ಯುವತಿ ತನ್ನ ಸ್ನೇಹಿತನ ಜತೆ ಸರಸ ಸಲ್ಲಾಪದಲ್ಲಿದ್ದಾಗ ಗಂಡ ಎಂಟ್ರಿಕೊಟ್ಟಾಗ...

ಮುಂಬೈ, ಜುಲೈ 12 : ಮನೆಯಲ್ಲಿ ಯಾರು ಇಲ್ಲದ ವೇಳೆ ಯುವತಿ ತನ್ನ ಸ್ನೇಹಿತನ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುತ್ತಾಳೆ. ಈ ವೇಳೆ ದಿಢೀರನೆ ಗಂಡ ಬಂದ್ರೆ ಹೇಗೆ? ಆ ಸಮಯದಲ್ಲಿ ಯುವತಿ ಗಂಡನಿಗೆ ಏನೆಂದು ಹೇಳುವಳು? ಗಂಡನಿಗೆ ತನ್ನ ಹೆಂಡತಿ ಬಗ್ಗೆ ಏನು ಅಂದುಕೊಂಡಿರಬಹುದು? ಮುಂದೆ ಓದಿ...

ಮನೆಯಲ್ಲಿ ಯಾರು ಇಲ್ಲದ ವೇಳೆ ಯುವತಿಯೋರ್ವಳು ತನ್ನ ಸ್ನೇಹಿತನ ಜತೆ ಮಂಚದ ಮೇಲೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಯುವತಿ ಗಂಡ ದಿಢೀರನೇ ಬಂದು ಬಿಟ್ಟಿದ್ದಾನೆ. ಗಂಡನನ್ನು ಕಂಡ ಯುವತಿ ಹೌಹಾರಿ ಏನ್ಮಾಡ್ಬೇಕು ಎನ್ನುವುದು ತೋಚದೆ ತನ್ನ ಸ್ನೇಹಿತನ ಮೇಲೆ ಅತ್ಯಾಚಾರ ಆರೋಪ ಮಾಡಿದ್ದಾಳೆ.

Mumbai: Woman alleges rape after her husband finds her 'friend' in their bed

ಈ ಘಟನೆ ಮುಂಬೈನಲ್ಲಿ ನಡೆದಿದೆ. 30 ವರ್ಷದ ಗೃಹಿಣಿ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರು ಸರಸವಾಡುತ್ತಿದ್ದ ಸಂದರ್ಭದಲ್ಲಿ ಗಂಡ ಮನೆಗೆ ಬಂದಿದ್ದಾನೆ. ಇದರಿಂದ ಗಾಬರಿಗೊಂಡ ಆಕೆ ಸ್ನೇಹಿತನ ಮೇಲೆ ಅತ್ಯಾಚಾರ ಆರೋಪ ಮಾಡಿದ್ದಾಳೆ.

ಈ ಪ್ರಕರಣ ಸಂಬಂಧ ಪೊಲೀಸರು ನೆರೆಮನೆಯವರ ಬಳಿ ಹೇಳಿಕೆಯನ್ನು ತೆಗೆದುಕೊಂಡಿದ್ದು ಆಕೆಗೂ ಆತನಿಗೂ ಪರಿಚಯವಿತ್ತು, ಆತ ಪದೇ ಪದೇ ಮನೆಗೆ ಬಂದು ಹೋಗುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಕೆಲಸ ನಿಮಿತ್ತ ಗಂಡ ಮನೆಯಿಂದ ಹೊರಗೆ ಹೋಗಿದ್ದ. ಸ್ವಲ್ಪ ಸಮಯದಲ್ಲಿ ಆತ ಕೆಲ ವಸ್ತುವನ್ನು ಮನೆಯಲ್ಲಿ ಮರೆತು ಬಂದಿರುವುದು ನೆನಪು ಮಾಡಿಕೊಂಡು ತೆಗೆದುಕೊಂಡು ಹೋಗಲು ಮನೆಗೆ ಬಂದಿದ್ದಾನೆ. ಆಗ ತನ್ನ ಬೆಡ್ ರೂಮ್ ನಲ್ಲಿ ಅಪರಿಚಿತನನ್ನು ಕಂಡಿದ್ದಾನೆ.

ಈ ವೇಳೆ ಪತ್ನಿ ಜೋರಾಗಿ ಕೂಗಿಕೊಂಡಿದ್ದು, ಗಂಡ ಆತನನ್ನು ಹಿಡಿದು ಪತಿ ಥಳಿಸಿದ್ದಾನೆ. ಆತನಿಂದ ಬಿಡಿಸಿಕೊಂಡ ಪತ್ನಿಯ ಸ್ನೇಹಿತ ಅಲ್ಲಿಂದ ಎದ್ನೋ ಬಿದ್ನೋ ಅಂತ ಓಡಿ ಹೋಗಿದ್ದಾನೆ.

ಈ ಘಟನೆ ಕುರಿತಂತೆ ಗೃಹಿಣಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಆ ವ್ಯಕ್ತಿ ಮನೆಯೊಳಗೆ ಪ್ರವೇಶಿಸಿ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿದ್ದು, ಪೊಲೀಸರು ಆತನ ವಿರುದ್ಧ 376ರ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+