ರೇಷ್ಮಾ ಶೆಟ್ಟಿ , ಶೇರಾ ಕಂಡರೆ ಸಲ್ಮಾನ್ ಗೇಕೆ ಭಯ ಭಕ್ತಿ
ಮುಂಬೈ, ಮೇ.6: ಸಲ್ಮಾನ್ ಖಾನ್ ಅವರು ಜೈಲುಪಾಲಾದರೆ ಅನೇಕ ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಸಲ್ಮಾನ್ ಪರಿವಾರ ಎಂದರೆ ನೂರಾರು ಮಂದಿ ಒಟ್ಟಿಗೆ ಕಲೆತು ಬೆರೆತು ಬಾಳುವ ಸಂಸಾರ. ಹಿಂದೂ, ಮುಸ್ಲಿಂ, ಕೈಸ್ತ್ರ ಹೀಗೆ ಸರ್ವಧರ್ಮಿಯರಿಗೂ ಸಲ್ಲೂ ನಿವಾಸದಲ್ಲಿ ನೆಲೆಯುಂಟು. ಸಲ್ಲೂ ಜೈಲು ಸೇರಿದರೆ ಮುಂದೇನು ಎಂದು ಚಿಂತಿಸುವವರಲ್ಲಿ ರೇಷ್ಮಾ ಶೆಟ್ಟಿ, ಷೇರಾ ಮೊದಲಿಗರು.
ಹಿಟ್ ಅಂಡ್ ರನ್ ಕೇಸಿನ ತೀರ್ಪು ಸೆಷನ್ಸ್ ಕೋರ್ಟಿನಲ್ಲಿ ಬುಧವಾರ(ಮೇ.6) ಮಧ್ಯಾಹ್ನ ಹೊರ ಬೀಳುತ್ತಿದ್ದಂತೆ ಕಟಕಟೆಯಲ್ಲಿದ್ದ ಸಲ್ಮಾನ್ ಖಾನ್ ಕುಸಿದು ಕುಳಿತು ಬಿಕ್ಕಳಿಸಿ ಅತ್ತಿದ್ದಾರೆ. ಇದನ್ನು ಕಂಡು ಅವರ ತಂಗಿಯರಾದ ಅಳ್ವೀರಾ, ಅರ್ಪಿತಾ ಗೋಳಾಡಿದ್ದಾರೆ.[ ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]
ಸೋದರರಾದ ಸೊಹೈಲ್ ಖಾನ್, ಅರ್ಬಾಜ್ ಖಾನ್, ಅತುಲ್ ಅಗ್ನಿಹೋತ್ರಿ,ಎಂಎಲ್ ಎ ಸಿದ್ದಿಕಿ ಮುಂತಾದ ಆಪ್ತರ ಕಣ್ಣಲ್ಲೂ ನೀರು ಜಿನುಗಿದೆ. ಇವರೆಲ್ಲರ ನಡುವೆ ಗಟ್ಟಿ ಮನಸ್ಸು ಮಾಡಿಕೊಂಡು ನಿಂತಿದ್ದವರು ಸಲ್ಮಾನ್ ಖಾನ್ ಅವರ ವ್ಯವಸ್ಥಾಪಕಿ, ಪರ್ಸನಲ್ ಸೆಕ್ರೆಟರಿ ರೇಷ್ಮಾ ಶೆಟ್ಟಿ ಹಾಗೂ ಬಾಡಿಗಾರ್ಡ್ ಷೇರಾ. ಇವರಿಬ್ಬರ ಮನದಲ್ಲಿ ಸಲ್ಲೂ ಇಲ್ಲದಿದರೆ ಮುಂದೇನು ಎಂಬ ಚಿಂತೆ ಕಾಡುತ್ತಿತ್ತು.

