ಕೊರೊನಾ 2ನೇ ಅಲೆಯಲ್ಲಿ ಭೀಕರ ಪರಿಸ್ಥಿತಿ ಕಂಡಿದ್ದ ಮಹಾರಾಷ್ಟ್ರದಲ್ಲಿ ಹೇಗಿದೆ ಚಿತ್ರಣ?

ಮುಂಬೈ, ಆಗಸ್ಟ್‌ 24: ಕೊರೊನಾ ಎರಡನೇ ಅಲೆಯಲ್ಲಿ ಭೀಕರ ಪರಿಸ್ಥಿತಿಯನ್ನು ಕಂಡಿದ್ದ ಮಹಾರಾಷ್ಟ್ರ ಇದೀಗ ಸಂಭಾವ್ಯ ಮೂರನೇ ಅಲೆ ನಿರ್ವಹಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಹೇಳಿದೆ.

ಇದೇ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಸೂಚನೆಯನ್ನು ತಜ್ಞರು ನೀಡಿದ್ದು, ಮೂರನೇ ಅಲೆ ನಿರ್ವಹಣೆ ಸಂಬಂಧ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಸೋಮವಾರ ಮಹಾರಾಷ್ಟ್ರದಲ್ಲಿ 3643 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಡೆಲ್ಟಾ ಪ್ಲಸ್ ರೂಪಾಂತರದ 27 ಪ್ರಕರಣಗಳು ಪತ್ತೆಯಾಗಿವೆ. ಈ ಹೊಸ ರೂಪಾಂತರ ಆತಂಕಕ್ಕೆ ಎಡೆಮಾಡಿಕೊಟ್ಟಿದ್ದು, ಮೂರನೇ ಅಲೆ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ.

Ready To Deal With Possible 3rd Covid-19 Wave Says Maharashtra

'ಎಲ್ಲಾ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಸಿಬ್ಬಂದಿಯ ನೇಮಕ ಮಾಡಿಕೊಳ್ಳಲಾಗಿದೆ. ವೈದ್ಯಕೀಯ ಆಮ್ಲಜನಕದ ವ್ಯವಸ್ಥೆಯನ್ನೂ ಮಾಡಲಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾದರೆ, ಅಗತ್ಯ ಔಷಧಗಳ ಸಂಗ್ರಹಣೆ ಮಾಡಿಕೊಳ್ಳಲಾಗಿದೆ' ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪ್ ಮಾಹಿತಿ ನೀಡಿದ್ದಾರೆ. ಸಂಭಾವ್ಯ ಮೂರನೇ ಅಲೆಯ ಸವಾಲುಗಳನ್ನು ಎದುರಿಸಲು ರಾಜ್ಯ ಸಂಪೂರ್ಣ ತಯಾರಿಯಲ್ಲಿದೆ ಎಂದು ಹೇಳಿದ್ದಾರೆ.

