬರೆದಿರುವ ಪೋಸ್ಟರ್ ಹಿಡಿದ ಫೋಟೋ ವೈರಲ್ ಆಗಿದೆ. ಇನ್ನೊಬ್ಬರು ಕೋಲ್ಕತ್ತಾ ನೈಟ್ ರೈಡರ್ಸ್ ಜರ್ಸಿಯನ್ನು ಧರಿಸಿದ್ದಾರೆ.
A little Cute @iamsrk and @KKRiders Fan 😍
— 😎Sourav Srkian Das😎 (@SrkianDas04) October 17, 2021
She Is Try To Signature Pose 🔥#ShahRukhKhan pic.twitter.com/lH24H65gIO
ಇತ್ತೀಚೆಗೆ ಕೇರಳ ಮತ್ತು ಕೋಲ್ಕತ್ತಾದಿಂದ ಶಾರೂಖ್ ಖಾನ್ ಅಭಿಮಾನಿಗಳು ನಟ ಮತ್ತು ಅವರ ಪುತ್ರ ಆರ್ಯನ್ ಖಾನ್‌ಗೆ ತಮ್ಮ ಬೆಂಬಲವನ್ನು ತೋರಿಸಲು ಒಗ್ಗೂಡಿದ್ದರು. ಎಸ್‌ಆರ್‌ಕೆ ಕೇರಳ ಎಫ್‌ಸಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ "ಈ ಕಷ್ಟದ ಸಮಯದಲ್ಲಿಎಸ್‌ಆರ್‌ಕೆ & ಕುಟುಂಬಕ್ಕೆ ನಮ್ಮ ಪ್ರಾಮಾಣಿಕ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತೇವೆ. ಶೀಘ್ರದಲ್ಲೇ ಎಲ್ಲವೂ ಉತ್ತಮಗೊಳ್ಳಲಿ ಎಂದು ಆಶಿಸುತ್ತೇವೆ" ಎಂದು ತಿಳಿಸಲಾಗಿದೆ.
ಈ ಮೊದಲು, ಅಭಿಮಾನಿಗಳು ಮುಂಬೈನ ಶಾರೂಖ್ ಖಾನ್ ಬಂಗಲೆಯಾದ 'ಮನ್ನತ್' ಬಳಿ ಜಮಾಯಿಸಿ "ಟೇಕ್ ಕೇರ್ ಕಿಂಗ್" ಎಂಬ ಸಂದೇಶವನ್ನು ನೀಡಿದ್ದರು. ಆರ್ಯನ್ ಖಾನ್ ಜೊತೆಗೆ ಎನ್‌ಸಿಬಿ ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಇನ್ನೊಬ್ಬ ಆರೋಪಿ ಮುನ್ಮುನ್ ಧಮೇಚಾರನ್ನು ಸಹ ಬಂಧಿಸಿತ್ತು.
Extending our sincere love & support to @iamsrk & family on this hard times. We hope things will get better soon @iamsrk @gaurikhan
— SRK Kerala FC (@SRKKeralaFC) October 17, 2021
More love from team @SRKKeralaFC 🙌#WeStandWithSRK#JusticeForAryanKhan pic.twitter.com/d6rHC5SpTP
ಎನ್‌ಸಿಬಿ ಹೇಳುವುದೇನು?; ಆರ್ಯನ್ ಖಾನ್ ವಾಟ್ಸಪ್ ಚಾಟ್‌ನಿಂದ ಅಂತಾರಾಷ್ಟ್ರೀಯ ಡ್ರಗ್ ಜಾಲ ಬಹಿರಂಗವಾಗಿದೆ ಎಂದು ನ್ಯಾಯಾಲಯಕ್ಕೆ ಎನ್‌ಸಿಬಿ ಹೇಳಿದೆ. ಆರ್ಯನ್ ಖಾನ್ ವಾಟ್ಸ್ ಆಪ್ ಚಾಟ್ ನಿಂದ ಡ್ರಗ್ಸ್‌ಗೆ ಸಂಬಂಧಿಸಿದಂತೆ ಆಘಾತಕಾರಿ ಹಾಗೂ ದೋಷಾರೋಪಣೆ ಮಾಡಬಹುದಾದ ಅಂಶಗಳು ಬಹಿರಂಗಗೊಂಡಿದೆ ಎಂದು ಎನ್‌ಸಿಬಿ ಹೇಳಿತ್ತು. ಪೇಮೆಂಟ್ ಮೋಡ್ ಹಾಗೂ ಡ್ರಗ್ಸ್ ಖರೀದಿಗಾಗಿ ಕೋಡ್ ವರ್ಡ್ ಬಳಕೆ ಮಾಡಿರುವುದು ವಾಟ್ಸ್ ಆಪ್ ಚಾಟ್‌ನಿಂದ ಬಯಲಾಗಿದೆ ಎಂದು ಎನ್‌ಸಿಬಿ ಹೇಳಿತ್ತು.