ರೇಷ್ಮಾ ಹಾಗೂ ಷೇರಾ ಸಲ್ಲೂ ದಿನ ನಿತ್ಯದ ಆಗು ಹೋಗುಗಳನ್ನು ನೋಡಿಕೊಳ್ಳುವ ಪ್ರಮುಖ ವ್ಯಕ್ತಿಗಳು. ಸಲ್ಮಾನ್ ಖಾನ್ ನಡೆ ಬಗ್ಗೆ ಇಂಚಿಂಚು ಮಾಹಿತಿ ಇರುವ ವ್ಯಕ್ತಿಗಳು. [ಗುದ್ದೋಡು ಕೇಸ್ ತೀರ್ಪು: ಸಲ್ಮಾನ್ ದೋಷಿ ]
ರೇಷ್ಮಾ ಕಂಡರೆ ಸಲ್ಲೂಗೆ ಭಯ ಭಕ್ತಿ: ಬೆಳಗ್ಗೆ ನಿಧಾನವಾಗಿ ಏಳುವ ಅಭ್ಯಾಸ ಸಲ್ಮಾನ್ ಗೆ ರೂಢಿಯಾಗಿದೆ. ವಿದೇಶದಲ್ಲಿ ಒಮ್ಮೆ ಮೌಂಟನ್ ಡ್ಯೂ ಜಾಹೀರಾತು ಶೂಟಿಂಗ್ ನಲ್ಲಿದ್ದಾಗ ಗಡತ್ತಾಗಿ ಸಲ್ಲೂ ನಿದ್ದೆ ಮಾಡಿದ್ದಾರೆ. [ಸಲ್ಮಾನ್ ಗೆ ರಕ್ಷೆ ನೀಡಿದ 'ಬೀಯಿಂಗ್ ಹ್ಯೂಮನ್']
ಇದರಿಂದ ಕೆರಳಿದ ಸಲ್ಲೂ ವ್ಯವಸ್ಥಾಪಕಿ ರೇಷ್ಮಾ ಶೆಟ್ಟಿ ಸಲ್ಮಾನ್ ಅವರ ಬೆಡ್ ಶಿಟ್ ಕಿತ್ತು ಹಾಕಿ ಜೋರಾಗಿ ಗದರಿಸಿದ್ದಾರೆ. ಸಲ್ಮಾನ್ ಮಾತ್ರ ವಿಧೇಯ ವಿದ್ಯಾರ್ಥಿ ರೀತಿ ತುಟಿ ಪಿಟಕ್ ಎನ್ನದೆ ಎದ್ದು ರೆಡಿ ಆದರಂತೆ. ಸಲ್ಮಾನ್ ಸೋದರಿ ಅಲ್ವಿರಾ ಬಾಲ್ಯದ ಗೆಳತಿ ರೇಷ್ಮಾ ಕಂಡರೆ ಸಲ್ಲೂಗೆ ಭಯ ಭಕ್ತಿ. [ಸಲ್ಮಾನ್ ಶಿಕ್ಷೆ ಟ್ವಿಟ್ಟರ್ ನಲ್ಲಿ ಜನತೆ ಕೊಟ್ಟ ತೀರ್ಪೇನು?]
ಸಲ್ಮಾನ್ ಗೆ ಪ್ರವಾಸ ಇಷ್ಟ. ಅದರೆ, ಲಂಡನ್ ಗೆ ಹೋಗುವುದೇ ಹೆಚ್ಚು. ಶೂಟಿಂಗ್ ಗೆ ಈ ಮೊದಲು ಮಧ್ಯಾಹ್ನ 2 ಕ್ಕೆ ಬಂದು ಮುಂಜಾನೆ ತನಕ ಇರುತ್ತಿದ್ದ ಸಲ್ಲೂ ಇತ್ತೀಚೆಗೆ ರೇಷ್ಮಾ ಮೇಡಂ ಹುಕುಂ ಪಾಲಿಸಿ ಮಧ್ಯಾಹ್ನ 12ಕ್ಕೆ ಹಾಜರಾಗುತ್ತಿದ್ದಾರಂತೆ. ಸಲ್ಮಾನ್ ನಲ್ಲಿ ಅಲ್ಪಸ್ವಲ್ಪ ಶಿಸ್ತು ಸನ್ನಡತೆ ಬೆಳೆಯಲು ರೇಷ್ಮಾ ಕಾರಣ ಎಂದರೆ ತಪ್ಪಾಗಲಾರದು. [ಸಲ್ಮಾನ್ ಖಾನ್ ಪ್ರಕರಣದ ತೀರ್ಪು ಅಪ್ಡೇಟ್ಸ್]
ಸಂಜಯ್ ದತ್ ಜೊತೆ ಕಿತ್ತಾಡಿಕೊಂಡು ಸಲ್ಮಾನ್ ಮ್ಯಾನೇಜರ್ ಆದ ರೇಷ್ಮಾ ನೆರವಿನಿಂದ ಸಲ್ಲೂ ಚಿತ್ರಗಳ ಆಯ್ಕೆ ಸುಲಭವಾಯ್ತು. 2003ರಿಂದ ಇಲ್ಲಿ ತನಕ ಸಲ್ಮಾನ್ ವೃತ್ತಿ ಬದುಕಿನಲ್ಲಿ ಅನೇಕ ಏಳು ಬೀಳು ಕಂಡಿದ್ದಾರೆ. ಅದರಲ್ಲೂ ರೇಷ್ಮಾ ಬಂದಮೇಲೆ ಸಲ್ಲೂ ಯಶಸ್ಸಿನ ಗ್ರಾಫ್ ಮೇಲಕ್ಕೇರುತ್ತಲೇ ಇದೆ. [ಎಲುಬಿಲ್ಲದ ನಾಲಿಗೆಯ ಅಭಿಜಿತ್‌ಗೆ ಟ್ವಿಟ್ಟಿಗರ ತಿರುಗುಬಾಣ]












Click it and Unblock the Notifications