ಬಕ್ರೀದ್ 'ಕುರ್ಬಾನಿ' ಬೆಲೆ ಕಾರಿಗಿಂತ ಜಾಸ್ತಿ

ಬೆಂಗಳೂರು, ಅ.16: ಈದ್ ಉಲ್ ಅದಾ ಬಕ್ರಿ ಈದ್ ಅಂಗವಾಗಿ ಬಲಿ ಕೊಡುವ ಪ್ರಾಣಿಗಳ ಬೆಲೆ ಕಾರಿಗಿಂತ ಜಾಸ್ತಿಯಾಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಬೆಂಗಳೂರಲ್ಲಿ ಬಲಿ ಪ್ರಾಣಿ ಬೆಲೆ ಒಂದೆರಡು ಲಕ್ಷಗಳಲ್ಲಿ ಇದ್ದರೆ, ಪಾಕಿಸ್ತಾನದಲ್ಲಿ ಇವುಗಳ ಬೆಲೆ ಹತ್ತು ಹದಿನೈದು ಲಕ್ಷ ರು ದಾಟಿದೆ. ಅನೇಕ ಮನೆಗಳಲ್ಲಿ ಪ್ರೀತಿಯಿಂದ ಸಾಕಿಕೊಂಡಿದ್ದ ಪ್ರಾಣಿಗಳು ಕಳುವಾಗಿರುವ ವರದಿಯೂ ಬಂದಿದೆ. ಲಾಹೋರ್ ನಲ್ಲಿ ಕ್ರಿಕೆಟರ್ ಇಮ್ರಾನ್ ಫರ್ಹಾತ್ 1 ಲಕ್ಷ ರು ಬೆಲೆ ತೆತ್ತು ತಂದ ಈದ್ ಮೇಕೆಗಳನ್ನು ನಿನ್ನೆ ರಾತ್ರಿ ಯಾರೋ ಕದ್ದಿದ್ದಾರಂತೆ.

ಕುರ್ಬಾನಿಗಾಗಿ ಖರೀದಿಸುವ ಪ್ರಾಣಿಯ ಬೆಲೆ ಕನಿಷ್ಠ 20 ಸಾವಿರದಿಂದ 16 ಲಕ್ಷದವರೆಗೂ ಇತ್ತು. ಪಾಕಿಸ್ತಾನದಲ್ಲಿ 7 ಲಕ್ಷವಿದ್ದರೆ ಹೊಸ ಕಾರನ್ನೇ ಖರೀದಿಸಬಹುದು. ಅಂಥದ್ದರಲ್ಲಿ ಈ ಇಷ್ಟೊಂದು ಹಣ ತೆತ್ತು ಪ್ರಾಣಿಗಳ ಬಲಿ ಕೊಡುವುದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕನಸಿನ ಮಾತಾಗಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಾಣಿಗಳ ಬೆಲೆ ಗಗನಕ್ಕೇರಿದೆ.

'ಕುರ್ಬಾನಿ ಆನ್ಲೈನ್' ಸೇರಿದಂತೆ ಅನೇಕ ವೆಬ್ ಸೈಟ್ ಗಳು ಆನ್ ಲೈನ್ ಮೂಲಕ ಈದ್ ಮೇಕೆ ಖರೀದಿಸುವ ಅವಕಾಶ ಕಲ್ಪಿಸಿವೆ. ಕಟುಕರಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ಮೇಕೆ ಕಡಿಯಲು 2000 ರು ನಿಂದ 4500 ರು, ಹಸು ಕಡಿಯಲು 5000 ರು ನಿಂದ 10000 ರು ಹಾಗೂ ಒಂಟೆ ಬಲಿ ಹಾಕಲು 10,000 ರು ನಿಂದ 15,000 ರು ಪಡೆಯುತ್ತಿದ್ದಾರಂತೆ.

ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲ್ಹಾನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್ ಉಲ್ ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ. ಭಾರತದಲ್ಲಿ ಕುರ್ಬಾನಿಗಳ ಬೆಲೆ ಹೇಗಿದೆ ಮುಂದೆ ಓದಿ...

ಮುಂಬೈನಲ್ಲಿ

ಮುಂಬೈನಲ್ಲಿ

ಹಬ್ಬದ ಅಂಗವಾಗಿ ಸಿಹಿ ಪದಾರ್ಥಗಳ ಜತೆಗೆ ಗೋವು, ಕುರಿ, ಮೇಕೆ ಅಥವಾ ಒಂಟೆಗಳ ಖಾದ್ಯ ತಯಾರಿಸಿ ಎಲ್ಲರಿಗೂ ಹಂಚಿ ತಿನ್ನಲಾಗುತ್ತದೆ.