ಸಂಭಾವ್ಯ ಕೊರೊನಾ ಮೂರನೇ ಅಲೆಯಲ್ಲಿ ರಾಷ್ಟ್ರಾದ್ಯಂತ ದಿನನಿತ್ಯ 4,00,000 ದಿಂದ 5,00,000ವರೆಗೂ ಕೊರೊನಾ ಪ್ರಕರಣಗಳು ದಾಖಲಾಗುವುದಾಗಿ ಅಂದಾಜಿಸಲಾಗಿದೆ. ದಿನಕ್ಕೆ ಸುಮಾರು ಎರಡು ಲಕ್ಷದಷ್ಟು ಐಸಿಯು ಬೆಡ್‌ಗಳ ಅವಶ್ಯಕತೆ ಬರಬಹುದು. ಸೋಂಕಿನಿಂದ ಆಸ್ಪತ್ರೆ ಸೇರುವವರ ಪ್ರಮಾಣ 23% ಏರಿಕೆಯಾಗುವುದು ಎಂದು ನೀತಿ ಆಯೋಗ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್: ಈಚೆಗೆ ಪತ್ತೆಯಾಗಿರುವ ಹೊಸ ಕೊರೊನಾ ರೂಪಾಂತರ 'ಡೆಲ್ಟಾ ಪ್ಲಸ್' ಪ್ರಕರಣಗಳು ಮಹಾರಾಷ್ಟ್ರದಲ್ಲಿ ಹೆಚ್ಚಾಗಿದೆ. ಮಹಾರಾಷ್ಟ್ರವೊಂದರಲ್ಲೇ 103 ಡೆಲ್ಟಾ ಪ್ಲಸ್ ಪ್ರಕರಣಗಳಿದ್ದು, ಮೂರನೇ ಅಲೆಗೆ ಇದು ಪ್ರಚೋದನೆಯಾಗಬಹುದಾದ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಆದರೆ ಈ ಸೋಂಕಿನ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ಇದು ಹರಡದಂತೆ ಹಲವು ಕ್ರಮಗಳನ್ನು, ಪತ್ತೆ ಕಾರ್ಯವನ್ನು ಸಮರ್ಥವಾಗಿ ಕೈಗೊಳ್ಳಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಸೋಮವಾರ ಪತ್ತೆಯಾದ 27 ಡೆಲ್ಟಾ ಪ್ಲಸ್ ಪ್ರಕರಣಗಳಲ್ಲಿ ತಲಾ ಆರು ಪ್ರಕರಣಗಳು ಅಮರಾವತಿ ಹಾಗೂ ಗಡ್ಚಿರೋಲಿ, ನಾಗಪುರದಿಂದ ಐದು, ಅಹ್ಮದಾನಗರದಿಂದ ನಾಲ್ಕು, ಯವತ್ಮಾಲ್‌ನಿಂದ ಮೂರು, ನಾಸಿಕ್ ಹಾಗು ಭಂಡಾರದಿಂದ ತಲಾ ಎರಡೆರಡು ಪ್ರಕರಣಗಳು ದಾಖಲಾಗಿವೆ.

Ready To Deal With Possible 3rd Covid-19 Wave Says Maharashtra

ಮಹಾರಾಷ್ಟ್ರದ ನಗರಗಳಲ್ಲಿ ಸೋಂಕಿನ ಪ್ರಮಾಣ
ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಸೋಮವಾರ 225 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಮುಂಬೈನಲ್ಲಿ ಇದುವರೆಗೂ ಒಟ್ಟು 15,951 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಇದುವರೆಗೂ 136067 ಮಂದಿ ಸೋಂಕಿಗೆ ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಒಟ್ಟಾರೆ 6428294 ಮಂದಿಗೆ ಸೋಂಕು ತಗುಲಿದ್ದು, ಸದ್ಯ 49,924 ಸಕ್ರಿಯ ಪ್ರಕರಣಗಳಿವೆ.

ಪುಣೆಯಲ್ಲಿ 11,746 ಸಕ್ರಿಯ ಪ್ರಕರಣಗಳಿದ್ದು, ಪುಣೆ ನಂತರ ಥಾಣೆ 6942 ಹಾಗೂ ಸತಾರಾದಲ್ಲಿ 5800 ಸಕ್ರಿಯ ಪ್ರಕರಣಗಳಿವೆ. ಪುಣೆಯಲ್ಲಿ ಇದುವರೆಗೂ 18,864 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಕೊರೊನಾ ಮೂರನೇ ಅಲೆ ಕುರಿತು ಈಚೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ವರದಿ ಸಲ್ಲಿಸಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ, ಅಕ್ಟೋಬರ್‌ನಲ್ಲಿ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೆ ಹೋಗುವ ಎಚ್ಚರಿಕೆ ನೀಡಿದೆ.

ಈ ಅಲೆಯಲ್ಲಿ ವಯಸ್ಕರ ಜೊತೆ ಮಕ್ಕಳು ಸಹ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಅಗತ್ಯ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ವರದಿಯಲ್ಲಿ ತಜ್ಞರ ಸಮಿತಿ ಸಲಹೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+