ಸಂಜು ಚಿತ್ರದ ವಿರುದ್ಧ ಕಿಡಿಕಾರಿದ ಆರೆಸ್ಸೆಸ್ ಮುಖವಾಣಿ
ಮುಂಬೈ, ಜುಲೈ 12: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ನ ಮುಖವಾಣಿ 'ಪಾಂಚಜನ್ಯ'ದಲ್ಲಿ ಹಿಂದಿ ಸಿನಿಮಾ 'ಸಂಜು' ಬಗ್ಗೆ ಕಟು ಶಬ್ದಗಳಿಂದ ಟೀಕಾಪ್ರಹಾರ ಮಾಡಲಾಗಿದೆ.
ನಟ ಸಂಜಯ್ ದತ್ ಅವರ ಜೀವನ ಆಧಾರಿತ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟ ರಣಬೀರ್ ಕಪೂರ್, ಪರೇಶ್ ರಾವಲ್, ಮನಿಷಾ ಕೊಯಿರಾಲಾ, ಸೋನಂ ಕಪೂರ್ ಮುಂತಾದವರು ಅಭಿನಯಿಸಿದ್ದು, ರಾಜ್ ಕುಮಾರ್ ಹಿರಾನಿ ನಿರ್ದೇಶನವಿದೆ. ಜೂನ್ 29ರಂದು ತೆರೆ ಕಂಡ ಚಿತ್ರ, ಭರ್ಜರಿ ಯಶಸ್ಸು ಕಂಡಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡಾ ಚಿತ್ರವನ್ನು ನೋಡಿ ಅದ್ಭುತ ಎಂದಿದ್ದಾರೆ. ಆದರೆ, ಸಂಜು ಚಿತ್ರ ಸೇರಿದಂತೆ ಬಾಲಿವುಡ್ ನಲ್ಲಿ ಖಳಪಾತ್ರಗಳನ್ನು ವಿಜೃಂಭಿಸುವಂತೆ ಚಿತ್ರಗಳು ಬರುತ್ತಿರುವುದನ್ನು ಆಕ್ಷೇಪಿಸಿ, ಪಾಂಚಜನ್ಯದಲ್ಲಿ ಕವರ್ ಸ್ಟೋರಿ ಮಾಡಲಾಗಿದೆ.
ರಾಜಕುಮಾರ್ ಹಿರಾನಿಗೆ ಪ್ರಶ್ನೆಗಳ ಸುರಿಮಳೆಗೈದು, ಸಂಜಯ್ ದತ್ ಚಿತ್ರವನ್ನು ಮಾಡಿರುವ ಉದ್ದೇಶವೇನು? ಈ ಚಿತ್ರದಿಂದ ಯುವಜನತೆಗೆ ಯಾವ ಸಂದೇಶ ನೀಡುತ್ತಿದ್ದೀರಿ? ಖಳಪಾತ್ರವನ್ನು ಮಾದರಿಯಾಗಿ ಯುವ ಜನತೆ ಸ್ವೀಕರಿಸುವುದಿಲ್ಲವೇ? ಅಪರಾಧ, ದೇಶದ್ರೋಹ ಕೃತ್ಯಗಳ ವೈಭವೀಕರಣ ಎಷ್ಟು ಸರಿ? ಸಂಜಯ್ ಅವರನ್ನು ಸಾಚಾ ಎಂದು ತೋರಿಸಲು ಅವರ ಪರ ಪ್ರಚಾರಕ್ಕಾಗಿ ಈ ಚಿತ್ರವನ್ನು ಬಳಸಿದ್ದು ಸರಿಯೇ ಎಂದು ಕೇಳಲಾಗಿದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications