ಎಲುಬಿಲ್ಲದ ನಾಲಿಗೆಯ ಅಭಿಜಿತ್‌ಗೆ ಟ್ವಿಟ್ಟಿಗರ ತಿರುಗುಬಾಣ
ಮುಂಬೈ, ಮೇ. 6 : "ಚಿತ್ರರಂಗದ ಸ್ನೇಹಿತರೇ, ಆಷಾಢಭೂತಿತನ ಬಿಟ್ಟು ಧೈರ್ಯವಾಗಿ ಬಂದು ಸಲ್ಮಾನ್ ಖಾನ್ ರನ್ನು ಬೆಂಬಲಿಸಿ. ಪಾದಚಾರಿ ರಸ್ತೆಗಳಿರುವುದು ಮಲಗುವುದಕ್ಕಲ್ಲ, (ಯಾರಾದರೂ ಸತ್ತರೆ) ಡ್ರೈವರ್ ತಪ್ಪೂ ಅಲ್ಲ, ಅಲ್ಕೋಹಾಲ್ ತಪ್ಪೂ ಅಲ್ಲ..." ಅಂತ ಟ್ವೀಟ್ ಮಾಡಿರುವ ಹಿಂದಿ ಚಿತ್ರರಂಗದ ಗಾಯಕ ಅಭಿಜಿತ್ ತಾನೆಂಥ ಮನುಷ್ಯ ಎಂಬುದನ್ನು ಘಂಟಾಘೋಷವಾಗಿ ಸಾರಿದ್ದಾನೆ.
ಗಳಿಸಿದ್ದನ್ನೆಲ್ಲಾ ತಿಂದು, ಕುಡಿದು ಮಜಾ ಉಡಾಯಿಸುವುದರಲ್ಲಿ ಕಾಲ ಕಳೆಯುವ ಅಭಿಜಿತ್ ಭಟ್ಟಾಚಾರ್ಯನಂಥ ಆಷಾಢಭೂತಿಗಳಿಗೆ ಬಡವರ ಕಷ್ಟ ಅರ್ಥವಾಗುವುದಾದರೂ ಎಲ್ಲಿ? ಸೂರಿಲ್ಲದವರು, ನಿರ್ಗತಿಕರು ಮುಂಬೈನಲ್ಲಿ ಎಷ್ಟಿದ್ದಾರೆ, ಅವರು ಜೀವನವನ್ನೆಲ್ಲ ಎಲ್ಲಿ ಕಳೆಯುತ್ತಾರೆ ಎಂಬುದು ಇವರಿಗೆ ತಿಳಿಯದ ವಿಷಯವೇನಲ್ಲ.
Come out fraternity, support @BeingSalmanKhan boldly not hypocriticly Roads footpath r not meant 4 sleeping, not driver's or alcohol's fault
— abhijeet (@abhijeetsinger) May 6, 2015 ಬಡವರು ಫುಟ್ ಪಾತ್ ಮೇಲೆ ಮಲಗುವುದೇ ತಪ್ಪು ಎಂದು ಟ್ವೀಟ್ ಮಾಡಿ ಟ್ವಿಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದಾನೆ ಅಭಿಜಿತ್. ಅಷ್ಟೇ ಅಲ್ಲ, "ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧವಾದರೆ, ಫುಟ್ ಪಾತ್ ಮೇಲೆ ಮಲಗುವುದೂ ಕೂಡ ಅಪರಾಧವೆ. ಶೇ.80ರಷ್ಟು ಫಿಲ್ಮ್ ಮಂದಿ ಸ್ಟಾರ್ ಆಗುವ ಮೊದಲು ಕಷ್ಟಪಟ್ಟಿದ್ದಾರೆ, ಆದರೆ ಅವರೇನು ಫುಟ್ ಪಾತ್ ಮೇಲೆ ಮಲಗಿಲ್ಲ" ಎಂದು ಅಭಿಜಿತ್ ನಾಲಿಗೆ ಹರಿಯಬಿಟ್ಟಿದ್ದಾನೆ.
ಯಾವುದೋ ಸ್ಟಾರ್ ಜೈಲು ಪಾಲಾಗುವ ಸಂದರ್ಭ ಬಂದರೆ, ವಸ್ತುಸ್ಥಿತಿ ಏನಿದೆ, ಆತ ಮಾಡಿದ್ದು ಸರಿಯೋ ತಪ್ಪೋ ಎನ್ನುವುದರ ವಿಶ್ಲೇಷಣೆ ಕೂಡ ಮಾಡದೆ, ಅಂಥ 'ಕ್ರಿಮಿನಲ್'ಗಳ ಬೆಂಬಲಕ್ಕೆ ಧಾವಿಸುವ ಬಾಲಿವುಡ್ ತಾರೆಗಳಿಗೆ ಲೆಕ್ಕವೇ ಇಲ್ಲ. ಸಂಜಯ್ ದತ್, ಶೈನಿ ಆಹುಜಾ ಜೈಲು ಪಾಲಾದ ಸಂದರ್ಭದಲ್ಲಿಯೂ 'ಹಿಂಗಾಗಬಾರದಿತ್ತು' ಅಂತ ಗಳಗಳನೆ ಕಣ್ಣೀರು ಹರಿಸಿದವರ ಸಂಖ್ಯೆ ಅಪಾರವಿತ್ತು.

