ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಸಬ್ ಮೆರಿನ್ ಲೋಕಾರ್ಪಣೆ
ಮುಂಬೈ, ಡಿಸೆಂಬರ್ 14: "ಸಾಗರಕ್ಕೆ ನಾನು ಬೇರೆಯದೇ ಅರ್ಥ ನೀಡುತ್ತೇನೆ. S.A.G.A.R. ಅಂದರೆ security and growth for all in the region (ಎಲ್ಲರಿಗೂ ಭದ್ರತೆ ಮತ್ತು ಅಭಿವೃದ್ಧಿ ಕಲ್ಪಿಸುವುದು)" ಎಂದು ಪ್ರಧಾನಿ ನರೇಂದ್ರ ಮೋದಿ ಮಾರ್ಮಿಕವಾಗಿ ಮಾತನಾಡಿದರು.
ಮೊಟ್ಟಮೊದಲ ಮೇಡ್ ಇನ್ ಇಂಡಿಯಾ ಸಬ್ ಮರಿನ್ ಐಎನ್ ಎಸ್ ಕಲ್ವಾರಿಯನ್ನು ಮುಂಬೈಯ ನೌಕಾನೆಲೆಯಲ್ಲಿ ಇಂದು (ಡಿ.14) ಲೋಕಾರ್ಪಣೆಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರು. ಕಾರ್ಯಕ್ರಮಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಜರಿದ್ದರು.

'ಸಾಗರದ ಮೂಲಕ ಭಯೋತ್ಪಾದನೆ, ಕಡಲ್ಗಳ್ಳತನ ಮತ್ತು ಕಳ್ಳಸಾಗಣೆ, ಅಕ್ರಮ ಮೀನುಗಾರಿಕೆ ಇತ್ಯಾದಿ ಎಲ್ಲವುಗಳ ನಿರ್ಮೂಲನೆಗೂ ಭಾರತ ಶ್ರಮಿಸುತ್ತಿದೆ' ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದರು.
'ಭಾರತ ಭಯೋತ್ಪಾದನೆಯ ನಿಯಂತ್ರಣಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ 200ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆಮಾಡಲಾಗಿದೆ. ಇಲ್ಲಿ ಕಲ್ಲುತೂರಾಟದ ಪ್ರಕರಣಗಳೂ ಕಡಿಮೆಯಾಗಿವೆ' ಎಂದು ಭಾರತೀಯ ಸೇನೆಯ ಕಾರ್ಯವನ್ನು ಶ್ಲಾಘಿಸಿದರು.
#WATCH: PM Modi dedicates INS Kalvari to the nation in Mumbai https://t.co/UV51XxM275
— ANI (@ANI) December 14, 2017
ನೌಕಾಪಡೆಗೆ ಈ ಸಬ್ ಮೆರಿನ್ ಸೇರಿರುವುದು ಭಾರತೀಯ ಭದ್ರತಾ ಕ್ಷೇತ್ರದ ಮೈಲಿಗಲ್ಲು ಎನ್ನಿಸಿದೆ.
ಭಾರತದಲ್ಲಿ ಈಗ ಕೇವಲ 15 ಸಬ್ ಮೆರಿನ್ ಗಳಷ್ಟೇ ಇದ್ದು, ಚೀನಾ ಬಳಿ ಭಾರತಕ್ಕಿಂತ ನಾಲ್ಕು ಪಟ್ಟು ಹೆಚ್ಚು ಸಬ್ ಮೆರಿನ್ ಗಳಿವೆ. 2020 ರ ಹೊತ್ತಿಗೆ 5 ಹೆಚ್ಚುವರಿ ಸಬ್ ಮೆರಿನ್ ಗಳನ್ನು ನೌಕಾಪಡೆಗೆ ಅರ್ಪಿಸಲು ಯೋಜನೆ ಹಾಕಲಾಗಿದೆ.












Click it and Unblock the Notifications