ಆರ್ಯನ್ ಪರ ವಕೀಲರ ವಾದ; "ಅರಬ್ಬಿ ಸಮುದ್ರದಲ್ಲಿ ತೇಲುತ್ತಿದ್ದ ಕ್ರೂಸರ್ ಶಿಪ್‌ನಲ್ಲಿ ನಿಗದಿತ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ಆರ್ಯನ್ ಖಾನ್ ಡ್ರಗ್ ಸಾಗಿಸಿಲ್ಲ, ಡ್ರಗ್ಸ್ ಹೊಂದಿರಲಿಲ್ಲ, ವಿದೇಶಿ ಕರೆನ್ಸಿ ಜಪ್ತಿಯಾಗಿಲ್ಲ. ಹೀಗಿದ್ದು, ನನ್ನ ಕಕ್ಷಿದಾರರ ಬಂಧನವೇಕೆ?,'' ಎಂದು ಹಿರಿಯ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿದ್ದಾರೆ.
"ಆರ್ಯನ್ ಖಾನ್‌ರನ್ನು ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್‌ಗಳಾದ 27, 20(ಬಿ), 28, 29, 8(ಸಿ) ಅಡಿ ಬಂಧಿಸಲಾಗಿದೆ. ಎನ್‌ಸಿಬಿ ಪ್ರತಿಕ್ರಿಯೆಯಲ್ಲಿ ಕಾನೂನುಬಾಹಿರ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಆರ್ಯನ್ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 27ಎ ಅಡಿ ಬಂಧಿಸಲಾಗಿಲ್ಲ" ಎಂದು ದೇಸಾಯಿ ವಾದಿಸಿದ್ದರು.
"13 ಗ್ರಾಂ ಕೊಕೇನ್ ಆಗಲಿ, ಮಾದಕ ಮಾತ್ರೆಗಳು, ಮೆಫೆಡ್ರೋನ್ ಯಾವುದನ್ನೂ ಖಾನ್‌ರಿಂದ ವಶಪಡಿಸಿಕೊಳ್ಳಲಾಗಿಲ್ಲ. ಆರ್ಯನ್ ಬಳಿ ಹಣವಿರಲಿಲ್ಲ. ಮಾದಕ ವಸ್ತುಗಳನ್ನು ಸೇವನೆ ಅಥವಾ ಮಾರಾಟ ಮಾಡುವ ಯೋಜನೆ ಅವರಿಗೆ ಇರಲಿಲ್ಲ. ಮುಂಬೈನಲ್ಲಿ ಹಲವು ಪ್ರಕರಣಗಳು ವರದಿಯಾಗಿರುವುದರಿಂದ ಹಲವರನ್ನು ಬಂಧಿಸುವ ಮೂಲಕ ಎನ್‌ಸಿಬಿ ಒಳ್ಳೆಯ ಕೆಲಸ ಮಾಡಿದೆ. ಆದರೆ, ಯಾವುದಕ್ಕೂ ಸಂಬಂಧವಿಲ್ಲದವರನ್ನು ಕರೆತಂದು ಕಸ್ಟಡಿಯಲ್ಲಿ ಅವರು ಇಡಲಾಗದು" ಎಂದು ದೇಸಾಯಿ ಹೇಳಿದ್ದಾರೆ. ವಾದ ಆಲಿಸಿದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್. ಎಂ. ನೆರ್ಲಿಕರ್ ಆರ್ಯನ್ ಖಾನ್ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 20ವರೆಗೂ ವಿಸ್ತರಣೆ ಮಾಡಿದ್ದಾರೆ.
-
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ












Click it and Unblock the Notifications