ಗ್ಯಾಸ್ ಸೋರಿಕೆಯಾಗಿಲ್ಲ; ನಿಟ್ಟುಸಿರು ಬಿಟ್ಟ ಮುಂಬೈ ಜನರು
ಮುಂಬೈ, ಜೂನ್ 07 : ಮುಂಬೈ ನಗರದಲ್ಲಿ ಗ್ಯಾಸ್ ಸೋರಿಕೆಯಾಗಿಲ್ಲ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶನಿವಾರ ರಾತ್ರಿಯಿಂದ ನಗರದಲ್ಲಿ ಕೆಟ್ಟ ವಾಸನೆ ಅನುಭವಕ್ಕೆ ಬಂದಿದ್ದು ಜನರು ಗ್ಯಾಸ್ ಸೋರಿಕೆ ಆಗಿದೆ ಎಂದು ಮಹಾನಗರ ಪಾಲಿಕೆಗೆ ದೂರುಗಳನ್ನು ಸಲ್ಲಿಸಿದ್ದರು.
Recommended Video
ಚೆಂಬೂರು, ಘಾಟ್‌ಕೋಪರ್, ಕಾಂಜೂರ್ ಮಾರ್ಗ್, ವಿಕ್ರೋಲಿ, ಅಂಧೇರಿ ಸೇರಿದಂತೆ ವಿವಿಧ ಪ್ರದೇಶಗಳ ಜನರು ಕೆಟ್ಟ ವಾಸನೆ ಬಗ್ಗೆ ಮುಂಬೈ ಮಹಾನಗರ ಪಾಲಿಕೆಗೆ ದೂರು ನೀಡಿದ್ದರು. ಗ್ಯಾಸ್ ಸೋರಿಕೆ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.
ಮುಂಬೈ ಮಹಾನಗರ ಪಾಲಿಕೆ 17 ಅಗ್ನಿ ಶಾಮಕ ದಳಗಳನ್ನು ಗ್ಯಾಸ್ ಸೋರಿಕೆ ಪತ್ತೆ ಮಾಡಲು ನಿಯೋಜನೆ ಮಾಡಿತ್ತು. ಭಾನುವಾರ ಮಧ್ಯಾಹ್ನದ ತನಕ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಗ್ಯಾಸ್ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಧೈರ್ಯದಿಂದ ಇರುವಂತೆ ಜನರಿಗೆ ಮುಂಬೈ ಮಹಾನಗರ ಪಾಲಿಕೆ ಹೇಳಿದ್ದು, ಹೆಚ್ಚು ವಾಸನೆ ಇರುವ ಪ್ರದೇಶಗಳಲ್ಲಿ ಜನರು ಒದ್ದೆ ಬಟ್ಟೆ ಅಥವ ಕರವಸ್ತ್ರಗಳನ್ನು ಮೂಗಿಗೆ ಕಟ್ಟಿಕೊಳ್ಳುವಂತೆ ಸಲಹೆ ನೀಡಿದೆ. ವಾಸನೆಯ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ಗ್ಯಾಸ್ ಸೋರಿಕೆಯಾಗಿಲ್ಲ ಜನರು ಆತಂಕಗೊಳ್ಳುವುದು ಬೇಡ ಎಂದು ಅಗ್ನಿ ಶಾಮಕ ದಳದ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ.
परिस्थिती नियंत्रणात असून आवश्यक ती सर्व संसाधने उपलब्ध करण्यात आली आहेत. या वासाचा उगम शोधण्यात येत असून एकूण १७ अग्निशमन संयंत्रे तैनात आहेत. सार्वजनिक उद्घोषणा करण्यासह गरज भासल्यास प्रतिसाद देणारी कृती करण्यास यंत्रणा सज्ज आहे. #BMCUpdates https://t.co/gu77xckscc
— माझी Mumbai, आपली BMC (@mybmc) June 6, 2020












Click it and Unblock the Notifications