ನಟ ಜಿತೇಂದ್ರ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಮುಂಬೈ, ಫೆಬ್ರವರಿ 07: ಹಿಂದಿ ಚಿತ್ರರಂಗದ ಹಿರಿಯ ನಟ ಜಿತೇಂದ್ರ ವಿರುದ್ಧ ಹಿಮಾಚಲ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಜಿತೇಂದ್ರ ವಿರುದ್ಧ ದೂರು ನೀಡಿದವರು ಜಿತೇಂದ್ರ ಅವರ ಕಸಿನ್ ಗಳಲ್ಲಿ ಒಬ್ಬರು.ವಿಶೇಷವೆಂದರೆ ದೂರಿನಲ್ಲಿ ಉಲ್ಲೇಖಿಸಿದ ಘಟನೆ ನಡೆದಾಗ ಆಕೆಗೆ 18, ಜಿತೇಂದ್ರರಿಗೆ 28 ವರ್ಷ ವಯಸ್ಸಾಗಿತ್ತು. ಈಗ ಜಿತೇಂದ್ರರಿಗೆ 75 ವರ್ಷ ವಯಸ್ಸು.
ಇಂಡಿಯಾ ಟುಡೇ ವರದಿ ಪ್ರಕಾರ, 'ಜಂಪಿಂಗ್ ಜಾಕ್ ' ಜಿತೇಂದ್ರ ವಿರುದ್ಧ ದೂರು ನೀಡಲು #MeToo ಅಭಿಯಾನ ಕಾರಣವಂತೆ. ಈ ರೀತಿಯ ಅಭಿಯಾನದಿಂದ ಅನೇಕ ಮಹಿಳೆಯರು ತಮಗಾದ ಲೈಂಗಿಕ ಕಿರುಕುಳದ ಅನುಭವವನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಜಿತೇಂದ್ರ ಅವರ ಕಸಿನ್ ಕೂಡಾ ಧೈರ್ಯ ಪಡೆದುಕೊಂಡು ದೂರು ನೀಡಿದ್ದಾರೆ.
ಶೂಟಿಂಗ್ ಗೆ ಜತೆಗೆ ಬಾ ಎಂದು ನನ್ನ ತಂದೆಯ ಒಪ್ಪಿಗೆ ಪಡೆದುಕೊಂಡು ಕರೆದುಕೊಂಡು ಹೋಗಿ, ನನ್ನ ಮೇಲೆ ಲೈಂಗಿಕ ಕಿರುಕುಳ ಮಾಡಿದರು. ಇಷ್ಟು ವರ್ಷ ನಾನು ಮಾನಸಿಕ ಕಿರುಕುಳ ಅನುಭವಿಸಿದ್ದೇನೆ. ಇದಕ್ಕೆ ಪರಿಹಾರ ಸಿಗಬೇಕಿದೆ.

ನನ್ನ ಪೋಷಕರು ಬದುಕಿದ್ದಾಗ ಈ ವಿಷಯ ತಿಳಿದಿದ್ದರೆ ತುಂಬಾ ನೊಂದುಕೊಳ್ಳುತ್ತಿದ್ದರು ಎಂದು ಆಕೆ ಹೇಳಿದ್ದಾರೆ. ಆದರೆ, ನನ್ನ ವಿವರಗಳನ್ನು ಬಹಿರಂಗ ಪಡಿಸಬೇಡಿ ಎಂದು ಪೊಲೀಸರ ಬಳಿ ಆಕೆ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications