ಮುಂಬೈ: ಮಾಜಿ ರೂಪದರ್ಶಿ ಅನುಮಾನಾಸ್ಪದ ಸಾವು

ಮುಂಬೈ, ಅಕ್ಟೋಬರ್ 05: ಮಾಜಿ ರೂಪದರ್ಶಿ, ಫ್ಯಾಶನ್​ ​ಡಿಸೈನರ್​ಸುನೀತಾ ಸಿಂಗ್ (49) ಅವರ ಮೃತ ದೇಹವು ಅವರ ಫ್ಲ್ಯಾಟ್ ನಲ್ಲಿ ಸಿಕ್ಕಿದೆ.

ಲೋಖಂಡ್​ವಾಲಾದ ಅವರ ನಿವಾಸದಲ್ಲಿ ಗುರುವಾರದಂದು ವಾಷ್ ಬೇಸಿನ್ ಗೆ ತಲೆ ಬಡಿದು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ ಸುನೀತಾ ಸಿಂಗ್ ಅವರು ಮತ್ತೆ ಮೇಲಕ್ಕೆ ಏಳಲೇ ಇಲ್ಲ ಎಂದು ತಿಳಿದು ಬಂದಿದೆ.

ಸುನಿತಾ ಸಿಂಗ್​ಅವರ ಸಾವಿನ ಪ್ರಕರಣವನ್ನು ಶಂಕಾಸ್ಪದ ಸಾವು ಎಂದು ದಾಖಲಿಸಿಕೊಂಡಿರ ಪೊಲೀಸರು, ಆಕೆಯ ಪುತ್ರನನ್ನು ವಿಚಾರಣೆ ನಡೆಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಮೃತ ಮಹಿಳೆಯ ಪುತ್ರ ಲಕ್ಷ್ಯ ಸಿಂಗ್ (22) ಹಾಗೂ ಆತನ ಗೆಳತಿ ಆಯೇಷಾ ಪ್ರಿಯಾ (21) ಅವರು ಇದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸ್​ ಅಧಿಕಾರಿ ಹೇಳಿದ್ದಾರೆ.

Mumbai: Former model found dead in her Lokhandwala home

ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿನ ಕುರಿತು ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಸುನಿತಾ ಸಿಂಗ್​ಅವರ ತಲೆಗೆ ವಾಷ್ ಬೇಸಿನ್ ಬಡಿದಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಯತ್ನಿಸಲಾಯಿತು. ಆದರೆ, ಸುನೀತಾ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಲಕ್ಷ್ಯ ಸಿಂಗ್ ಹೇಳಿಕೆ ನೀಡಿದ್ದಾರೆ.

ಓಶಿವಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಪಶ್ಚಿಮ ವಲಯ ಎಸಿಪಿ ಮನೋಜ್ ಕುಮಾರ್ ಶರ್ಮ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+