ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಧಾರಾಕಾರ ಮಳೆ, ಶಾಲಾ-ಕಾಲೇಜುಗಳಿಗೆ ರಜೆ

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಆಗಸ್ಟ್ 30 : ಧಾರಾಕಾರ ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿ ಹೋಗಿದೆ. ಇಂದು ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂಬೈ ನಗರದಲ್ಲಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

Recommended Video

Mumbai Rain :Schools Colleges Shut Today | Oneindia Kannada

ಇನ್ನೂ ಭಾರೀ ಮಳೆ ಸುರಿಯಲಿದೆಯಂತೆ, ಮುಂಬೈ ಎಚ್ಚರ!ಇನ್ನೂ ಭಾರೀ ಮಳೆ ಸುರಿಯಲಿದೆಯಂತೆ, ಮುಂಬೈ ಎಚ್ಚರ!

ಮೇಲ್ಮೈ ಸುಳಿಗಾಳಿಯಿಂದಾಗಿ ಮಳೆ ಸುರಿಯುತ್ತಿದ್ದು, ಮುಂಬೈ ನಗರದಲ್ಲಿನ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಇಂದು ಮಧ್ಯಾಹ್ನದ ವೇಳೆಗೆ ಸುಳಿಗಾಳಿ ಗುಜರಾತ್ ಕಡೆ ಸಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದ್ದರಿಂದ, ಬುಧವಾರ ಸಂಜೆಯ ತನಕ ಭಾರೀ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.

Mumbai rains : Schools shut, offices closed as heavy downpour to continue today

ಮಹಾರಾಷ್ಟ್ರ ಸರ್ಕಾರ ಮುಂಬೈ ನಗರದ ಎಲ್ಲಾ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಣೆ ಮಾಡಿದೆ. 'ತುರ್ತು ಕೆಲಸಗಳು ಇಲ್ಲವಾದಲ್ಲಿ ಮನೆಯಲ್ಲಿಯೇ ಇರುವಂತೆ' ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜನರಿಗೆ ಮನವಿ ಮಾಡಿದ್ದಾರೆ.

ಮುಂಬೈ ಮಹಾನಗರದಲ್ಲಿ ಮಳೆ, ಸಹಾಯವಾಣಿ ಸಂಖ್ಯೆಗಳುಮುಂಬೈ ಮಹಾನಗರದಲ್ಲಿ ಮಳೆ, ಸಹಾಯವಾಣಿ ಸಂಖ್ಯೆಗಳು

'ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಮನೆಯಲ್ಲಿಯೇ ಇರುವಂತೆ' ಶಿಕ್ಷಣ ಸಚಿವ ವಿನೋದ್ ಥಾವಡೆ ಮನವಿ ಮಾಡಿದ್ದಾರೆ. ಮುಂಬೈ ವಿಶ್ವವಿದ್ಯಾನಿಲಯ ಆಗಸ್ಟ್ 30ರಂದು ರಜೆ ಘೋಷಣೆ ಮಾಡಿದೆ.

'ಹವಾಮಾನ ಇಲಾಖೆ ಇಂದು ಸಹ ಮಳೆ ಸುರಿಯಲಿದೆ ಎಂದು ಹೇಳಿದೆ. ಆದ್ದರಿಂದ, ಬುಧವಾರ ವಿಶ್ವವಿದ್ಯಾಲಯಕ್ಕೆ ರಜೆ ನೀಡಲಾಗಿದೆ. ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು' ವಿಶ್ವವಿದ್ಯಾಲಯ ಪ್ರಕಟಣೆ ಹೇಳಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಎಲ್ಲಾ ಇಲಾಖೆಗಳ ಸಭೆ ಕರೆದಿದ್ದಾರೆ. ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

English summary
All educational institutions will remain shut due to the Mumbai rains. Heavy downpour will continue today, the met department has warned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X