ಕೆಂಡಾಮಂಡಲವಾದ ಟ್ವಿಟ್ಟಿಗರು
ಅಭಿಜಿತ್ ಟ್ವೀಟ್ ನೋಡುತ್ತಿದ್ದಂತೆ ಟ್ವಿಟ್ಟಿಗರು ಕೆಂಡಾಮಂಡಲವಾಗಿದ್ದಾರೆ. ಅಭಿಜಿತ್ ಮತ್ತೆ ಶಾಲೆಗೆ ಹೋಗಿ, ಯಾವ ರೀತಿ ಮಾತಾಡಬೇಕೆಂದು ಕಲಿತು ಬರಲಿ ಎಂದು ಸಿಟ್ಟು, ವ್ಯಂಗ್ಯ ಭರಿತ ಟ್ವೀಟ್ ಬಾಣಗಳನ್ನು ಅಭಿಜಿತ್ ಮೇಲೆ ಬಿಡುತ್ತಿದ್ದಾರೆ. ಈ ಯಾವ ಬಾಣಗಳೂ ಅಭಿಜಿತ್ ನಂಥ ದಪ್ಪ ಚರ್ಮದ ಕಲಾವಿದರಿಗೆ ನಾಟವುದಿಲ್ಲ ಎಂಬುದು ಬೇರೆ ಮಾತು.
|
ಅಭಿಮಾನಿಗಳನ್ನು ಕಳೆದುಕೊಂಡಿದ್ದೀ ಅಭಿಜಿತ್, ಶೇಮ್
ನಾಚಿಕೆಗೇಡಿನ ಟ್ವೀಟ್ ಮಾಡಿ ಸಾವಿರಾರು ಅಭಿಮಾನಿಗಳನ್ನು ಕಳೆದುಕೊಂಡಿದ್ದೀ ಅಭಿಜಿತ್, ಶೇಮ್ ಶೇಮ್
|
ನಾಯಿ ಇದ್ದರೆ ಅದಕ್ಕೆ ಅಭಿಜಿತ್ ಅಂತ ಹೆಸರಿಡಿ
ನಿಮ್ಮ ಬಳಿ ನಾಯಿ ಇದ್ದರೆ ಅದಕ್ಕೆ ಅಭಿಜಿತ್ ಅಂತ ಹೆಸರಿಡಿ. ರೋನಿ, ಸೀಸರ್ ಎಂಬೆಲ್ಲ ಹೆಸರಿಡಬೇಡಿ. (ನಾಯಿಗಳಿಗೆ ಅಭಿಜಿತ್ ಹೆಸರಿಟ್ಟರೆ ಅದಕ್ಕೇ ಅವಮಾನ ಮಾಡಿದಂತೆ)
|
ಅಮ್ಮನೂ ಅಭಿಗೆ ಛೀಥೂ ಅನ್ನುತ್ತಾಳೆ
ಅಭಿಜಿತ್ ನನ್ನ ಕ್ಲಾಸ್ ಮೇಟಾಗಿದ್ದ ಅಂತ ನನ್ನ ಅಮ್ಮ ಇನ್ನು ಯಾವತ್ತೂ ಹೇಳುವುದಿಲ್ಲ.
|
ಆತನ ಬಗೆಗಿದ್ದ ಎಲ್ಲ ಗೌರವವೂ ಮಣ್ಣುಪಾಲಾಗಿದೆ
ಅಭಿಜಿತ್ ಇಂಥ ಮೂರ್ಖನೆಂದು ಗೊತ್ತಿರಲಿಲ್ಲ. ಆತನ ಟ್ವೀಟ್ ನೋಡಿ ಆತನ ಬಗೆಗಿದ್ದ ಎಲ್ಲ ಗೌರವವೂ ಮಣ್ಣುಪಾಲಾಗಿದೆ.
|
ಆಹಾಹಾ ಅಭಿಜಿತ್, ಫರಾಹ್ ಖಾನ್ ಅಲಿ
ಒಂದೇ ಹೊಡೆತದಲ್ಲಿ (ಟ್ವೀಟ್ ನಲ್ಲಿ) ಸಲ್ಮಾನ್ ಬಗ್ಗೆ ಉಂಟಾಗಿದ್ದ ಅನುಕಂಪವನ್ನು ಅಭಿಜಿತ್ ಮತ್ತು ಫರಾಹ್ ಖಾನ್ ಅಲಿ ಅಳಿದುಹೋಗುವಂತೆ ಮಾಡಿದ್ದಾರೆ.
|
ಆತನನ್ನು ನಾಯಿಗಿಂತ ಕಡೆಯಾಗಿ ನೋಡುತ್ತಾರೆ
ರಸ್ತೆ ಬದಿ ಮಲುಗುವ ಜನರನ್ನು ನಾಯಿ ಎಂದು ಅಭಿಜಿತ್ ಕರೆದರೆ, ದೇಶದ ಜನರು ಕೂಡ ಆತನನ್ನು ನಾಯಿಗಿಂತ ಕಡೆಯಾಗಿ ನೋಡುತ್ತಾರೆ.
|
ಆತ ಬಳಸುವ ಪದ ಕಿವಿಗೆ ಸಂಗೀತದಂತೆ ಕೇಳುವುದಿಲ್ಲ
ಥ್ಯಾಂಕ್ ಗಾಡ್, ಅಭಿಜಿತ್ ಬೇರೆಯವರು ಬರೆಯುತ್ತಿದ್ದ ಸಾಹಿತ್ಯವನ್ನು ಹಾಡುತ್ತಿದ್ದ. ಇಲ್ಲದಿದ್ದರೆ, ಆತ ಬಳಸುವ ಪದಗಳು ಕಿವಿಗೆ ಸಂಗೀತದಂತೆ ಕೇಳುವುದಿಲ್ಲ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications