ಮೀಟೂ ಅಭಿಯಾನ : ಸಲ್ಮಾನ್ ವಿರುದ್ಧ ಅತ್ಯಾಚಾರ ಆರೋಪ
Recommended Video

ಮುಂಬೈ, ಅಕ್ಟೋಬರ್ 16 : #MeToo ಅಭಿಯಾನ ಈಗ ಬಾಲಿವುಡ್ ನಟ ಸಲ್ಮಾನ್ ಖಾನ್ ತನಕ ಬಂದು ತಲುಪಿದೆ. ಮಾಡೆಲ್ ಮತ್ತು ಹಿಂದಿ ಬಿಗ್ ಬಾಸ್‌ನ ಮಾಜಿ ಕಂಟೆಸ್ಟೆಂಟ್ ಪೂಜಾಮಿಶ್ರಾ ಸಲ್ಮಾನ್ ಖಾನ್ ಮತ್ತು ಅವರ ಸಹೋದರನ ವಿರುದ್ದ ಆರೋಪ ಮಾಡಿದ್ದಾರೆ.
ಪೂಜಾಮಿಶ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಸುಲ್ತಾನ್ ಚಿತ್ರೀಕರಣದ ಸಮುದಲ್ಲಿ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ಆಗ ಸಲ್ಮಾನ್ ಮತ್ತು ಆತನ ಸಹೋದರ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿದ್ದಾರೆ.
ಸಲ್ಮಾನ್ ಖಾನ್ ಮಾತ್ರವಲ್ಲ ಹಿರಿಯ ನಟ ಶತ್ರುಘ್ನ ಸಿನ್ಹಾ ನನ್ನ ಮೇಲೆ ವಶೀಕರಣ ಮಾಡಿಸಿದ್ದಾರೆ. ನನ್ನ ಲ್ಯಾಪ್ ಟಾಪ್ ಮತ್ತು ಮೊಬೈಲ್ ಹ್ಯಾಕ್ ಮಾಡಿಸಿ ನನ್ನ ಐಡಿಯಾಗಳನ್ನು ಕದ್ದು ಸೋನಾಕ್ಷಿ ಸಿನ್ಹಾರನ್ನು ಬೆಳೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಟ ಸಲ್ಮಾನ್ ಖಾನ್, ಅರ್ಬಜ್ ಮತ್ತು ಸೋಹಾಲಿ ನನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಾರೆ. ಒಮ್ಮೆ ರೂಮ್ ಒಂದರಲ್ಲಿ ನನ್ನ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.












Click it and Unblock the Notifications