ಸುಶಾಂತ್ ಸಿಂಗ್ ಆತ್ಮಹತ್ಯೆ: ಯಶ್ ರಾಜ್ ಫಿಲಂಸ್ ಮೇಲೆ ಪೊಲೀಸರ ಕಣ್ಣು
ಮುಂಬೈ, ಜೂನ್ 19: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಬಾಲಿವುಡ್ ಇಂಡಸ್ಟ್ರಿಯನ್ನು ಬೇಟೆಯಾಡುವ ಸೂಚನೆ ನೀಡಿದ್ದಾರೆ.
ಈ ಕೇಸ್‌ಗೆ ಸಂಬಂಧಿಸಿದಂತೆ ಈಗಾಗಲೇ ಸುಶಾಂತ್ ಸಿಂಗ್ ಅವರ ಕುಟುಂಬದ ಸದಸ್ಯರು, ಸುಶಾಂತ್ ಅವರ ಸ್ನೇಹಿತ ಹಾಗೂ ಕಾಸ್ಟಿಂಗ್ ನಿರ್ದೇಶಕ ಮುಖೇಶ್, ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ 13 ಜನರ ವಿಚಾರಣೆ ನಡೆಸಿದ್ದಾರೆ.
ರಿಯಾ ಚಕ್ರವರ್ತಿ ವಿಚಾರಣೆಗೆ ಹಾಜರಾಗಿ ಹೋದ ಮೇಲೆ ಪೊಲೀಸರು ಮುಂದಿನ ಟಾರ್ಗೆಟ್ ಬಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್. ರಿಯಾ ಅವರು ಪೊಲೀಸರ ಬಳಿ ನೀಡಿರುವ ಹೇಳಿಕೆಯಲ್ಲೂ ಯಶ್ ರಾಜ್ ಫಿಲಂಸ್ ಕುರಿತು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇದೀಗ, ಯಶ್ ರಾಜ್ ಸಂಸ್ಥೆಗೆ ಮುಂಬೈ ಪೊಲೀಸರು ಪತ್ರದ ಮೂಲಕ ವಿವರಣೆ ಕೇಳಿದ್ದಾರೆ. ಮುಂದೆ ಓದಿ...

ಯಶ್ ರಾಜ್ ಸಂಸ್ಥೆಗೆ ವಿವರ ಕೇಳಿದ ಪೊಲೀಸರು
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ಮಾಡುತ್ತಿರುವ ಪೊಲೀಸರು ಈಗ ಬಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಗೆ ಪತ್ರವೊಂದನ್ನು ಕಳುಹಿಸಿದ್ದು, 'ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ವಿವರಗಳನ್ನು ನೀಡಿ' ಎಂದು ಶುಕ್ರವಾರ ಕೇಳಿದ್ದಾರೆ.

ರಿಯಾ ಹೇಳಿಕೆ ಬಳಿಕ ವಿವರ ಕೇಳಿದ ಪೊಲೀಸರು
ಗುರುವಾರ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ, ''ಯಶ್ ರಾಜ್ ಫಿಲಂಸ್ ಜೊತೆ ಸುಶಾಂತ್ ಒಪ್ಪಂದ ಕಡಿದುಕೊಂಡಿದ್ದರು, ನನಗೂ ಸಹ ಒಪ್ಪಂದ ಕೈಬಿಡುವಂತೆ ಹೇಳಿದ್ದರು'' ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಹಿನ್ನೆಲೆ ಪೊಲೀಸರು ಯಶ್ ರಾಜ್ ಸಂಸ್ಥಗೆ ವಿವರಣೆ ಕೇಳಿದ್ದಾರೆ.

ಖ್ಯಾತ ನಿರ್ಮಾಣ ಸಂಸ್ಥೆಗಳ ವಿಚಾರಣೆ ಸಾಧ್ಯತೆ
ಸುಶಾಂತ್ ಅವರ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ ಕುಟುಂಬ, ಗೆಳತಿ ಹಾಗೂ ಸ್ನೇಹಿತರ ವಿಚಾರಣೆ ಮಾಡಿರುವ ಪೊಲೀಸರು, ವೃತ್ತಿಯ ದೃಷ್ಟಿಕೋನದಿಂದ ಅವರ ಜೊತೆ ಕೆಲಸ ಮಾಡಿದ ಖ್ಯಾತ ನಿರ್ಮಾಣ ಸಂಸ್ಥೆಗಳನ್ನು ವಿಚಾರಣೆಗೆ ಒಳಪಡಿಸುವ ಎಲ್ಲ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯಶ್ ರಾಜ್ ಫಿಲಂಸ್‌ಗೆ ವಿವರ ಕೇಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೂರನೇ ಪ್ರಾಜೆಕ್ಟ್ ರದ್ದು
ಯಶ್ ರಾಜ್ ಬ್ಯಾನರ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಎರಡು ಸಿನಿಮಾ ಮಾಡಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ 'ಶುದ್ಧ ದೇಸಿ ರೋಮ್ಯಾನ್ಸ್' (2013) ಮತ್ತು ನಿರ್ದೇಶಕ ದಿಬಕರ್ ಬ್ಯಾನರ್ಜಿ ನಿರ್ದೇಶನದ 'ಡಿಟೆಕ್ಟಿವ್ ಬಯೋಮಕೇಶ್ ಬಕ್ಷಿ' (2015) ಚಿತ್ರದಲ್ಲಿ ನಟಿಸಿದ್ದರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಶೇಖರ್ ಕಪೂರ್ ನಿರ್ದೇಶನದ "ಪಾನಿ" ಚಿತ್ರದಲ್ಲಿ ಯಶ್ ರಾಜ್ ಸಂಸ್ಥೆ ಹಾಗೂ ಸುಶಾಂತ್ ಒಟ್ಟಿಗೆ ಕೆಲಸ ಮಾಡಬೇಕಿತ್ತು. ಆದರೆ, ಯಶ್ ರಾಜ್ ಫಿಲಂಸ್ ಈ ಸಿನಿಮಾದಿಂದ ಹಿಂದೆ ಸರಿದಿತ್ತು.












Click it and Unblock the Notifications