ದೆಹಲಿಯಲ್ಲಿ

ದೆಹಲಿಯಲ್ಲಿ

ದೆಹಲಿಯ ಜಮಾ ಮಸೀದಿಯ ಬಳಿ ಮೀನಾ ಬಜಾರಿನಲ್ಲಿ ಬಕ್ರಾಗಳು ಭರ್ಜರಿಯಾಗಿ ಮಾರಾಟವಾಗಿವೆ.

ಹೈದರಾಬಾದಿನಲ್ಲಿ

ಹೈದರಾಬಾದಿನಲ್ಲಿ

ಹೈದರಾಬಾದಿನಲ್ಲಿ ತೆಲಂಗಾಣ ರಚನೆ ವಿರೋಧಿ ಗಲಭೆ, ಗೊಂದಲ ಬದಿಗೊತ್ತಿ ಬಕ್ರೀದ್ ಹಬ್ಬದ ಸಂಭ್ರಮದಲ್ಲಿ ಮುಸ್ಲಿಂ ಬಾಂಧವರು ತೊಡಗಿದ್ದಾರೆ. ತೋಲಿ ಚೌಕಿಯಲ್ಲಿ ಭಾನುವಾರದಿಂದಲೇ ಕುರ್ಬಾನಿ ಪ್ರಾಣಿಗಳ ಮಾರಾಟ ನಡೆದಿತ್ತು.

ಕುರಿಗಳಿಗೆ ಬೇಡಿಕೆ

ಕುರಿಗಳಿಗೆ ಬೇಡಿಕೆ

ಮೇಕೆಗಳಿಗಿಂತ ದಷ್ಟಪುಷ್ಟವಾದ ಕುರಿಗಳಿಗೆ ಈ ಬಾರಿ ಎಲ್ಲೆಡೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ.

ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ

ಚಾಮ­ರಾಜಪೇಟೆಯ ಈದ್ಗಾ ಮೈದಾ­ನದ 'ಕುರಿ ಸಂತೆ'ಯಲ್ಲಿ ಬರೋಬ್ಬರಿ 50 ಕೆ.ಜಿ ತೂಕದ ಬಂಡೂರು ಕುರಿ ರೂ 2.50 ಲಕ್ಷ ರೂಪಾಯಿಗೆ ಬಿಕರಿಯಾಗಿದೆ. ಟಿ ನರಸೀಪುರದ ಚಂದ್ರಪ್ಪ ಎಂಬುವರ ಬಳಿ ಇದ್ದ ಈ ಭಾರಿ ಬೆಲೆಯ ಕುರಿಯನ್ನು ಅಲಂ ಪಾಷಾ ಎಂಬುವರು ಖರೀದಿಸಿದ್ದಾರೆ.

ವಿಜಾಪುರ, ಮಂಡ್ಯ, ಮದ್ದೂರು, ಚಾಮರಾಜನಗರ, ಹೊಸಕೋಟೆ, ಗೌರಿ­ಬಿದನೂರು, ರಾಮನಗರ, ಕೋಲಾರ ಅಲ್ಲದೇ ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ಹಲವು ಭಾಗಗಳಿಂದ ಕುರಿ ಸಾಕಾಣೆದಾರರು, ಮಾರಾಟಗಾರರು ಬಂದಿದ್ದರು.

ಉಳಿದಂತೆ ಕಿರಿಗಾವು (50 ಸಾವಿರ ರು) ಆಂಧ್ರ ಮರಿ(80 ಸಾವಿರ ರು) ಕೊನ್ನೆರೆ (25 ಸಾವಿರ) ಕಪನಿ (37 ಸಾವಿರ), ಆಸ್ಟ್ರೇಲಿಯಾ (75 ಸಾವಿರ) ಹೆಸರಿನ ತಳಿಗಳು ಬೇಡಿಕೆ ಕಂಡಿವೆ.

ಮಹಾರಾಷ್ಟ್ರದಲ್ಲಿ

ಮಹಾರಾಷ್ಟ್ರದಲ್ಲಿ

ಮಹಾರಾಷ್ಟ್ರದ ಕರದ್ ನಲ್ಲಿ ಬಕ್ರಾಗಳ ಮಾರಾಟ ಜೋರಾಗಿ ನಡೆದಿದೆ.

ಕೊಯಮತ್ತೂರಿನಲ್ಲಿ

ಕೊಯಮತ್ತೂರಿನಲ್ಲಿ

ಕೊಯಮತ್ತೂರಿನ ಕೊಟೈಮೇಡು ಉಕ್ಕಡಂನ ಈಶ್ವರನ್ ದೇಗುಲ ರಸ್ತೆಯಲ್ಲಿ ಮೇಕೆಗಳು 8000 ರು ನಿಂದ 15,000 ರು ತನಕ ಮಾರಾಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+